ಪ್ರಮುಖ ಸುದ್ದಿ
ಹಿಂದೂ ಜಾಗರಣ ವೇದಿಕೆಯ ಜಗಧೀಶ ಕಾರಂತ್ ಗೆ ಜಾಮೀನು
ಮಂಗಳೂರು: ಸೆಪ್ಟೆಂಬರ್ 15 ರಂದು ಪುತ್ತೂರಿನಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಗ್ರಾಮಾಂತರ ಠಾಣೆಯ ಪಿಎಸ್ ಐ ಖಾದರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಹಿಂದೂ ಜಾಗರಣ ವೇದಿಕೆ ರಾಜ್ಯ ಸಂಚಾಲಕ ಜಗದೀಶ ಕಾರಂತ್ ವಿರುದ್ಧ ಕೇಸು ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಜಗಧೀಶ ಕಾರಂತ್ ತಲೆಮರೆಸಿಕೊಂಡಿದ್ದರು. ನಿನ್ನೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪೊಲೀಸರು ಜಗದೀಶ ಕಾರಂತ್ ರನ್ನು ಬಂಧಿಸಿದ್ದರು.
ನಿನ್ನೆ ರಾತ್ರಿ ವೇಳೆ ಬಂಧಿತ ಆರೋಪಿ ಜಗದೀಶ್ ಕಾರಂತ್ ರನ್ನು ಪುತ್ತೂರಿಗೆ ಕರೆತರಲಾಗಿತ್ತು. ಮದ್ಯರಾತ್ರಿ 1:30 ರ ಸುಮಾರಿಗೆ ಪುತ್ತೂರು ಕೋರ್ಟಿನ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರೆದುರು ಪೊಲೀಸರು ಹಾಜರುಪಡಿಸಿದ್ದರು. ಜಗದೀಶ ಕಾರಂತ್ ಪರ ವಕೀಲರು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ನ್ಯಾಯಾಧೀಶರು ಜಗದೀಶ ಕಾರಂತ್ ಗೆ ಷರತ್ತು ಬದ್ಧ ಜಾಮೀನು ನೀಡಿದ್ದಾರೆ.