ವಿನಯ ವಿಶೇಷ

ಈ ದಿನ ಮೇಷ ರಾಶಿಗೆ ಕಷ್ಟ ಕುಂಭರಾಶಿಗೆ ಜಯ

ಶ್ರೀ ಮಾರುತೇಶ್ವರ ಸ್ವಾಮಿಯ ಕೃಪಾಕಟಾಕ್ಷದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಹಸ್ತ
ಋತು : ವರ್ಷ
ರಾಹುಕಾಲ 07:49 – 09:24
ಗುಳಿಕ ಕಾಲ 14:09 – 15:44
ಸೂರ್ಯೋದಯ 06:13:50
ಸೂರ್ಯಾಸ್ತ 18:53:52
ತಿಥಿ : ಪಂಚಮಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕೆಲಸದ ವಿಷಯದಲ್ಲಿ ಹಿಂಜರಿಕೆ ಬೇಡ ಪಾಲ್ಗೊಳ್ಳುವುದು ಮೊದಲು ಯೋಚಿಸಿ. ನಿಮ್ಮ ಆತ್ಮ ಬಲವನ್ನು ವೃದ್ಧಿಸಿ ಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅನುಕೂಲಕರ ಆರ್ಥಿಕ ಸ್ಥಿತಿಗಳು ಕಂಡುಬರಲಿದೆ. ಮನೆ ಕಟ್ಟುವ ವಿಷಯದಲ್ಲಿ ಯಶಸ್ವಿಯಾಗುವಿರಿ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಹಿರಿಯರ ಸಲಹೆಯನ್ನು ಪಾಲಿಸುವುದು ಸೂಕ್ತ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ಬರುವ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿ. ಆರೋಗ್ಯದ ವಿಷಯವಾಗಿ ಸಮಸ್ಯೆ ಕಾಡಲಿದೆ. ನಿಮ್ಮ ವ್ಯಕ್ತಿತ್ವವನ್ನು ಉನ್ನತ ದರ್ಜೆಗೆ ತೋರಿಸಿಕೊಳ್ಳುವ ಸ್ವಭಾವವನ್ನು ತೆಗೆದುಹಾಕಿ. ಚರ್ಚಾಕೂಟ ಗಳಲ್ಲಿ ವಿವಾದವು ತಲೆದೋರಬಹುದು ಎಚ್ಚರದಿಂದ ಮಾತನಾಡಿ. ಆರ್ಥಿಕ ವ್ಯವಹಾರ ಉತ್ತಮಮಟ್ಟದ್ದಾಗಿದೆ. ಲೇವಾದೇವಿ ವ್ಯವಹಾರದಲ್ಲಿ ಜಾಗ್ರತೆ ಇರಲಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಮಿಥುನ ರಾಶಿ
ಪ್ರಯಾಣದಿಂದ ಆಯಸಾ ಹೆಚ್ಚಾಗಬಹುದು. ಪ್ರಯೋಜನಕಾರಿ ಆದಂತಹ ಕಾರ್ಯಚಟುವಟಿಕೆಗಳು ಈದಿನ ನಡೆಸುತ್ತೀರಿ. ಲೆಕ್ಕಪರಿಶೋಧನೆಯನ್ನು ಸಂಪೂರ್ಣ ಮಾಡಲು ಪ್ರಯತ್ನಿಸಿ. ಕುಶಲಕರ್ಮಿಗಳಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಅಭಿವೃದ್ಧಿ ಕಂಡುಬರಲಿದೆ. ಮನೆಗೆ ಅವಶ್ಯಕವಿರುವ ವಸ್ತುಗಳನ್ನು ಖರೀದಿ ಮಾಡುತ್ತೀರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಮಾತಿಗೆ ಮಾತು ಬೆಳೆಸುವುದು ಸರಿಯಲ್ಲ. ಕೆಲವು ಅವಮಾನಗಳಿಗೆ ನಿಮ್ಮ ಕ್ರಿಯೆಯಿಂದ ಉತ್ತರ ನೀಡಿ. ಪ್ರತಿಭೆಗೆ ಮುಕ್ತ ಅವಕಾಶಗಳು ದೊರೆಯಲಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶ ಹೆಚ್ಚಾಗಲಿದೆ. ಮಕ್ಕಳಿಗೆ ಮನಬಂದಂತೆ ಹಣ ನೀಡುವ ಪ್ರವೃತ್ತಿ ಒಳ್ಳೆಯದಲ್ಲ. ಪತ್ನಿಯೊಡನೆ ಮಧುರ ಕ್ಷಣಗಳನ್ನು ಆಸ್ವಾದಿಸಲಿದ್ದೀರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಉತ್ತಮರ ಸಂಘ ಒಳ್ಳೆಯದು. ಕೆಲವರ ತಪ್ಪಿಗೆ ನೀವು ತಲೆತಗ್ಗಿಸಬೇಕಾಗ ಬಹುದು ಎಚ್ಚರವಿರಲಿ. ನಿಮ್ಮನ್ನು ಹೊಗಳಿ ತಮ್ಮ ಹಿತಾಸಕ್ತಿಗಾಗಿ ಮರಳು ಮಾಡಬಹುದು ವಿವೇಚನೆಯಿಂದ ನೀವು ಇರುವುದು ಒಳಿತು. ನವೀನ ಯೋಜನೆ ಸಾಕಾರಗೊಳ್ಳಲಿದೆ. ಮಾಡುವ ಕ್ರಿಯೆಯಲ್ಲಿ ಜಾಗೃತಿ ಹಾಗೂ ತಪ್ಪಾಗದಂತೆ ನೋಡಿಕೊಳ್ಳಿ. ಪ್ರೇಮಿಗಳಲ್ಲಿ ಮನಸ್ತಾಪ ಹೆಚ್ಚಾಗಲಿದೆ. ಅಚಾತುರ್ಯದಿಂದ ಮಾತನಾಡಿದ ಮಾತುಗಳು ವಿವಾದ ಸ್ವರೂಪ ಪಡೆಯಬಹುದು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಅಗತ್ಯ ಪರಿಶ್ರಮದಿಂದ ನಿಮ್ಮ ಕನಸು ನನಸಾಗಲಿದೆ. ನಿಮ್ಮಲ್ಲಿ ಆವರಿಸಿರುವ ಸೋಮಾರಿತನವನ್ನು ತೆಗೆದುಹಾಕುವುದು ಒಳ್ಳೆಯದು. ಕೆಲವರನ್ನು ನಂಬಿ ಆರ್ಥಿಕ ಸಹಾಯ ದೊರೆಯುವ ಭಾವನೆಯಿಂದ ಕಾಲ ಕಳೆಯಬೇಡಿ, ನಿಮ್ಮ ನಿರೀಕ್ಷೆ ಹುಸಿಯಾಗಲಿದೆ ಎಚ್ಚರ. ಹಣಕಾಸಿನ ಸಂಕಷ್ಟಗಳನ್ನು ಪರಿಹರಿಸಲು ಮಾರ್ಗಗಳನ್ನು ಹುಡುಕ ಬೇಕಾದ ಅನಿವಾರ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಕೆಲವರಿಂದ ಸಮಸ್ಯೆಗಳು ಸೃಷ್ಟಿಯಾಗಲಿದೆ. ನಿಮ್ಮ ಕನಸಿನ ಯೋಜನೆಗೆ ಪ್ರೋತ್ಸಾಹ ದೊರಕದೆ ಇರಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ತುಲಾ ರಾಶಿ
ಕಾರ್ಯಗಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಿ. ಬಂಡವಾಳದ ಅಗತ್ಯತೆ ಇಂದ ಸಂಕಷ್ಟ ಹೆಚ್ಚಾಗಬಹುದು. ಆತ್ಮೀಯರಲ್ಲಿ ಮನಸ್ತಾಪ ಹೆಚ್ಚಾಗುತ್ತದೆ. ಮಾಡುವ ಕೆಲಸದಲ್ಲಿ ವಿಶ್ವಾಸ ಮತ್ತು ಬದ್ಧತೆ ಇರಲಿ. ಕುಟುಂಬಸ್ಥರ ಬೆಂಬಲ ನಿಮಗೆ ಯಶಸ್ಸಿಗೆ ಸಹಕಾರಿಯಾಗಲಿದೆ. ಮಾನಸಿಕ ಗೊಂದಲಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಪಡಿ. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಿಪರೀತ ಖರ್ಚು ಗಳಿಂದ ಅಥವಾ ಸಂಕಷ್ಟದ ಜೀವನದಿಂದ ವೈಯಕ್ತಿಕವಾದ ಜಮೀನು ಅಥವಾ ಮನೆಯನ್ನು ಮಾರುವ ವಿಷಯದ ಆಲೋಚನೆ ಬರಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಮಾತಿನಲ್ಲಿ ಆದಷ್ಟು ಜಾಗ್ರತೆ ಇರಲಿ. ಇಂದು ಕೆಲವರನ್ನು ಆದರ್ಶವಾಗಿ ನಿಮ್ಮ ಮನದಲ್ಲಿ ಸ್ವೀಕಾರ ಮಾಡುವಿರಿ. ಬರುವ ಯೋಜನೆಗಾಗಿ ಆರ್ಥಿಕ ಹಾನಿ ಮಾಡಿಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಚಂಚಲ ಮನಸ್ಸನ್ನು ತೆಗೆದುಹಾಕಿ. ಹೊಸ ಕೆಲಸದ ವಿಷಯದಲ್ಲಿ ಉತ್ತಮ ಮಟ್ಟದ ಸಾಧನೆಯಾಗಲಿದೆ. ಬಳಗದಿಂದ ಸಹಾಯ ದೊರೆಯುವ ನಿರೀಕ್ಷೆ ಕಂಡುಬರುತ್ತದೆ. ಮನೆ ಅಥವಾ ಕೆಲಸ ಬದಲಾಯಿಸುವ ಚಿಂತನೆ ನಡೆಸಲಿದ್ದೀರಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಬಂಧು ಬಳಗದಿಂದ ವಿನಾಕಾರಣ ಸಮಸ್ಯೆ ಉದ್ಭವವಾಗಲಿದೆ. ಕುಟುಂಬದ ಕೆಲಸ ಕಾರ್ಯಗಳಿಗೆ ನಿಮ್ಮ ಅಳಿಲು ಸೇವೆ ಇರಲಿ ಇದರಿಂದ ನಿಮ್ಮ ಗೌರವ ಹೆಚ್ಚಾಗಲಿದೆ. ನಿರ್ದಿಷ್ಟ ಯೋಜನೆಗಳಿಗೆ ಸಲಹೆಗಳನ್ನು ಪಡೆಯುವ ಸಾಧ್ಯತೆ ಕಾಣಬಹುದು. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ. ಹಣಕಾಸಿನ ವಿಚಾರದಲ್ಲಿ ಪ್ರಭುದ್ಧತೆ ಕಂಡುಬರುತ್ತದೆ. ಕೆಲಸದ ವಿಷಯವಾಗಿ ಒತ್ತಡದ ವಾತಾವರಣ ಅನುಭವಿಸುತ್ತೀರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಮಕರ ರಾಶಿ
ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವಕಾಶ ಸಿಗಲಿದೆ. ಮನಸ್ಸಿನಲ್ಲಿರುವ ಕೀಳರಿಮೆ ಭಾವನೆ ತೆಗೆದುಹಾಕಿ. ಕೆಲವು ಗೊಂದಲಗಳನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಬಹುತೇಕ ಕೆಳಮಟ್ಟದಲ್ಲಿ ಕಾಣಬಹುದು ಆದಕಾರಣ ಯೋಜನೆಗಳನ್ನು ವಿಸ್ತರಣೆ ಮಾಡಿಕೊಳ್ಳುವುದು ಒಳ್ಳೆಯದು. ಮಿತ್ರರ ಒಡನಾಟ ಹೆಚ್ಚಾಗಲಿದೆ. ಕೆಲವು ಕಾರ್ಯಗಳು ಮುಂದೂಡಲ್ಪಡುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕುಂಭ ರಾಶಿ
ಮಾಡುವ ಕಾರ್ಯಗಳಲ್ಲಿ ಜಯ ಸಂಪೂರ್ಣ ನಿಮ್ಮ ಪಕ್ಷದಲ್ಲಿದೆ. ಜೀವನದ ಸಂಭ್ರಮವನ್ನು ಕಾಳಣಿ ಆದರೆ ಇತರರನ್ನು ನೋಯಿಸುವುದು ಸರಿಯಲ್ಲ. ನಿಮ್ಮ ಕೆಲವು ನಿರ್ದಿಷ್ಟ ಆರ್ಥಿಕ ವಿಷಯಗಳನ್ನು ಹೆಚ್ಚಿನ ಪ್ರಚಾರ ನೀಡದೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಇಂದು ನೀವು ಸಂತೋಷದ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತೀರಿ. ವ್ಯವಹಾರದಲ್ಲಿ ಸ್ನೇಹದ ವಿಷಯ ತರುವುದು ಬೇಡ, ಇದರಿಂದ ನಷ್ಟವಾಗಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮೀನ ರಾಶಿ
ನಿಮ್ಮ ನಂಬಿಕೆಯ ಜನರು ನಿಮಗೆ ದ್ರೋಹ ಮಾಡಬಹುದು, ನೀವು ಮಾಡಿದ ಉಪಕಾರವನ್ನು ಮರೆತು ಮಾತನಾಡುವರು. ನಿಮ್ಮ ಸಮಸ್ಯೆಗಳಿಗೆ ನೀವೇ ಜವಾಬ್ದಾರಿ ತೆಗೆದುಕೊಂಡು ಪರಿಹಾರ ಹುಡುಕಿ. ಬಂದಂತಹ ಹಣಕಾಸಿನ ಉಳಿತಾಯಕ್ಕೆ ಯೋಜಿಸುವುದು ಸೂಕ್ತ. ಉದ್ಯೋಗದಲ್ಲಿ ಹೆಚ್ಚಿನ ಮುತುವರ್ಜಿವಹಿಸಿ. ತಪ್ಪಾಗದಂತೆ ಕಾರ್ಯನಿರ್ವಹಿಸುವುದು ಒಳ್ಳೆಯದು. ಈ ದಿನ ಚರ್ಚೆಗಳಲ್ಲಿ ಅಥವಾ ಮೊಂಡುವಾದ ಬೆಳೆಸುವುದು ಸರಿ ಕಾಣುವುದಿಲ್ಲ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button