ಪ್ರಮುಖ ಸುದ್ದಿ
ಶಹಾಪುರಃ ಜೀವ್ಹೇಶ್ವರ ನಗರದಲ್ಲಿ ಶ್ರೀರಾಮನಿಗೆ ಪೂಜೆ
ಯಾದಗಿರಿಃ ಇಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿಜೀಯವರು ಶಿಲಾನ್ಯಾಸ ಕಾರ್ಯ ನೆರವೇರಿಸುತ್ತಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಜಿಲ್ಲೆಯ ಶಹಾಪುರ ಪಟ್ಟಣದ ಜೀವ್ಹೇಶ್ವರ ನಗರ ಓಳಿಕಟ್ಟೆಯ ಹನುಮಾನ್ ಮಂದಿರ ಆವರಣದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಭಕ್ತಾದಿಗಳು ಸಂಭ್ರಮದಿಂದ ಪೂಜೆ ನೆರವೇರಿಸಿ ಪರಸ್ಪರರು ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ಬೆಳಗ್ಗೆಯಿಂದ ಭಕ್ತಿಪೂರ್ವಕವಾಗಿ ಶ್ರೀರಾಮ ನಾಮ, ಭಜನೆ ನಡೆದವು. ಈ ಸಂದರ್ಭ ಹಿರಿಯರು, ಮಕ್ಕಳು ಎಲ್ಲರೂ ಭಾಗವಹಿಸಿ ಶ್ರೀರಾಮ ದರ್ಶನ ಪಡೆದು ಖುಷಿ ಪಟ್ಟರು.
ಅದೇ ರೀತಿ ವಿಶ್ವಹಿಂದೂ ಪರಿಷತ್ ಮತ್ತು ಶ್ರಿರಾಮಸೇನೆ ಕಾರ್ಯಕರ್ತರಿಂದ ನಗರದ ಮಾರುತಿ ಮಂದಿರದಲ್ಲೂ ಶ್ರೀಮೂರ್ತಿ ಸೇರಿದಂತೆ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಎಲ್ಲಡೆ ಜೈಶ್ರೀರಾಮ ಧ್ವನಿ ಮೊಳಗಿತು.