ಪ್ರಮುಖ ಸುದ್ದಿ

ಮುಸ್ಲಿಂ ದೇಶದಲ್ಲೂ ಶ್ರೀರಾಮನಿದ್ದಾನೆ, ಶ್ರೀರಾಮ ಎಂದರೆ ಮರ್ಯಾದೆ – ಮೋದಿ

ಅಯೋಧ್ಯೆಃ ವಿಶ್ವದಾದ್ಯಂತ ಇಂದು ಶ್ರೀರಾಮನ ಘೋಷವಾಕ್ಯ ಮೊಳಗುತಿದೆ. ಇಂದು ಇಡಿ ಭಾರತ ಭಾವುಕತೆಯಲ್ಲಿದೆ. ಕೋಟ್ಯಂತರ ಜನರ ಮನ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸದ ಐತಿಹಾಸಿಕ ಕಾರ್ಯಕ್ರಮದಡೆಗಿದೆ ಎಂದು ಮೋದಿ ತಿಳಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸದ ನಂತರ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಮ ಜನ್ಮ ಭೂಮಿ ಆಂದೋಲನದ ಮೂಲಕ ತ್ಯಾಗ ಬಲಿದಾನ, ಸಂಘರ್ಷ ಮತ್ತು ಸಂಕಲ್ಪದಿಂದ ಇಂದು ಈ ಮಂದಿರ ನಿರ್ಮಾಣವಾಗುತ್ತಿದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವ ರೀತಿ ಹಲವು ಪೀಳಿಗೆ ಅವಿರತ ಶ್ರಮವಹಿಸಿ ಗೆಲುವು ಸಾಧಿಸಿ‌ ಕೊಟ್ಟಿದ್ದರೋ ಅದೇ ರೀತಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಲವು ಪೀಳಿಗೆಗಳ ಅವಿರತ ಶ್ರಮವಿದೆ, ಸಮರ್ಪಣೆ ಇದೆ.

ಶ್ರೀರಾಮ ಮರ್ಯಾದ ಪುರುಷೋತ್ತಮ, ದೇಶದ ಮೂಲೆ ಮೂಲೆಯಲ್ಲಿ ಇಂದು ರಾಮನಾಮ ಕೇಳಿ ಬರುತ್ತಿದೆ. ರಾಮ ಮಂದಿರ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಜಗತ್ತಿನ ಎಲ್ಲಡೆಯಿಂದ ಇಲ್ಲಿಗೆ ಜನ ಬರಲಿದೆ. ಕೋಟ್ಯಂತರ ಜನರಿಗೆ ಕೆಲಸಸಿಗಲಿದೆ. ಈ ಕ್ಷೇತ್ರದಲ್ಲಿ ವ್ಯಾಪಾರ ವಹಿವಾಟು ಜಾಸ್ತಿಯಾಗಲಿದೆ.

ಸರಯೂ ನದಿ ತೀರದಲ್ಲಿ ಇದೊಂದು ಸುವರ್ಣ ಅಕ್ಷರದಿಂದ ಬರೆದಿಡುವಂತ ಮಹತ್ಕಾರ್ಯ. ರಾಮಜನ್ಮ ಭೂಮಿ ಈಗ ಬಂಧಮುಕ್ತವಾಗಲಿದೆ.

ಇಂದು ದೇಶದ ಸಹಯೋಗಿಗಳಿಂದ ರಾಮ ಮಂದಿರ ನಿರ್ಮಾಣ ವಾಗುತ್ತಿದೆ. ರಾಮ ಮಂದಿರ ಕೋಟ್ಯಂತರ ಜನರ ಭಾವನೆಯಾಗಿದೆ. ಶ್ರೀರಾಮ ಅವರ ಅದ್ಭುತ ವ್ಯಕ್ತಿತ್ವ, ವೀರತೆ, ಪ್ರಾಮಾಣಿಕತೆ, ಧೈರ್ಯ ಮೆಚ್ಚುವಂತಿದ್ದು, ಹನುಮಾನ್, ಗುರುವಸಿಷ್ಠ, ಶಬರಿ ವಿಶ್ವಾಸಗಳಿಸಿದ ಶ್ರೀ ರಾಮ ತಮ್ಮ ಉತ್ತಮ ಗುಣಗಳಿಂದ ವಿಶೇಷತೆಯನ್ನು ಪಡೆಸುಕೊಂಡು ಹೆಸರುವಾಸಿಯಾದ.

ಇಡಿ ವಿಶ್ವದಲ್ಲಿ ರಾಮನಿಗೆ ಎಲ್ಲರೂ ಒಂದೇ..ಚೀನಾ, ನೇಪಾಳ ಮತ್ತೆ ಇಂಡೋನೇಷಿಯಾ, ಥೈಲ್ಯಾಂಂಡ್, ಶ್ರೀಲಂಕಾ ವಿವಿಧ‌ ದೇಶಗಳಲ್ಲೂ ರಾಮಾಯಣವಿದೆ.

ರಾಮ್ ವಿವಿಧತೆಯಲ್ಲಿ ಏಕತೆಯಾಗಿದ್ದಾನೆ. ಮುಸ್ಲಿಂ ದೇಶದಲ್ಲೂ ರಾಮಾಯಣವಿದೆ ಬಹುತೇಕ ದೇಶಗಳಲ್ಲಿ ಭಗವಾನ್ ರಾಮ ಇದ್ದಾನೆ. ಶ್ರೀರಾಮ ಎಲ್ಲರಿಗೂ ಬೇಕು ಎಂದರು. ಈ ಸಂದರ್ಭದಲ್ಲಿ ಮೋಹನ್ ಭಾಗವತ್, ಯಪಿ ಸಿಎಂ ಯೋಗಿ ಆದಿತ್ಯನಾಥ್ ಕರ್ನಾಟಕದಿಂದ ಉಡುಪಿ ಶ್ರೀ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಆದಿಚುಂಚನಗಿರಿ ಮಠಸ ಸ್ವಾಮೀಜಿ ಸೇರಿದಂತೆ ಸಾಧು ಸಂತರು ಉಪಸ್ಥಿತರಿದ್ದರು.

Related Articles

One Comment

  1. ಸಮನ್ವಯ, ಚಿಂತನಾಶೀಲ ಭಾವೈಕ್ಯದ ಬಹು ಸಂಸ್ಕೃತಿಯ ಭಾರತೀಯ ಪರಂಪರೆಯ ಸಂದೇಶ ಸಾರಿದ್ದಾರೆ

Leave a Reply

Your email address will not be published. Required fields are marked *

Back to top button