ಪ್ರಮುಖ ಸುದ್ದಿ
ಜೈಲುಹಕ್ಕಿಯ ಹೃದಯಗಾನ : ಪರಪ್ಪನ ಅಗ್ರಹಾರದ ಖೈದಿಗಳು ಮಾಂಸದೂಟ ಬಿಟ್ಟದ್ದೇಕೆ?
ಬೆಂಗಳೂರು: ನೆರೆ ಸಂತ್ರಸ್ಥರ ಸಂಕಷ್ಟಕ್ಕೆ ರಾಜ್ಯದ ಮೂಲೆ ಮೂಲೆಯಿಂದ ನೆರವಿನ ಮಹಾಪುರವೇ ಹರಿದು ಬರುತ್ತಿದೆ. ಇದೇ ಸಂದರ್ಭದಲ್ಲಿ ಪರಪ್ಪನ ಅಗ್ರಹಾರದ ಖೈದಿಗಳು ಸಹ ನೆರವಿನ ಹಸ್ತ ಚಾಚಿದ್ದಾರೆ. ನೆರೆ ಸಂತ್ರಸ್ಥರಿಗೆ ನೆರವಾಗುವ ಸಲುವಾಗಿ ಪ್ರತಿ ಶುಕ್ರವಾರ ನೀಡುವ ಮಾಂಸಹಾರವನ್ನು ಎರಡು ವಾರಕಾಲ ತ್ಯಜಿಸಿ ಅದಕ್ಕೆ ಖರ್ಚಾಗುವ ಹಣವನ್ನು ನೆರೆ ಸಂತ್ರಸ್ಥರಿಗೆ ನೀಡಲು ತೀರ್ಮಾನಿಸಿದ್ದಾರೆ.
ಖೈದಿಗಳಿಂದ ಲಿಖಿತ ಮನವಿ ಪಡೆದ ಅಧಿಕಾರಿಗಳು ಸುಮಾರು 5035 ಖೈದಿಗಳಿಗೆ ಎರಡು ವಾರದ ಕುರಿ ಮತ್ತು ಕೋಳಿ ಮಾಂಸದ ಒಟ್ಟು ಖರ್ಚು ವೆಚ್ಚ ಲೆಕ್ಕ ಹಾಕಿದಾಗ ಒಟ್ಟು ₹10 ಲಕ್ಷ ರೂ ಉಳಿದಿದೆ. ಆ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಆ ಮೂಲಕ ಜೈಲು ಹಕ್ಕಿಗಳು ಸಹ ತತ್ತರಗೊಂಡ ಉತ್ತರ ಕರ್ನಾಟಕದ ಜನರಿಗಾಗಿ ಮಿಡಿದಿದ್ದಾರೆ.