ಡ್ರಗ್ಸ್ ಕೇಸ್ಃ ಸಂಬರಗಿ ವಿರುದ್ಧ ಶಾಸಕ ಜಮೀರ್ ದೂರು.!
ಡ್ರಗ್ಸ್ ಕೇಸ್ಃ ಸಂಬರಗಿ ವಿರುದ್ಧ ಶಾಸಕ ಜಮೀರ್ ದೂರು.!
ಬೆಂಗಳೂರಃ ಡ್ರಗ್ಸ್ ಪ್ರಕರಣದಲ್ಲಿ ಪ್ರಶಾಂತ ಸಂಬರಿಗಿ ವಿನಾಃ ಕಾರಣ ನನ್ನ ಹೆಸರು ಹೇಳಿಕೆಯಲ್ಲಿ ನೀಡುವ ಮೂಲಕ ನನ್ನ ಹೆಸರಿಗೆ ತೆಜೋವಧೆ ಕೆಲಸ ಮಾಡಿದ್ದಾನೆ ಎಂದು ಶಾಸಕ ಜಮೀರ್ ಅಹ್ಮದ್ ಗರಂ ಆಗಿದ್ದಾರೆ.
ಅಲ್ಲದೆ ಇಂದು ಚಾಮರಾಜ ಪೇಟೆಯ ಠಾಣೆಯಲ್ಲಿ ಸಂಬರಿಗಿ ವಿರುದ್ಧ ದೂರು ಸಲ್ಲಿಸಿದ್ದಾರೆ.
ದೂರು ಪಡೆದ ಪೊಲೀಸರು ಎನ್ ಸಿಆರ್ ದಾಖಲಿಸಿಕೊಂಡಿದ್ದು, ನಂತರ ನ್ಯಾಯಾಲಯದ ಆದೇಶದಂತೆ ಎಫ್ ಆಯ್ ಆರ್ ದಾಖಲಿಸಲಾಗುವದು ತನಿಖೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಮಾಫಿಯಾದಲ್ಲಿ ನಟಿ ಸಂಜನಾ ಜೊತೆ ಕೊಲೊಂಬಾ ಕ್ಯಾಸಿನೋದಲ್ಲಿ ಶಾಸಕ ಜಮೀರ್ ಖಾನ್ ಕಾಣಿಸಿಕೊಂಡಿದ್ದಾರೆ. ಅಂದು ಕೋಟ್ಯಂತರ ರೂಪಾಯಿ ಹಾಕಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಶಾಸಕ ಎರಡು ಮೂರು ದಿನಗಳ ಸುಮ್ಮನಾಗಿದ್ದು, ನಟಿ ಸಂಜನಾ ಅರೆಸ್ಟ್ ಆದ ನಂತರ ಇಂದು ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ಸಿಸಿಬಿ ಕಣ್ಣಿಟ್ಟಿದ್ದು, ಬಹಳ ಜಾಗುರಕತೆಯಿಂದ ತನಿಖೆ ನಡೆಸುತ್ತಿದ್ದಾರೆ.
ಡ್ರಗ್ಸ್ ಮಾಫಿಯಾ ಬೆಂಗಳೂರ ಸೇರಿದಂತೆ ರಾಜ್ಯದಿಂದಲೇ ನಶಿಸಿ ಹೋಗುವ ಕಾರ್ಯ ಸಿಸಿಬಿ ಪೊಲೀಸರು ಮಾಡಲಿ ಎಂಬುದೇ ರಾಜ್ಯ ನಾಗರಿಕರ ಮತ್ತು ವಿಶೇಷವಾಗಿ ಎಷ್ಟೋ ಮಕ್ಕಳು ಕಾಲೇಜು ಓದುವ ವಯಸ್ಸಿನಲ್ಲೇ ಡ್ರಗ್ ಎಡಿಟ್ ಆಗಿ ಮಕ್ಕಳನ್ನ ಕಳೆದುಕೊಂಡ ನೋವಿನಲ್ಲಿರುವ ಪಾಲಕರ ಆಶಯವಾಗಿದೆ.