ಪ್ರಮುಖ ಸುದ್ದಿ

ದರ್ಶನಾಪುರರಿಂದ ಜನೌಷಧಿ ಮಳಿಗೆ ಉದ್ಘಾಟನೆ

ದರ್ಶನಾಪುರರಿಂದ ಜನೌಷಧಿ ಮಳಿಗೆ ಉದ್ಘಾಟನೆ

yadgiri, ಶಹಾಪುರಃ ನಗರದ ಹಳೇ ಬಸ್ ನಿಲ್ದಾಣ ಹತ್ತಿರದ ಜಯಾ ಕಾಂಪ್ಲೆಕ್ಸ್ ನಲ್ಲಿ ನೂತನ ಜನ ಔಷಧಿ ಕೇಂದ್ರವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಕೇಂದ್ರದ ಮಹತ್ವ ಯೋಜನೆಯಾಗಿದ್ದು, ಬಡವರಿಗೆ ಅತಿ ಕಡಿಮೆ ದರದಲ್ಲಿ ಔಷಧಿಗಳು ದೊರೆಯಲಿವೆ. ಗ್ರಾಮೀಣ ಭಾಗದ ರೈತರು, ಬಡವರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಔಷಧಿಗಳು ದೊರೆಯಲಿವೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಏಕದಂಡಗಿ ಮಠದ ಕಾಳಹಸ್ತೇಂದ್ರ ಶೀಗಳು, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಆರಬೋಳ, ಬಸವರಾಜಪ್ಪಗೌಡ ತಂಗಡಿಗಿ ಗೋಗಿ, ಚಂದಪ್ಪ ತಾಯಮಗೋಳ, ಚಂದ್ರಶೇಖರ ಲಿಂಗದಳ್ಳಿ, ಮಾಣಿಕರಡ್ಡಿ ಶಿರಡ್ಡಿ ಗೋಗಿ ಸೇರಿದಂತೆ ಜನೌಷಧಿ ಮಳಿಗೆ ಮಾಲೀಕ ಮನೋಹರ ಬಿ.ಗೋಗಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button