ಯುಗಾದಿ ಕರಿಗೆ ಒಲುಮೆಯ ಬಣ್ಣ
ಗ್ರಾಮೀಣ ಭಾಗದ ಹಲವಡೆ ಇಂದು ಬಣ್ಣದೋಕುಳಿ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಹಯ್ಯಾಳ (ಬಿ) ಹೋಬಳಿಯ ಹತ್ತಾರು ಹಳ್ಳಿಗಳು ಸೇರಿದಂತೆ ಜಿಲ್ಲೆಯ ಹಲವೆಡೆ ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬ ಮುಗಿಸಿ ಮರುದಿವಸ ಅಂದ್ರೆ ಹಬ್ಬದ ಕರಿ ದಿನ ಹೋಳಿ ಆಚರಿಸುವ ಬಣ್ಣದಾಟ ಆಡುವ ವಿಶೇಷ ಪದ್ದತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಅಂತೆಯೇ ನಿನ್ನೆ ಯುಗಾದಿ ಹಬ್ಬದ ಬೇವಿನ ಸವಿ ಹೋಳಿಗಿ ಸವಿದ, ಜನ ಇಂದು ಹಯ್ಯಾಳ, ಯಕ್ಷಿಂತಿ, ಮದರಕಲ್ ಸೇರಿಂದತೆ ಹಲವು ಹಳ್ಳಿಗಳಲ್ಲಿ ಇಂದು ಪರಸ್ಪರರಿಗೆ ಬಣ್ಣ ಎರಚುವ ಮೂಲಕ ರಂಗಿನಾಟ ಆಡಿದರು.
ಸಾಮಾನ್ಯವಾಗಿ ಹೋಳಿ ಹಬ್ಬದಂದು ಎಲ್ಲಾ ಕಡೆ ಬಣ್ಣದಾಟ ಆಡಲಾಗುವುದು. ಆದರೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಹಲವು ಗ್ರಾಮೀಣ ಭಾಗಗಳಲ್ಲಿ ಯುಗಾದಿ ಹಬ್ಬದ ಮರುದಿನ ದಂದು ಬಣ್ಣದಾಟ ಆಡುವ ಸಂಪ್ರದಾಯ ರೂಢಿಯಲ್ಲಿದೆ. ಅದೇ ಪದ್ಧತಿ, ಸಂಸ್ಕೃತಿ ಈಗಲೂ ಮುಂದುವರೆದಿದೆ.
ನಿನ್ನೆ ಯುಗಾದಿ ಹಬ್ಬ ಮುಗಿಸಿ ಇಂದು ಸೋಮವಾರ ಯಕ್ಷಿಂತಿ ಟೊಣ್ಣೂರ, ಮದರಕಲ್, ಹತ್ಯಾಕಾಂಡ ಸೇರಿದಂತೆ ವಡಿಗೇರಿ ಹೋಬಳಿ ಹಳ್ಳಿಗಳ ಗ್ರಾಮದಲ್ಲಿ ಯುವಕರು ಪರಸ್ಪರರು ಬಣ್ಣ ಎರಚುವ ಮೂಲಕ ಸಂತೋಷವನ್ನು ಹಂಚಿಕೊಂಡರು.