ಪ್ರಮುಖ ಸುದ್ದಿ
ಸಿದ್ರಾಮಯ್ಯನವರಿಗೆ ಮಾನವೀಯತೆ ಇಲ್ಲ- ಜನಾರ್ಧನ ರಡ್ಡಿ
ಮಾನವೀಯ ಇಲ್ಲದ ಸಿದ್ರಾಮಯ್ಯ ಜನಾರ್ಧನ ರಡ್ಡಿ
ಮೊಳಕಾಲ್ಮೂರಃ ಸಿದ್ರಾಮಯ್ಯ ಸಿಎಂ ಇದ್ದಾಗ ನನಗರ ರಕ್ಷಣೆ ನೀಡಲು ಕೋರಿದರೆ, ಯಾವುದೇ ಕ್ರಮಕೈಗೊಳ್ಳಲಿಲ್ಲ. ಬೆಂಗಳೂರಿನ ನಮ್ಮ ಮನೆ ಸುತಲ್ಲೂ ಆತಂಕ ವಾತಾವರಣ ನಿರ್ಮಾಣ ಮಾಡುವ ಮೂಲಕ ನನಗೆ ಭಯ ಹುಟ್ಟಿಸಲು ಯತ್ನಿಸಿದರು ಎಂದು ಮಾಜಿ ಸಚಿವ ಜನಾರ್ಧನ ರಡ್ಡಿ ಸಿದ್ರಾಮಯ್ಯ ವಿರುದ್ಧ ಹರಿಯಾಯ್ದರು.
ಮೊಳಕಾಲ್ಮೂರ ಪಟ್ಟಣದ ಹೊರವಲಯದ ಹೊಟೇಲ್ ವೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೊಲೀಸ್ ಅಧಿಕಾರಿಗಳು ನಾನು ಹೆದರುತ್ತೇನೆ ಅಂದುಕೊಂಡಿದ್ದರೆ ಅವರ ಭ್ರಮೆ ಅದು.
ಅಕ್ರಮ ಗಣಿಗಾರಿಗೆ ನಡೆಸಿದವರನ್ನು ಪಕ್ಕದಲ್ಲಿ ಕೂಡಿಸಿಕೊಂಡು ಮಾತನಾಡುವ ಸಿದ್ರಾಮಯ್ಯ ಆತ್ಮವಲೋಕನ ಮಾಡಿಕೊಳ್ಳಲಿ. ಮಾನವೀಯ ಹೊಂದದ ಸಿದ್ರಾಮಯ್ಯನ ವಿರುದ್ಧ ಮಾನನಷ್ಟ ದೂರು ದಾಖಲಿಸಿದರೆಷ್ಡು ಬಿಟ್ಟರೆಷ್ಟು ಎಂದು ಗುಡುಗಿದರು.
ಉಪ ಚುನಾವಣೆ ಹಿನ್ನೆಯಲ್ಲಿ ಮಾಜಿ ಸಚಿವ ಜನಾರ್ಧನ ರಡ್ಡಿ ನಡೆಸಿರುವ ಸುದ್ದಿ ಗೋಷ್ಠಿ ಮಹತ್ವ ಪಡೆಸುಕೊಂಡಿದೆ.
ಗೋಷ್ಠಿಯುದ್ದಕ್ಕೂ ಸಿದ್ರಾಮಯ್ಯ ವಿರುದ್ದ. ಆಕ್ರೋಶ ವ್ಯಕ್ತಪಡಿಸಿದರು.