ಪ್ರಮುಖ ಸುದ್ದಿ

ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಸೌಲಭ್ಯ ಕಲ್ಪಿಸಲಿ-ಜಯಸಿದ್ದೇಶ್ವರ ಶ್ರೀ

ಸೋಲಾಪುರದ ಸಂಸದ ಜಯಸಿದ್ದೇಶ್ವರ ಶಿವಾಚಾರ್ಯರಿಗೆ ಅದ್ದೂರಿ ಸನ್ಮಾನ

ಬೇಡ ಜಂಗಮ ಮಾನ್ಯತೆ ಒದಗಿಸಿಕೊಡುವಲ್ಲಿ ಸಹಕರಿಸುವೆ-ದರ್ನಾಪುರ

ಯಾದಗಿರಿ, ಶಹಾಪುರಃ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇದೇ ವೀರಶೈವ ಜಂಗಮ ಸಮಾಜದವರಿಗೆ ಬೇಡ ಜಂಗಮ ಮಾನ್ಯತೆ ಸರ್ಟಿಫಿಕೇಟ್ ನೀಡಲಾಗುತ್ತಿದ್ದು, ಇದೇ ಕರ್ನಾಟಕದಲ್ಲಿರುವ ಯಾದಗಿರಿ ಜಿಲ್ಲೆ ಸೇರಿದಂತೆ ಉಳಿದ ಜಿಲ್ಲೆಗಳ ಜಂಗಮ ಸಮುದಾಯಕ್ಕೆ ಬೇಡ ಜಂಗಮ ಸರ್ಟಿಫಿಕೇಟ್ ಸೌಲಭ್ಯ ನೀಡದಿರುವದು ಖೇದಕರವಾಗಿದೆ ಎಂದು ಗೌರವ ಸನ್ಮಾನ ಸ್ವೀಕರಿಸಿದ ಸೋಲಾಪುರದ ಸಂಸದ ಡಾ.ಜಯಸಿದ್ದೇಶ್ವರ ಶಿವಾಚಾರ್ಯರು ತಿಳಿಸಿದರು.

ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಶ್ರೀಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘ(ರಿ)ದ 17 ನೇ ವಾರ್ಷಿಕ ಮಹಾಸಭೆ ಹಾಗೂ ಮಹಾರಾಷ್ಟ್ರ ಸಂಸದ ಜಯಸಿದ್ಧೇಶ್ವರ ಶಿವಾಚಾರ್ಯರಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವೀರಶೈವ ಜಂಗಮ ಸಮುದಾಯಕ್ಕೆ ಬೇಕಾದ ಸೌಲಭ್ಯವನ್ನು ನಾವು ಸಂವಿಧಾನಾತ್ಮಕವಾಗಿಯೇ ನಮ್ಮ ಬೇಡಿಕೆಯನ್ನು ಸಲ್ಲಿಸುತ್ತಿದ್ದೇವೆ. ಇದು ನಮ್ಮ ಹಕ್ಕು. ಕಲಬುರ್ಗಿ, ಯಾದಗಿರಿ ಭಾಗದ ಜನರಿಗೂ ಬೇಡ ಜಂಗಮ ಸೌಲಭ್ಯ ಒರೆಯಲಿ.

ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಅದನ್ನು ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಇಲ್ಲಿನ ಸ್ಥಳೀಯ ಶಾಸಕರು ಸಮಾಜದ ಮುಖಂಡರು ನಿರ್ವಹಿಸಿ, ಮುಂದೆ ಅದು ಕೇಂದ್ರ ಸರ್ಕಾರಕ್ಕೆ ಬರಲಿದೆ. ಆಗ ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಆ ಸಂದರ್ಭದಲ್ಲಿ ನಿಮ್ಮ ಧ್ವನಿಯಾಗಿ ನಾನು ಧ್ವನಿಗೂಡಿಸುವ ಮೂಲಕ ನಾನು ಸಕರಾತ್ಮಕವಾಗಿ ಸ್ಪಂಧಿಸಲಿದ್ದೇನೆ ಎಂದು ಭರವಸೆ ನೀಡಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಯಾವ ಅವಿನಾಭಾವ ಸಂಬಂಧವೋ ಎಲ್ಲಿಯ ಸೋಲಾಪುರ ಎಲ್ಲಿಯ ಶಹಾಪುರ ಇಂತಹ ಸಾಂದರ್ಭಿಕ ಸಮಾರಂಭದ ಹೆಸರಲ್ಲಿ ನನ್ನನ್ನು ಕರೆಸಿ ಅದ್ದೂರಿ ಸ್ವಾಗತ, ಮನ ಮುಟ್ಟಿದ ಗೌರವ ಸನ್ಮಾನ ನನ್ನನ್ನು ಮೂಕ ವಿಸ್ಮಿತವಾಗಿಸಿದೆ. ನಿಮ್ಮ ಪ್ರೀತಿ ವಿಶ್ವಾಸ ಈ ಸಮಾರಂಭ ಎಂದೆಂದಿಗೂ ಮರೆಯಲಾರೆ.

ಅಚ್ಚಳಿಯದಂತೆ ಉಳಿಯಲಿದೆ. ನಾನು ಯಾಕೆ ಶಹಾಪುರದಲ್ಲಿಯೇ ಜನ್ಮಿಸಲಿಲ್ಲ ಎಂದೆನಿಸುತ್ತಿದೆ ಎಂದು ಆಶಯ ವ್ಯಕ್ತಪಡಿಸಿದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಅತ್ಯಂತ ಮುಂದುವರೆದ ಸಮುದಾಯಗಳಲ್ಲಿ ಒಂದಾದ ಜಂಗಮ ಸಮಾಜದಲ್ಲೂ ಅತ್ಯಂತ ಹಿಂದುಳಿದ ಬಡವರಿದ್ದಾರೆ. ಇಂದಿಗೂ ಮನೆ ಮನೆ ಸಂಚರಿಸಿ ಭೀಕ್ಷೆ ಬೇಡುವ ಜಂಗಮರಿದ್ದಾರೆ. ಅವರಿಗೆ ಸೂಕ್ತ ಸೌಲಭ್ಯ ಸಿಗಬೇಕಾದಲ್ಲಿ ಈ ಸಮಾಜಕ್ಕೆ ದೊರೆಯಬೇಕಿದ್ದ ಬೇಡ ಜಂಗಮ ಮಾನ್ಯತೆ ದೊರೆಯಲೇಬೇಕು, ಆ ನಿಟ್ಟಿನಲ್ಲಿ ಸಮುದಾಯಕ್ಕೆ ಬೇಕಾದ ಸಹಾಯ ಸಹಕಾರ ನೀಡುವೆ ಎಂದರು.

ಮಾಜಿ ಶಾಸಕ ಗುರು ಪಾಟೀಲ್ ಮಾತನಾಡಿ, ಸೋಲಾಪುರದಿಂದ ಲೋಕಸಾಬೆ ಚುನಾವಣೆಯಲ್ಲಿ ಜಯಸಿದ್ದೇಶ್ವರ ಶಿವಾಚಾರ್ಯರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೇಳಿ ಆಶ್ಚರ್ಯ ಚಕಿತರಾಗಿದ್ದೇವೆ. ಅದು ಮಾಜಿ ಗೃಹ ಸಚಿವ ಕಾಂಗ್ರೆಸ್‍ನ ಘಟಾನುಘಟಿ ನಾಯಕರಲ್ಲಿ ಒಬ್ಬರಾಗಿದ್ದ ಸಿಂಧೆ ಅವರ ವಿರುದ್ಧ ಸ್ಪರ್ಧೆ ಅದು, ಇಡಿ ಭಾರತದಲ್ಲಿ ಕಲಬುರ್ಗಿ ಲೋಕಸಭೆ ಮತ್ತು ಮಂಡ್ಯ ಸೇರಿದಂತೆ ಸೋಲಾಪುರದ ಶ್ರೀಗಳ ಕ್ಷೇತ್ರದ ಮೇಲೆ ಎಲ್ಲಾ ಪಕ್ಷದ ನಾಯಕರ ಕಣ್ಣುಗಳಿದ್ದವು.

ಅಷ್ಟೊಂದು ನೇರ ಸ್ಪರ್ಧೆ ಘಟಾನುಘಟಿಗಳ ಸ್ಪರ್ಧೆ ಚರ್ಚೆಯಲ್ಲಿತ್ತು. ಅಂತಹ ಸ್ಥಿತಿಯಲ್ಲಿ ಶ್ರೀಗಳ ಸ್ಪರ್ಧೆ ನಾವೆಲ್ಲ ಗಾಬರಿಗೊಂಡಿದ್ದೇವು. ಆದರೆ ಶ್ರೀಗಳು ಸ್ಪರ್ಧೆಗಿಳಿಯುತ್ತಿದ್ದಂತೆ ವಿರೋಧ ಪಕ್ಷದ ಅಭ್ಯರ್ಥಿಯಲ್ಲಿ ನಡುಕ ಶುರುವಾಯಿತು. ಸ್ವಾಮೀಜಿಯವರು ಅಪಾರ ಮತಗಳ ಅಂತರದಿಂದ ಜಯಗಳಿಸಿದ್ದರು.

ಶ್ರೀಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಗ್ರಾಮಗಳು ಅಭೀವೃದ್ಧಿಯಾಗದೆ ಹಾಗೇ ಉಳಿದಿವೆ. ಶ್ರೀಗಳು ಈ ಕುರಿತು ಕಳಜಿವಹಿಸಿ ಅವುಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಗಣಗೇರಿ ಬ್ರಹನ್ಮಠದ ವಿಶ್ವರಾಧ್ಯ ಶೀವಾಚಾರ್ಯ, ಕನ್ಯಾಕೋಳೂರ ಚನ್ನವೀರ ಶಿವಾಚಾರ್ಯ, ಫಕೀರೆಶ್ವರ ಮಠದ ಗುರುಪಾದ ಮಹಾಸ್ವಾಮಿ, ಕಡಕೋಳ ಮಠದ ರುದ್ರಮುನಿ ಶಿವಾಚಾರ್ಯ, ನಾಗಠಾಣಪುರದ ಶ್ರೀಗಳು ಸೇರಿದಂತೆ ತಾಲೂಕಿನ ಹಲವಾರು ಶ್ರೀಮಠಗಳ ಪೂಜ್ಯರು ಉಪಸ್ಥಿತರಿದ್ದರು.

ಬೇಡ ಜಂಗಮ ಸಮಾಜದ ರಾಜ್ಯ ಅಧ್ಯಕ್ಷ ವೀರೇಂದ್ರ ಪಾಟೀಲ್, ಸ್ಥಳೀಯ ಮುಖಂಡರಾದ ಬಸವರಾಜ ಹಿರೇಮಠ, ಮಲ್ಲಣ್ಣ ಮಡ್ಡಿ, ಬಸವರಾಜೇಂದ್ರ ದೇಶಮುಖ ಮತತು ಸಂಘದ ಅಧ್ಯಕ್ಷ ಶಿವಕುಮಾರಸ್ವಾಮಿ ಆದೋನಿ, ಬಸವರಾಜೇಶ್ವರಿ ಗಂಗಾಧರಮಠ, ಕಾಂತಯ್ಯ ಹಿರೇಮಠ, ಮಹೇಶ ರಾಮಗಿರಿಮಠ, ಗುರುಲಿಂಗಯ್ಯ ಸಾಲಿಮಠ, ಮಲ್ಲಿಕಾರ್ಜುನ ಗಂಗಾಧರಮಠ, ಶರಣು ಗದ್ದುಗೆ, ಅಮರೀಶ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಂಗಮ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಿರೇಮಠ ಆಗ್ರಹ

ರಾಜ್ಯದಲ್ಲಿ ಜಂಗಮ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ವೀರಶೈವ ಜಂಗಮ ಸಮುದಾಯದ ಅಭೀವೃದ್ಧಿಗೆ ರಾಜ್ಯ ಸರ್ಕಾರ ಸ್ಪಂಧಿಸಬೇಕೆಂದು ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಆಗ್ರಹಿಸಿದರು.

ಜಂಗಮ ಸಮುದಾಯ ಮೂಂದುವರೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಗ್ರಾಮೀಭ ಭಾಗದಲ್ಲಿ ಇನ್ನೂ ಬೇಡಿಕೊಂಡು ತಿನ್ನುವಂತ ಸ್ಥಿತಿ ಜಂಗಮರಿಗಿದೆ. ಸಿಎಂ ಯಡಿಯೂರಪ್ಪ ಕೂಡಲೇ ಜಂಗಮ ಸಮುದಾಯದ ಸ್ಥಿತಿಗತಿ ಆಧರಿಸಿ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಲಿ ಎಂದು ಮನವಿ ಮಾಡಿದರು.

ಇದಕ್ಕೆ ಸಮುದಾಯದ ಎಲ್ಲಾ ಶ್ರೀಗಳು ವಿವಿಧ ಪಕ್ಷದ ಮುಖಂಡರು ಎಲ್ಲರೂ ಬೆಂಬಲ ವ್ಯಕ್ತಪಡಿಸಿದರು. ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯುವ ಕಾರ್ಯ ನಡೆಯಬೇಕಿದ ಎಂದರು.

Related Articles

Leave a Reply

Your email address will not be published. Required fields are marked *

Back to top button