ಪ್ರಮುಖ ಸುದ್ದಿ
ಜಪಾನ್ ನಲ್ಲಿ ನಮೋಗೆ ಅಚ್ಚರಿ ತಂದ ಜಯಘೋಷ..ಏನದು ಗೊತ್ತೆ..?
ಜಪಾನ್ ನಲ್ಲಿ ಕನ್ನಡ ಡಿಂಡಿಮ- ಶರಣು ಗದ್ದುಗೆ ಸಂತಸ
ಟೋಕಿಯೋ ಜಪಾನ್ಃ ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ಪ್ರವಾಸದಲ್ಲಿದ್ದು, ಜಪಾನ್ ನ ಟೋಕಿಯೋ ಸಿಟಿಯಲ್ಲಿ ಅನಿವಾಸಿಗರು ಆಯೋಜಿಸಿದ ಸಮಾರಂಭದ ವೇದಿಕೆಗೆ ಮೋದಿಜೀಯವರಿಗೆ ಭವ್ಯ ಸ್ವಾಗತ ನೀಡಲಾಯಿತು.
ಆದರೆ, ಅಚ್ಚರಿ ವಿಷಯವೆಂದರೆ, ನರೇಂದ್ರ ಮೋದಿಯವರನ್ನು ಸ್ವಾಗತಿಸುವಾಗ ನರೇಂದ್ರ ಮೋದಿಯವರಿಗೆ ಜಯವಾಗಲಿ ಎಂಬ ಕನ್ನಡ ಜಯಘೋಷ ಕೂಗುವದನ್ನು ಕೇಳಿ ಮೋದಿಯವರೇ ಕೆಲ ಕ್ಷಣ ಮೂಕವಿಸ್ಮಿತರಾದರು ಎನ್ನಲಾಗಿದೆ.
ಜಪಾನ್ ನಲ್ಲಿ ಕನ್ನಡ ಡಿಂಡಮ ಕಂಡು ಅಚ್ಚರಿಯಾದರು.
ಜಪಾನ್ ನೆಲದಲ್ಲಿ ಸಾಕಷ್ಟು ಕನ್ನಡಿಗರು ನೆಲೆಸಿರವದರಿಂದ ಅಲ್ಲಿ ದೇಶದ ಪ್ರಧಾನಿಗೆ ಕನ್ನಡ ಘೋಷಣೆಯೊಂದಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.
ಕನ್ನಡ ಭಾಷೆ ಜಪಾನ್ ನೆಲದಲ್ಲಿ ಮೊಳಗುತ್ತಿರುವದು ನಮ್ಮೆಲ್ಲರಿಗೆ ಖುಷಿ ಸಂಗತಿ. ಅಲ್ಲದೆ ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಣೆ ಮಾಡಿರುವದಕ್ಕೂ ಸಾರ್ಥಕತೆ ದೊರೆತಂತಾಯಿತು ಎಂದು ಕನ್ನಡ ಅಭಿಮಾನಿಗಳು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಬಿ.ಗದ್ದುಗೆ ಸಂತಸ ವ್ಯಕ್ತಪಡಿಸಿದ್ದಾರೆ.