‘ಕೈ-ಕಮಲ ಹಣಾಹಣಿ’ : ಯಾರ ಕೊರಳಿಗೆ ಬೀಳಲಿದೆ ಜಯನಗರದ ವಿಜಯಮಾಲೆ!
ಬೆಂಗಳೂರು: ssmrv ಕಾಲೇಜಿನಲ್ಲಿ ಜಯನಗರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಈ ಕ್ಷೇತ್ರದಲ್ಲಿ ಕೇವಲ 4 ಅಂಚೆ ಮತಗಳಿದ್ದು ಆ ಪೈಕಿ ಬಿಜೆಪಿ 3 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ 1ಮತ ಪಡೆದಿದ್ದು ಬಿಜೆಪಿಗೆ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ, ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಅಭ್ಯರ್ಥಿ ಆಗಿದ್ದ ಬಿ.ಎನ್.ವಿಜಯ ಕುಮಾರ್ ಅವರ ಸಾವಿನ ಹಿನ್ನಲೆಯಲ್ಲಿ ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಹೀಗಾಗಿ, ಕಳೆದ ಸೋಮವಾರ ನಡೆದ ಮತದಾನದಲ್ಲಿ ಶೇಕಡಾ 55ರಷ್ಟು ಮತದಾನ ನಡೆದಿತ್ತು. ಒಟ್ಟು 2 ಲಕ್ಷ ಮತದಾರರಲ್ಲಿ 1,11,689 ಜನ ಹಕ್ಕು ಚಲಾಯಿಸಿದ್ದರು.
ವಿಜಯಕುಮಾರ್ ಅವರ ಸೋದರ ಬಿ.ಎನ್.ಪ್ರಹ್ಲಾದ್ ಬಿಜೆಪಿಯಿಂದ ಹಾಗೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸೌಮ್ಯ ರೆಡ್ಡಿಯವರನ್ನು ಕಣಕ್ಕಿಳಿಸಿದೆ. ಇವರಿಬ್ಬರ ನಡುವೆ ನೇರ ಸ್ಪರ್ದೆ ಏರ್ಪಟ್ಟಿದ್ದು, ಪಕ್ಷೇತರ ಅಬ್ಯರ್ಥಿ ರವಿಕೃಷ್ಣರೆಡ್ಡಿ ಸೇರಿ ಒಟ್ಟು 19 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಇಂದು ಮದ್ಯಾನದ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ.