ಪ್ರಮುಖ ಸುದ್ದಿ
ಜೆಡಿಎಸ್ ಏಕಾಂಗಿ ಸ್ಪರ್ಧೆ- ಎಚ್ಡಿಕೆ ಸ್ಪಷ್ಟನೆ
ನಮಗೆ ಯಾರ ಸಹವಾಸವು ಬೇಡ-ಎಚ್ಡಿಕೆ
ಬೆಂಗಳೂರಃ ಉಪ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾವ ಕ್ಷೇತ್ರದಲ್ಲೂ ಅಭ್ಯರ್ಥಿಗಳಾಗುವುದಿಲ್ಲ. ಆದರೆ ಕೆಲವರು ಉಪ ಚುನಾವಣೆಯಲ್ಲಿ ದೇವೆಗೌಡರ ಕುಟುಂಬದಿಂದ ಅವರು ಸ್ಪರ್ಧೆ ಇವರು ಸ್ಪರ್ಧೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಮಾಜಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಈ ಚುನಾವಣೆಯಲ್ಲಿ ಯಾರ ಸಹವಾಸಕ್ಕೂ ಹೊಗದೆ ಜೆಡಿಎಸ್ ಸ್ವಂತ ಬಲದ ಮೇಲೆ ಏಕಾಂಗಿ ಚುನಾವಣೆ ಎದುರಿಸಲಿದೆ.
ಜೆಡಿಎಸ್ ಕಾರ್ಯಕರ್ತರು ಸಹ ನಮ್ಮ ಕುಟುಂಬದವರಿದ್ದಂತೆ. ನಮ್ಮ ಕಾರ್ಯಕರ್ತರನ್ನು ದೂರವಿಟ್ಟು ನೋಡುವದಿಲ್ಲ. ಕುಟುಂಬದ ಸದಸ್ಯರಂತೆ ಕಾಣುತ್ತೇವೆ ಎಂದರು.
ಅಲ್ಲದೆ ಸಿದ್ರಾಮಯ್ಯ ನವರು ಮಾತಿನ ದಾಟಿ ಗಮನಿಸಿದ್ದೇನೆ. ಅದಕ್ಕೆ ಕಾಲವೇ ಉತ್ತರಿಸಲಿದೆ. ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.