ಅಂತಿಮ ಹಂತದಲ್ಲಿ ಕಾಂಗ್ರೆಸ್‍ಗೆ ಜ್ಞಾನೋದಯಃ ಎಚ್‍ಡಿಕೆ ಟೀಕೆ
ಕೊನೆಯ ಹಂತದಲ್ಲಿ ಬಜೆಟ್ ಮಂಡನೆ ನಾಟಕ ಬೂಟಾಟಿಕೆ ಃ ಎಚ್ಡಿಕೆ
ಯಾದಗಿರಿಃ ರಾಜ್ಯದಲ್ಲಿ ಚುನಾವಣೆ ಕಾವು ಏರುತ್ತಿದೆ. ಬಿಜೆಪಿ ಒಂದಡೆ ಪರಿವರ್ತನಾ ಯಾತ್ರೆ ಜೋರಾಗಿ ನಡೆಸುತ್ತಿದ್ದು, ಕಾಂಗ್ರೆಸ್ ಅದರ ವಿರುದ್ಧವಾಗಿ ಸಾಧನ ಸಮಾವೇಶ ಹೆಸರಿನಲ್ಲಿ ಸರ್ಕಾರಿ ದುಡ್ಡಿನಲ್ಲಿ ಸಮಾವೇಶ ನಡೆಸುತ್ತಿದೆ ಎಂದು ಜೆಡಿಎಸ್ ರಾಜ್ಯಧ್ಯಕ್ಷ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು.
ಜಿಲ್ಲೆಯ ಶಹಾಪುರ ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ಕಳೆದ ಐದು ವರ್ಷದ ಅಧಿಕಾರವಧಿಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಅರಿವು ಬರಲಿಲ್ಲ. ಈಗ ಕೊನೆಯ ಹಂತದಲ್ಲಿ ಎಚ್ಚರಗೊಂಡಂತೆ ಕಾಣುತ್ತಿದೆ.
ರಾಜ್ಯದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಕಾಮಗಾರಿ ಹೆಸರಿನಲ್ಲಿ ಬಜೆಟ್‍ನಲ್ಲಿ ಮಂಡಿಸುವ ಸಾಹಸ ಮಾಡುತ್ತಿದ್ದಾರೆ. ಅವರಿಗೆ ಬಜೆಟ್ ಮಂಡನೆ ಬಗ್ಗೆ ಅರಿವಿದೆ ಎಂದುಕೊಂಡಿದ್ದೆ, ಆದರೆ ಕೊನೆಯ ಹಂತದ 2018-19 ರ ಬಜೆಟ್ ಮಂಡಿಸಿದರು ಉಪಯೋಗವಿಲ್ಲ. ನೂತನ ಸರ್ಕಾರ ಬಂದಾಗ ಅದನ್ನು ಬಿಟ್ಟು ಅವರು ಹೊಸ ಬಜೆಟ್ ಅನ್ನು ಮಡಿಸಬೇಕಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಮಾಡದ ಅಭಿವೃದ್ಧಿ ಕಾರ್ಯ ಈಗ ಕೊನೆಯ ಬಜೆಟ್ ನಲ್ಲಿ ಅನುದಾನ ಕಲ್ಪಿಸಿದ್ದೇನೆ ಎಂದು ಜಂಬ ಕೊಚ್ಚಿಕೊಂಡರೆ ಅದು ಆಗುವ ಕೆಲಸವಲ್ಲ. ಅದು ಅವರಿಗೂ ಗೊತ್ತು ಆದರೆ, ಜನರನ್ನು ಮರಳುಗೊಳಿಸುವ ಸಲುವಾಗಿ ಬಜೆಟ್ ಮಂಡನೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಲ್ಲದೆ ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ಒಬ್ಬರನ್ನೊಬ್ಬರು ಜೈಲಿಗೆ ಹಾಕುವ ಮತ್ತು ಸರ್ಕಾರ ಬಂದರೆ ಇವರು ಅವರಿಗೆ ಜೈಲಿಗೆ ಹಾಕುತ್ತೇವೆ ಎಂಬ ಹೇಳಿಕೆಗಳಿಗೆ ದೊಡ್ಡ ಭಾಷಣಗಳಾಗಿವೆ. ಇದು ಅಭಿವೃದ್ಧಿ ಪರ ಚಿಂತನೆಗಳಲ್ಲ. ಜನರ ಸೇವೆ ಮಾಡಿದ ಉದಾಹರಣೆಗಳೇ ಇವರ ಹತ್ತಿರ ಇಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ತಾ ಮೇಲೂ ತಾ ಮೇಲೂ ಎಂದುಕೊಂಡು ಓಡಾಡುತ್ತಿವೆ. ರಾಜ್ಯದ ಜನತೆ ನೋಡುತ್ತಿದ್ದಾರೆ. ಎಲ್ಲವನ್ನು ಗಮನಿಸುತ್ತಿದ್ದು, ಯಾರ ಅಧಿಕಾರವಧಿಯಲ್ಲಿ ಜನಪರ ಕೆಲಸಗಳಾಗಿವೆ ಎಂಬುದರ ಅರಿವು ರಾಜ್ಯದ ಜನರಿಗಿದೆ.
ನಾನು ಜನರ ಸೇವೆಗಾಗಿ ನನ್ನ ಜೀವನವನ್ನು ಮುಡಿಪಿಟ್ಟಿದ್ದು, ಇ ಭಾರಿ ಅಧಿಕಾರಕ್ಕೆ ಬಂದಲ್ಲಿ 24 ಗಂಟೆಯಲ್ಲಿ ರೈತ ಸಾಲ ಮನ್ನಾ ಮಾಡುವುದಾಗಿ ಗೋಷಿಸಿದ್ದೇನೆ. ಹಲವಾರು ಜನಪರ ಕಾಳಜಿಯ ಯೋಜನೆಗಳನ್ನು ಸಿದ್ಧ ಪಡಿಸಿದ್ದೇನೆ ಅವೆಲ್ಲವನ್ನೂ ಅನುಷ್ಠಾನ ಮಾಡಬೇಕಿದೆ. ಸಿದ್ರಾಮಯ್ಯನವರ ತರಹ ಪಾದಯಾತ್ರೆ ನಡೆಸಿ ತೊಡೆತಟ್ಟುವುದು ನನ್ನ ಧ್ಯೇಯವಲ್ಲ. ನಾಗರಿಕ ಸಮಾಜಕ್ಕೆ ಬಡವರಿಗೆ ದಲಿತರ ಏಳ್ಗೆಗೆ ಏನು ಬೇಖು ಅದನ್ನು ಕಲ್ಪಿಸುವ ಯೋಜನೆಗಳು ತರಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರೆ, ಶಹಾಪುರ ಮತಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಎಂದೇ ಬಿಂಬಿತಗೊಂಡಿರುವ ಅಮೀನರಡ್ಡಿ ಪಾಟೀಲ್ ಯಾಳಗಿ, ರಾಜಾ ಕೃಷ್ಣಪ್ಪ ನಾಯಕ ಸುರಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಿಎಂ ಆಪ್ತ ಸಚಿವರಿಂದ ಹೈಕಮಾಂಡಗೆ ದುಡ್ಡು ಸಾಗಣಿಕೆ ಎಚ್ಡಿಕೆ ಆರೋಪ
ಸಿದ್ರಾಮಯ್ಯನವರ ನಾಲ್ಕು ಜನ ಆಪ್ತ ಸಚಿವರಿಂದ ಕಾಂಗ್ರೆಸ್ ಹೈಕಮಾಂಡ್‍ಗೆ ದುಡ್ಡು ತಲುಪಿಸಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್‍ಗೆ ಕರ್ನಾಟಕವೇ ಸದ್ಯ ಆರ್ಥಿಕವಾಗಿ ಬೆಂಬಲ ನೀಡುತ್ತಿದೆ ಎಂದು ಎಚ್ಡಿಕೆ ಆರೋಪಿಸಿದರು.
ಯಾವ ನಾಲ್ಕು ಜನ ಆಪ್ತ ಸಚಿವರು ಅವರ ಹೆಸರು ಹೇಳಿ ಎಂಬ ಪತ್ರಕರ್ತರ ಪ್ರಶ್ನೆಗೆ, ನೀವೆ ಊಹೆ ಮಾಡಿ ಎಲ್ಲರಿಗೂ ಗೊತ್ತಿದೆ. ಸಿಎಂ ಹಿಂದೆ ಯಾವ ಾಪ್ತ ಸಚಿವರು ಪದೇ ಪದೇ ದೆಹಲಿಗೆ ತೆರಳುತ್ತಾರೆ. ಅಲ್ಲದೆ ತಿಂಗಳಲ್ಲಿ ಎಷ್ಟು ಸಲ ವಿಮಾನ ಟಿಕೆಟ್ ಬುಕ್ ದೆಹಲಿಗೆ ಬುಕ್ ಆಗಿದೆ ಎಂಬುದನ್ನು ಪತ್ತೆ ಮಾಡಿ ತಿಳಿಯುತ್ತದೆ ಎಂದು ನಸುನಕ್ಕರು.
ನಾವು ದುಡ್ಡು ಕೊಡುತ್ತೇವೆ ನಮ್ಮ ಹೈಕಮಾಂಡಗೆ ಆದರೆ ನಮ್ಮ ಹೈಕಮಾಂಡ್ ದೆಹಲಿಯಲ್ಲಿ ರಾಜ್ಯದ 6 ಕೋಟಿ ಜನತೆಯೇ ನಮ್ಮ ಹೈಕಮಾಂಡ್ ಅವರಿಗೆ ದುಡ್ಡು ಕೊಡುತ್ತೇವೆ ಆದರೆ ಅದು ಚುನಾವಣೆಯಲಿ ಅಲ್ಲ. ರಾಜ್ಯದ ರೈತಾಪಿ ಜನ ಸಂಕಷ್ಟದಲ್ಲಿದ್ದಾಗ ನಾನು ಅವರ ಮೆನೆಗೆ ಹೋಗಿ ಕೈಲಾದ ದುಡ್ಡು ನೀಡಿದ್ದೇನೆ. ನನಗೆ ಜನರೇ ಹೈಕಮಾಂಡ್. ಮುಂದೆ ಸರ್ಕಾರ ಬಂದಾಗಲು ರೈತರ ಅಣತಿಯಂತೆ ಸರ್ಕಾರ ನಡೆಸುತ್ತೇನೆ.
ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೇಳಬೇಕಾದರೆ ನಿಮ್ಮನ್ನ ರಸ್ತೆಗೆ ಇಳಿದು ಪ್ರತಿಭಟನೆ ಮಾಡುವಂತ ಸ್ಥಿತಿ ತರಲು ಬಿಡುವದಿಲ್ಲ. ರೈತರ ಮನೆಗೆ ಎಲ್ಲಾ ಸೌಲಭ್ಯ ತಲುಪಬೇಕು. ಮಾದರಿ ರಾಜ್ಯವಾಗಬೇಕು. ನಮ್ಮ ಯೋಜನೆಗಳ ಅನುಷ್ಠಾನ ಕುರಿತು ಅಭ್ಯಸಿಸಲು ಬೇರೆ ರಾಜ್ಯದ ಜನರೆ ಬರುವಂತೆ ಕೆಸಲ ಮಾಡಿ ತೋರಿಸುತ್ತೇನೆ ಎಂದರು.