ಪ್ರಮುಖ ಸುದ್ದಿ

ಜನರ ಮೇಲೆ ಸಾಲ ಹೊರಿಸಿದ ಕಾಂಗ್ರೆಸ್ : ಎಚ್‍.ಡಿ. ಕುಮಾರಸ್ವಾಮಿ ಆರೋಪ

ಜೆಡಿಎಸ್ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶ

ಯಾದಗಿರಿಃ ರಾಜ್ಯದಲ್ಲಿ ಸಾಲ ಸೂಲ ಮಾಡಿ ಮೂರವರೆ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ಕುರಿತು ಎಲ್ಲೂ ಚರ್ಚಿಸದೇ ಯಾವುದೆ ಸಮರ್ಪಕ ಕ್ರಮ ತೆಗೆದುಕೊಳ್ಳದೆ ಬೇಜವಬ್ದಾರಿತನವನ್ನು ಕಾಂಗ್ರೆಸ್ ಸರ್ಕಾರ ಪ್ರದರ್ಶಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.

ನಗರದ ಡಿಗ್ರಿ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಜೆಡಿಎಸ್ ಸ್ವಾಭಿಮಾನಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಸಮಸ್ಯೆ ಪರಿಹಾರಕ್ಕೆ ಕಿಂಚಿತ್ತೂ ಯೋಚಿಸದ ಸರ್ಕಾರ ಇಂದು ರೈತರಪರ ಸರ್ಕಾರ ಎಂದು ಜಂಬಕೊಚ್ಚಿಕೊಳ್ಳುತ್ತದೆ. ರೈತರ ಬಗ್ಗೆ ಯಾವುದೇ ಕಾಳಜಿ ಹೊಂದದ ಸರ್ಕಾರ ರೈತರ ಹಿತ ದೃಷ್ಟಿ ಹೊಂದದ ಸರ್ಕಾರ ಇದಾಗಿದೆ ಎಂದು ದೂರಿದರು.

ರಾಜ್ಯದ ಜನತೆಯ ಮೇಲೆ 2 ಲಕ್ಷ ಕೋಟಿಗೂ ಅಧಿಕ ಸಾಲದ ಹೊರೆ ಹೊರಿಸಿದ ಸಿದ್ರಾಮಯ್ಯ, ರಾಜ್ಯದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ನೀಡಿದ್ದೇನೆ ಎಂದು ಹೇಳುತ್ತಾರೆ. ಅತಿ ಹೆಚ್ಚು ಸಾಲವನ್ನು ನಮ್ಮೆಲ್ಲರ ಮೇಲೆ ಹೊರಿಸಿದ್ದಾರೆ. ರೈತರು ಕಳೆದ ನಾಲ್ಕು ವರ್ಷದಿಂದ ನಷ್ಟ ಅನುಭವಿಸುತ್ತಿದ್ದಾರೆ. ಅವರು ಬೆಳೆದ ಬೆಳೆಗೆ ಸಮರ್ಪಕ ಬೆಂಬಲ ಬೆಲೆ ಇಲ್ಲದೆ ತತ್ತರಿಸಿದ್ದಾರೆ. ಈ ಭಾಗದಲ್ಲಿ ಹತ್ತಿ ಬೆಳೆ ಜಾಸ್ತಿ ಬೆಳೆಯುತ್ತಾರೆ.

ಹತ್ತಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಈ ಭಾಗದಲ್ಲಿ ಹತ್ತಿ ಕಾರ್ಖಾನೆ ಸ್ಥಾಪನೆ ಅಗತ್ಯವಿದೆ. ಹತ್ತಿ ಕಾರ್ಖಾನೆಯಿಂದ ಕನಿಷ್ಟ ನಾಲ್ಕು ಲಕ್ಷ ಜನರಿಗೆ ಉದ್ಯೋಗವು ಕಲ್ಪಿಸಬಹುದು ಮತ್ತು ಬೆಳೆಗಾರರಿಗೆ ಹತ್ತಿ ಮಾರಾಟಕ್ಕೆ ಉತ್ತಮ ಬೆಲೆಯು ಕಂಡುಕೊಳ್ಳುವ ಮಾರ್ಕೇಟ್ ನಿರ್ಮಿಸಿದಂತಾಗುತ್ತದೆ. ಇಂತಹ ಕೆಲಸಗಳನ್ನು ಇವತ್ತಿಗೂ ಯಾರು ಮಾಡಲಿಲ್ಲ.

ಮುಂಬುರುವ ದಿನಗಳಲ್ಲಿ ರೈತರ ಏಳ್ಗೆಗೆಗಾಗಿ ಬೇಖಾದ ಹಲವಾರು ಯೋಜನೆಗಳನ್ನು ಜಾರಿಗೆ ತರುಲು ನಿರ್ಧರಿಸಿದ್ದು, ಇಸ್ರೇಲ್ ಮಾದರಿ ಕೃಷಿ ಬೆಳವಣಿಗೆಗೆ ಹಲವು ರೈತಪರ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದೇನೆ. ರೈತರು ಸಾಲ ಮನ್ನಾ ಮಾಡಿದ ಮೇಲೆ. ಮತ್ತೇ ಮತ್ತೇ ರೈತರು ಸಾಲ ಮಾಡಬಾರದು ಅದಕ್ಕೊಂದು ಸಮರ್ಪಕ ಸೂತ್ರವನ್ನು ಅನುಸರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕಿದೆ ಆ ನಿಟ್ಟಿನಲ್ಲಿ, ಸರ್ಕಾರವೇ ಬಿತ್ತನೆಗೆ ಬೇಕಾದ ಸಕಲ ಸೌಲಭ್ಯವನ್ನು ಒದಗಿಸುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದೇನೆ.

ಮುಂಬುರವ ದಿನಗಳಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ರೈತರು, ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಂಆಡುವ ಗುರಿ ಹೊಂದಿದ್ದೇನೆ. ಗರ್ಭೀಣಿ ಮಹಿಳೆ ಮತ್ತು ಮಗುವಿಗೆ 6 ತಿಂಗಳು ಕಾಲ ಪ್ರತಿ ತಿಂಗಳು 6000 ದಂತೆ ಹಣ ನೀಡುವ ಚಿಂತನೆಯನ್ನಯ ಮಾಡಲಾಗಿದೆ. ಇಂತಹ ಮಹತ್ವದ ಹಲವಾರು ಕಾರ್ಯಕ್ರಮಗಳನ್ನು ನೀವು ಊಹಿಸದಂತ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕಾರಣ ನಾಗರಿಕರು ನಮ್ಮ ಅಭ್ಯರ್ಥಿಗೆ ಮತ ನೀಡುವ ಜೆಡಿಎಸ್ ಅಧಿಕಾರಕ್ಕೆ ಬರುವಂತೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಜಿಲ್ಲಾಧ್ಯಕ್ಷ ನಾಗಣ್ಣಗೌಡ ಕಂದಕೂರ, ಕೇದಾರಲಿಂಗಯ್ಯ ಹಿರೇಮಠ, ಶಹಾಪುರ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮೀನರಡ್ಡಿ ಪಾಟೀಲ್ ಯಾಳಗಿ ಮಾತನಾಡಿದರು. ಎ.ಸಿ.ಕಾಡ್ಲೂರ, ವಿಠಲ್ ವಗ್ಗಿ, ಬಸವರಾಜ ವಿಭೂತಿಹಳ್ಳಿ, ಬಸವರಾಜ ಅರುಣಿ, ಅಯ್ಯಣ್ಣ ಕನ್ಯಾಕೋಳೂರ, ಸುರಪುರ ಅಭ್ಯರ್ಥಿ ರಾಜ ಕೃಷ್ಣಪ್ಪ ನಾಯಕ, ನಾಗರತ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button