ಹೆಚ್.ವಿಶ್ವನಾಥ್ ಗೆ ಜೆಡಿಎಸ್ ಸಾರಥ್ಯ : ಮಾಜಿ ಸಿಎಂ ಸಿದ್ಧರಾಮಯ್ಯಗೆ ದೊಡ್ಡಗೌಡರ ಟಾಂಗ್?
ಬೆಂಗಳೂರು: ಶಾಸಕ ಹೆಚ್.ವಿಶ್ವನಾಥ್ ಅವರಿಗೆ ರಾಜ್ಯದ್ಯಕ್ಷ ಪಟ್ಟ ಕಟ್ಟಲು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಒಲವು ತೋರಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ್ಯಕ್ಷ ಸ್ಥಾನವನ್ನು ಹೆಚ್.ವಿಶ್ವನಾಥ್ ಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೆಚ್.ವಿಶ್ವನಾಥ ರಾಜ್ಯದ್ಯಕ್ಷರಾಗಲು ಆಸಕ್ತಿ ಹೊಂದಿಲ್ಲವಾದರೂ ದೊಡ್ಡಗೌಡರು ವಿಶ್ವನಾಥ ಮನವೊಲಿಸಲಿದ್ದಾರೆಂದು ತಿಳಿದು ಬಂದಿದೆ. ಹೀಗಾಗಿ, ಆಷಾಡ ಮಾಸ ಮುಗಿದ ಬಳಿ ಹೆಚ್.ವಿಶ್ವನಾಥ್ ಜೆಡಿಎಸ್ ಸಾರಥ್ಯ ವಹಿಸುವುದು ಬಹತೇಕ ಖಚಿತ ಎಂದು ಜೆಡಿಎಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಕುರುಬ ಸಮುದಾಯದ ಹೆಚ್.ವಿಶ್ವನಾಥ್ ಗೆ ಜೆಡಿಎಸ್ ರಾಜ್ಯದ್ಯಕ್ಷರನ್ನಾಗಿಸುವ ಮೂಲಕ ಹಿಂದುಳಿದವರ ಮತ ಸೆಳೆಯಲು ಜೆಡಿಎಸ್ ಪ್ಲಾನ್ ಮಾಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ವಿಶ್ವನಾಥ್ ಜೆಡಿಎಸ್ ನ ಸಾರಥ್ಯ ವಹಿಸಲಿದ್ದಾರೆನ್ನಲಾಗಿದೆ. ಆ ಮೂಲಕ ಹಿಂದುಳಿದ ಮತಗಳಿಗೆ ಲಗ್ಗೆಯಿಡುವುದರ ಜೊತೆಗೆ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡುವುದು ದೊಡ್ಡಗೌಡರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.