ಪ್ರಮುಖ ಸುದ್ದಿ
‘ನಮಗೆ ಮುದುಕ ಮೋದಿಯ ಬರೀ ಮಾತು ಬೇಕಿಲ್ಲ’ -ಜಿಗ್ನೇಶ್ ಮೇವಾನಿ
ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಮುದುಕರಾಗಿದ್ದಾರೆ. ಅವರೀಗ ತಲೆ ತಿನ್ನಲು ಆರಂಭಿಸಿದ್ದಾರೆ. ನಮಗೆ ವಯಸ್ಸಾಗಿರುವ ನರೇಂದ್ರ ಮೋದಿಯವರ ಮಾತು ಬೇಕಿಲ್ಲ. ಹಾರ್ಧಿಕ್ ಪಟೇಲ್, ಕನಯ್ಯ ಕುಮಾರ್ ಅವರಂತವರ ಮಾತು ಬೇಕು. ನಾನು ಶೇಕಡಾ 2ರಷ್ಟು ಮಾತ್ರ ರಾಜಕಾರಣಿ ಇನ್ನುಳಿದ ಶೇಕಡಾ 98ರಷ್ಟು ಯುವ ಹೋರಾಟಗಾರ ಎಂದು ಗುಜರಾತಿನ ಶಾಸಕ, ದಲಿತ ಯುವ ಹೋರಾಟಗಾರ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ನಗರದಲ್ಲಿ ನಡೆದ ಕೋಮು ಸಾಹಾರ್ಧ ವೇದಿಕೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಜಿಗ್ನೇಶ್ ಮೇವಾನಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರ ವಿರುದ್ಧ ಹರಿಹಾಯ್ದರು. ಕೋಮುವಾದಿಗಳು ಕರ್ನಾಟಕದಲ್ಲಿ ಕೋಮುವಾಂತಿ ಮಾಡಲು ಬರುತ್ತಿದ್ದಾರೆ. ಸೌಹಾರ್ಧತೆಯ ಮನೋಭಾವದ ಎಲ್ಲರೂ ಒಗ್ಗಟ್ಟಾಗಿ ಕೋಮುವಾದಿಗಳಿಗೆ ಪಾಠ ಕಲಿಸಬೇಕಿದೆ ಎಂದಿದ್ದಾರೆ.