ಕರ್ತವ್ಯನಿರತ ಪೊಲೀಸರಿಬ್ಬರಿಗೆ ಕೊರೊನಾ ಸೋಂಕು ದೃಢ.?
ಅಹಮದಾಬಾದ್ಃ ಕೊರೊನಾ ತಡೆಗೆ ಕರ್ತವ್ಯ ನಿರತರಾದ ಇಬ್ಬರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ದೃಢಪಟ್ಟ ಸುದ್ದಿ ಇದೀಗ ಬಂದಿದೆ.
ಗುಜರಾತನ ಅಹಮದಾಬಾದ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಇಬ್ಬರಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಕಾರಣ, ಮಾದರಿ ಪರೀಕ್ಷೆಗೆ ಒಳಪಡಿಸಲಾಗಿ ಇದೀಗ ಇಬ್ಬರಲ್ಲೂ ಕೊರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಜನರ ರಕ್ಷಣೆಗೆ ರಸ್ತೆಗಿಳಿದು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಕೊರೊನಾ ಬಂದಿದ್ದು, ಇನ್ನಾದರೂ ಜನರು ಎಚ್ಚೆತ್ತುಕೊಳ್ಳಬೇಕು. ಜನರ ಉಳಿವಿಗಾಗಿ ತಮ್ಮ ಕುಟುಂಬವನ್ನು ತೊರೆದು ಜೀವದ ಹಂಗು ಬಿಟ್ಟು ಹಗಲಿರಳು ಶ್ರಮಿಸುತ್ತಿರುವ ಪೊಲಿಸರಿಗೆ ಕೊರೊನಾ ತಗುಲಿದ್ದು, ಈಗ ಅವರ ಕುಟುಂಬಸ್ಥರ ರಕ್ಷಣೆ ಮಾಡುವರಾರು..? ಎಂಬುದನ್ನು ಒಂದಿಷ್ಟು ಜನತೆ ಯೋಚನೆ ಮಾಡಬೇಕು.
ಪೊಲೀಸರೆಷ್ಟು ಹೇಳಿದರೂ ಕೇಳದ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೈಕ್ ಮೇಲೆ ಮೂವರು, ಇಬ್ಬರು ಕುಳಿತು ಅಲೆದಾಡುವದು, ಸುಖಾಸುಮ್ಮನೆ ರಸ್ತೆಗಿಳಿಯುವದು ಸರಿಯಲ್ಲ ಇನ್ನಾದರು ಅರಿತು ನಡೆಯಬೇಕಿದೆ ಎನ್ನುವದು ವಿವಿ ಕಳಕಳಿಯಾಗಿದೆ. ಮಹಾಮಾರಿ ರೊಗದಿಂದ ಆ ಪೊಲೀಸರಿಬ್ಬರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ವಿನಯವಾಣಿ ದೇವರಲ್ಲಿ ಪ್ರಾರ್ಥಿಸುತ್ತದೆ.