ಪುಣ್ಯ ಸ್ಮರಣೆಃ ಸಸಿ ನೆಟ್ಟ ಗೆಳೆಯರ ಬಳಗ
ದಿ.ಸಾಬಮ್ಮ ಹಣಮಂತಪ್ಪ ಗುತ್ತೇದಾರ ಪುಣ್ಯ ಸ್ಮರಣೆ
ಗ್ರಾಮೀಣ ಗೆಳೆಯರ ಬಳಗದಿಂದ ಸಸಿ ನೆಡುವ ಕಾರ್ಯಕ್ರಮ
ಶಹಾಪುರಃ ದಿ.ಸಾಬಮ್ಮ ಹಣಮಂತಪ್ಪ ಗುತ್ತೇದಾರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಪಟ್ಟಣದ ಹಣಮಂತಪ್ಪ ಗುತ್ತೇದಾರ ನಗರದಲ್ಲಿ ಗ್ರಾಮೀಣ ಗೆಳೆಯರ ಬಳಗದವತಿಯಿಂದ ಒಂದು ನೂರು ಸಸಿಗಳನ್ನು ನೆಡುವ ಮೂಲಕ ವಿಶಿಷ್ಠವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಶಾಂತಪ್ಪ ಕಟ್ಟಿಮನಿ, ಮಳೆ ಅಭಾವದಿಂದ ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಗಿಡ ಮರಗಳ ಸರಂಕ್ಷಣೆ ಮಾಡಬೇಕಿದೆ. ಅರಣ್ಯ ಬೆಳೆಸುವಲ್ಲಿ ಕ್ರಮಕೈಗೊಳ್ಳಬೇಕಿದೆ.
ಪ್ರತಿಯೊಬ್ಬರು ಇಂತಹ ಕಾರ್ಯಕ್ರಮಗಳಿದ್ದಲ್ಲಿ ಸಸಿಗಳನ್ನು ನೆಟ್ಟು ಅವುಗಳ ಸರಂಕ್ಷಣೆ ಮಾಡಬೇಕು. ಹಸಿರೀಕರಣಕ್ಕೆ ಮುಂದಾಗದಿದ್ದಲ್ಲಿ ಮುಂದೆ ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
ಪ್ರತಿ ಬಡಾವಣೆಯಲ್ಲಿ ಯುವಕರು ಸಸಿ ನೆಟ್ಟು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹುಲಗಪ್ಪ ದೊಡ್ಮನಿ, ಸಾಯಬಣ್ಣ ಕಟ್ಟಿಮನಿ, ಚಂದ್ರು ಕಟ್ಟಿಮನಿ, ಲ್ಲು ಬಡಿಗೇರ, ಶರಣಪ್ಪ ದೊಡ್ಮನಿ, ಹೊನ್ನಪ್ಪ ಕಟ್ಟಿಮನಿ, ಸಿದ್ದು ಆನೇಗುಂದಿ ಸೇರಿದಂತೆ ಅವಿನಾಶ ಗುತ್ತೇದಾರ ಇತರರಿದ್ದರು.