ಜೆಪಿ ಭವನದಲ್ಲಿ JDS ಸಭೆ- ಮುಂದಿನ ದಳಪತಿ ಯಾರು.?
ಜೆಡಿಎಸ್ ಪರಿಷತ್ ಸದಸ್ಯರ ಮುನಿಸು-ಮುನಿಸಿಕೊಂಡ ನಾಯಕರಿಗೆ ವರಿಷ್ಠ HDD ಪಾಠ
ಬೆಂಗಳೂರಃ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಇಂದು ಇಲ್ಲಿನ ಜೆಪಿ ಭವನದಲ್ಲಿ ಜೆಡಿಎಸ್ ಸಭೆ ಕರೆದಿದ್ದು, ಈ ಸಭೆಗೆ ಜೆಡಿಎಸ್ ನ ಹಲವು ಪರಿಷತ್ ಸದಸ್ಯರು ಗೈರ ಹಾಜರಿ ಆಗುವ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆ, ಮುನಿಸಿಕೊಂಡ ಪರಿಷತ್ ಸದಸ್ಯರೊಂದಿಗೆ HDD ಸ್ವತಃ ಮಾತಾಡಿ ಸಭೆಯಲ್ಲಿ ಭಾಗವಹಿಸಲು ಸೂಚಿಸಿದ್ದು, ಅಲ್ಲದೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಶುಕ್ರವಾರ 11 ಗಂಟೆಗೆ ಸಭೆ ಆರಂಭವಾಗಲಿದ್ದು, ಪರಿಷತ್ ಸದಸ್ಯರ 16 ಜನರ ತಂಡದ ಪ್ರಮುಖ ಹೊರಟ್ಟಿಯವರು ಸಭೆಯಲ್ಲಿ ಭಾಗವಹಿಸುವದಿಲ್ಲ ಎಂಬ ವದಂತಿ ಹಬ್ಬಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪರಿಷತ್ ಸದಸ್ಯರನ್ನು ಕ್ಯಾರೆ ಎಂದಿಲ್ಲ ಆರೋಪ ಜೆಡಿಎಸ್ ಮನೆಯಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಸರ್ಕಾರ ನಡೆಸುತ್ತಿರುವಾಗ ಕುಮಾರಸ್ವಾಮಿ ಅವರು ಜೆಡಿಎಸ್ ನ ಪರಿಷತ್ ಸದಸ್ಯರ ಸಮಸ್ಯೆಗಳಿಗೆ ಸೂಕ್ತ ಸ್ಪಂಧನೆ ನೀಡಿಲ್ಲವೆಂದು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ನಾಯಕತ್ವ ಬದಲಾವಣೆಗೆ ಪರಿಷತ್ ಸದಸ್ಯರ ತಂಡ ಪಟ್ಟು ಹಿಡಿದಿದೆ ಎಂಬ ಸುದ್ದಿಯೂ ಹೊರ ಬಿದ್ದಿದ್ದು, ಒಟ್ಟಾರೆ ಇಂದು ಜೆಡಿಎಸ್ ನಾಯಕತ್ವ ಕುರಿತು ಪ್ರಶ್ನೆಗಳು ಉದ್ಭವವಾಗಿದ್ದು, ಜೆಡಿಎಸ್ ಗೆ ಹೊಸ ದಳಪತಿ ದೊರೆತರು ಅಚ್ಚರಿ ಪಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ.
ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರ ನಡುವೆ ಮಹತ್ವದ ಮಾತುಕತೆಗಳು ನಡೆದಿದ್ದು, ಜೆಡಿಎಸ್ ನ ಮುಂದಿನ ಸಾರಥಿ ಯಾರು ಎಂಬ ಲೆಕ್ಕಚಾರದಲ್ಲಿ ಹಿರಿಯ ವರಿಷ್ಠರಾದ ದೊಡ್ಡ ಗೌಡ್ರು ನಡೆಸಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಸಹ ಮುನಿಸಿಕೊಂಡ ಪರಿಷತ್ ಸದಸ್ಯರಿಗೆ ಸಭೆಗೆ ಹಾಜರಾಗಿ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳೋಣವೆಂದು ಆಶಯ ವ್ಯಕ್ತಪಡಿಸಿದ್ದಾರೆ. ಬೇಕಿದ್ದರೆ ನಾನು ಅಧ್ಯಕ್ಷ ಸ್ಥಾನ ತ್ಯೇಜಿಸಲು ಸಿದ್ಧವಿದ್ದು, ಬೇರೆ ಯಾರಾದರೂ ಜವಬ್ದಾರಿ ತೆಗೆದುಕೊಳ್ಳಲಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಮುನಿಸಿಕೊಂಡ ಪರಿಷತ್ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಜೆಡಿಎಸ್ ವರಿಷ್ಠ ದೇವೆಗೌಡರು ಸೇರಿದಂತೆ ಕುಮಾರಸ್ವಾಮಿ ನಾನಾ ತಂತ್ರಗಾರಿಕೆ ನಡೆಸಿದ್ದಾರೆ ಎನ್ನಲಾಗಿದೆ. ಎಲ್ಲದಕ್ಕೂ ಇಂದು ಶೂಭ ಮೂರ್ತವಿದ್ದು, ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದು ಕಾಯ್ದು ನೋಡಬೇಕಷ್ಟೆ..!