ಪ್ರಮುಖ ಸುದ್ದಿ
ಪ್ರತಿಷ್ಠಿತರ ಜೂಜು ಪ್ರಕರಣ ಸಿಓಡಿ ತನಿಖೆಗೆ ಖರ್ಗೆ ಆಗ್ರಹ
ಜೂಜು ಅಡ್ಡೆಃ ದಾಳಿ ವೇಳೆ ದೊರೆತ 51 ಲಕ್ಷ ಯಾರ ಪಾಲು.?
ಕಲಬುರ್ಗಿಃ ನಗರದ ಪ್ರತಿಷ್ಠಿತ ಲಾಡ್ಜ್ ವೊಂದರಲ್ಲಿ ಉನ್ನತ ಅಧಿಕಾರಿಗಳು ಮತ್ತು ಉದ್ಯಮಿಗಳು ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ ಪ್ರಕರಣವನ್ನು ಕೂಡಲೇ ಸಿಓಡಿ ಅಥವಾ ವಿಶೇಷ ತನಿಖಾ ದಳ ರಚಿಸಿ ತನಿಖೆಕೈಗೊಳ್ಳಬೇಕೆಂದು ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಗರದ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜೊಂದರಲ್ಲಿ ಉನ್ನತಾಧಿಕಾರಿಗಳು ಮತ್ತು ಉದ್ಯಮಿಗಳು ಜೂಜಿನಲ್ಲಿ ತೊಡಗಿಸಿಕೊಂಡಾಗ, ಪೊಲೀಸರು ಮಾಹಿತಿ ಮೇರೆಗೆ ದಾಳಿ ನಡೆಸಿ ರೈಡ್ ಮಾಡಿದ್ದರು.
ಆಗ ಸ್ಥಳದಲ್ಲಿ 51 ಲಕ್ಷ ರೂ.ಜಪ್ತಿ ಮಾಡಿಕೊಂಡ ಪೊಲೀಸರು ಒತ್ತಡಕ್ಕೆ ಮಣಿದು 51 ಲಕ್ಷ ಹಣ ತಾವೇ ತೆಗೆದುಕೊಂಡು ಎಫ್ಐಆರ್ ದಾಖಲಿಸದೆ ಹಾಗೇ ಬಿಟ್ಟಿದ್ದಾರೆ ಎಂಬ ವರದಿಯೊಂದು ದಿನ ಪತ್ರಿಕೆಯಲ್ಲಿ ವರದಿಯಾಗಿತ್ತು.
ಈ ಪ್ರಕರಣ ಸರ್ಕಾರಕ್ಕೆ ಮುಜಗರ ಉಂಟು ಮಾಡಿದ್ದು, ಕೂಡಲೇ ಸಿಓಡಿ ತನಿಖೆಗೆ ವಹಿಸಬೇಕು ಇಲ್ಲವಾದಲ್ಲಿ ತನಿಖಾ ದಳ ರಚಿಸಬೇಕು ಎಂದು ಸಿಎಂ,ಗೃಹ ಸಚಿವ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.