ಪ್ರಮುಖ ಸುದ್ದಿ
ದೇವರು ಕರೆದನೆಂದು ಉಕ್ಕಿ ಹರಿಯುವ ನದಿಗೆ ಹಾರಿದ ಭೂಪ… ಮುಂದೇನು?
ಯಾದಗಿರಿ : ಬಸವಸಾಗರ ಜಲಾಶಯ ಭರ್ತಿ ಆಗಿದ್ದು ಕೃಷ್ಣ ನದಿಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ, ಸೇತುವೆ ಬಳಿಗೆ ತೆರಳದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಸಂದೇಶ ರವಾನಿಸಿದೆ. ಆದರೆ, ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ಶರಣಪ್ಪ ಎಂಬ ಭೂಪ ಮಾತ್ರ ಸುರಪುರ ತಾಲ್ಲೂಕಿನ ತಿಂಥಣಿ ಸೇತುವೆ ಮೇಲಿಂದ ತುಂಬಿ ಹರಿಯುವ ಕೃಷ್ಣಾ ನದಿಗೆ ಹಾರಿದ ಘಟನೆ ನಡೆದಿದೆ.
ಮೌನೇಶ್ವರ ನನ್ನನ್ನು ಕರೆದಿದ್ದಾನೆ ಎಂದು ಹೇಳುತ್ತ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಗೆ ಜಂಪ್ ಮಾಡಿದ್ದಾನೆ. ಅಂದಾಜು 2 ಕಿ.ಮೀ. ವರೆಗೆ ಈಜುತ್ತ ಸುರಕ್ಷಿತವಾಗಿ ದಡ ಸೇರಿದ್ದಾನೆ. ಕೊನೆಗೂ ಶರಣಪ್ಪ ವೀರಘಟ್ಟದ ಆದಿ ಮೌನಲಿಂಗೇಶ್ವರ ಸನ್ನಿಧಾನ ಬಳಿಗೆ ಬಂದು ನಿತ್ರಾಣಗೊಂಡಿದ್ದಾನೆ. ಸದ್ಯ ಸ್ಥಳದಲ್ಲಿದ್ದ ಜನ ಶರಣಪ್ಪನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ.