ಶುಭ ಸುದ್ದಿ : ಜೋಗಜಲಪಾತಕ್ಕಿಳಿದು ನಾಪತ್ತೆಯಾಗಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಸೇಫ್
ಶಿವಮೊಗ್ಗ: ಸಾಹಸಿಗ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಸೇಫ್ ಆಗಿದ್ದಾರೆಂದು ತಿಳಿದು ಬಂದಿದೆ. ಮಂಜುನಾಥ್ ಎಂಬ ವ್ಯಕ್ತಿ ಜೋಗಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದು ಅವರ ಶವ ಹೊರತರಲು ತೆರಳಿದ್ದ ಜ್ಯೋತಿರಾಜ್ ನಿನ್ನೆಯಿಂದ ನಾಪತ್ತೆ ಆಗಿದ್ದರು. ಈ ಹಿಂದೆಯೂ ಅನೇಕ ಸಲ ಜ್ಯೋತಿರಾಜ್ ಜೋಗ ಜಲಪಾತಕ್ಕೆ ಇಳಿದು ಶವಗಳನ್ನು ಹೊರತೆಗೆದಿದ್ದರು. ಆದರೆ, ನಿನ್ನೆ ಮದ್ಯಾನ ಜಲಪಾತಕ್ಕೆ ಇಳಿದವರು ಇಂದು ಬೆಳಗ್ಗೆ 9ಗಂಟೆ ಆದರೂ ಪತ್ತೆ ಆಗಿದೇ ಇದ್ದದ್ದು ಜ್ಯೋತಿರಾಜ್ ಬಂಧು ಬಳಗ, ಸ್ನೇಹಿತರಲ್ಲಿ ಭಾರೀ ಆತಂಕವನ್ನು ಮೂಡಿಸಿತ್ತು.
ಇಂದು ಅಗ್ನಿಶಾಮಕ ದಳ , ಪೊಲೀಸರು ಹಾಗೂ ಬೆಂಗಳೂರಿನ ತಗ್ನರ ತಂಡ ಹಾಗೂ ಜ್ಯೋತಿರಾಜ್ ಬಳಗ ಜೋಗಜಲಪಾತಕ್ಕೆ ಇಳಿದು ರಕ್ಷಣಾ ಕಾರ್ಯ ನಡೆಸಿತ್ತು. ಡ್ರೋಣ್ ಕ್ಯಾಮರಾದ ಮೂಲಕ ಜ್ಯೋತಿರಾಜ್ ಪತ್ತೆ ಕಾರ್ಯ ನಡೆಸಲಾಗಿತ್ತು. ಇದೀಗ ಜ್ಯೋತಿರಾಜ್ ಪತ್ತೆ ಆಗಿದ್ದಾರೆ. ಆದ್ರೆ, ಜ್ಯೋತಿರಾಜ್ ನಿತ್ರಾಣವಾಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಜ್ಯೋತಿರಾಜ್ ಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.