ಈ ದಿನದ ರಾಶಿ ಭವಿಷ್ಯ ನೋಡಿ ಮುನ್ನಡಿ ಇಡಿ
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಮೃಗಶಿರ
ಋತು : ಗ್ರೀಷ್ಮ
ರಾಹುಕಾಲ 15:38 – 17:15
ಗುಳಿಕ ಕಾಲ 12:26 – 14:02
ಸೂರ್ಯೋದಯ 05:59:49
ಸೂರ್ಯಾಸ್ತ 18:51:21
ತಿಥಿ : ಅಮಾವಾಸ್ಯೆ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ದುಡಿಮೆಯನ್ನು ನಂಬಿ ಫಲವನ್ನು ಕಾಣಿರಿ. ಲಾಭಾಂಶದ ಲೆಕ್ಕಾಚಾರಗಳು ನಿಖರವಾಗಿ ನಡೆಯಲಿದೆ. ಕೆಲವೊಮ್ಮೆ ಆವರಿಸಿಕೊಳ್ಳುವ ಜಡತ್ವವನ್ನು ದೂರಮಾಡಿ. ಹಣಕಾಸಿನಲ್ಲಿ ಉತ್ತಮ ವ್ಯವಹಾರ ನಡೆಸುವ ಸಾಧ್ಯತೆ ಇದೆ. ಸಾಲಬಾದೆ ನಿಮ್ಮ ವೈಫಲ್ಯಕ್ಕೆ ಕನ್ನಡಿ ಇದ್ದ ಹಾಗೆ ಆದಷ್ಟು ಅದನ್ನು ಚುಕ್ತ ಮಾಡುವುದು ಒಳ್ಳೆಯದು. ಮಕ್ಕಳ ವಿಷಯದಲ್ಲಿ ಅಲಕ್ಷ ಬೇಡ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ವೃಷಭ ರಾಶಿ
ಹಣವನ್ನು ನೀರಿನಂತೆ ಪೋಲುಮಾಡುವ ನಿಮ್ಮ ಅಭ್ಯಾಸವನ್ನು ತಡೆಗಟ್ಟಿ. ಆತ್ಮೀಯರಲ್ಲಿ ನಿಮ್ಮ ಬಾಂಧವ್ಯ ಬೆಳೆಸಿಕೊಳ್ಳಲು ಮುಂದಾಗಿ. ನಿಮ್ಮ ನಿರೀಕ್ಷಿತ ಕಾರ್ಯಗಳನ್ನು ಇನ್ನೊಬ್ಬರ ಪಾಲಾಗದಂತೆ ನೋಡಿಕೊಳ್ಳಿ. ಮನೆ ಕಟ್ಟುವ ಯೋಜನೆ ಸದ್ಯಕ್ಕೆ ನೆರವೇರುವುದು ಅಸಾಧ್ಯವಾಗಿದೆ. ಗೃಹಪಯೋಗಿ ವಸ್ತುಗಳ ಖರೀದಿ ಮಾಡುವ ಸಾಧ್ಯತೆ ಕಂಡು ಬರಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಿಥುನ ರಾಶಿ
ಕುಟುಂಬದಲ್ಲಿನ ಹಿರಿಯರ ಆಕಾಂಕ್ಷೆಗಳಿಗೆ ಸೂಕ್ತವಾದ ಸ್ಪಂದನೆ ನೀಡಿ, ಅವರ ಹಿತಾಸಕ್ತಿಯನ್ನು ಕಡೆಗಣಿಸುವುದು ಬೇಡ. ನಿಮ್ಮ ಯೋಜಿತ ಕಾರ್ಯಗಳಿಗೆ ನಿಮ್ಮ ಸಂಗಾತಿಯು ಬೆಂಬಲವಾಗಿ ನಿಲ್ಲುವರು. ಹಣಕಾಸಿನ ವಿಷಯದಲ್ಲಿ ನಿಮ್ಮ ಯೋಜನೆಗಳನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸಿ. ಕಷ್ಟಪಟ್ಟು ಮಾಡಿದ ಕೆಲಸವು ಹೆಚ್ಚಿನ ಪ್ರತಿಫಲ ಸಿಗುವ ಹಾಗೆ ಮಾಡಲಿದೆ. ನಿಮ್ಮ ಜ್ಞಾನದ ಮಟ್ಟ ಉತ್ತಮ ಗೊಳ್ಳುತ್ತಾ ಸಾಗಬಹುದಾದ ದಿನವಿದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಹೊಸ ಪರಿಚಯದ ಸ್ನೇಹ ಅಷ್ಟೊಂದು ಉತ್ತಮವಾಗಿರುವುದಿಲ್ಲ, ಹಲವಾರು ಸಮಸ್ಯೆಗಳು ದಿಡೀರನೆ ಉದ್ಭವವಾಗಬಹುದು ಎಚ್ಚರವಿರಲಿ. ನಿಮ್ಮ ಕೆಲಸಗಳಲ್ಲಿ ಅತಿ ಹೆಚ್ಚಿನ ಪ್ರಶ್ನೆ ಇಂದು ಎದುರು ನೋಡುವ ಸಾಧ್ಯತೆ ಇದೆ. ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು ಇದರಿಂದ ನಿಮ್ಮಲ್ಲಿ ಹೆಚ್ಚಿನ ಬದಲಾವಣೆ ಕಾಣಬಹುದಾಗಿದೆ. ಹೊಸದಾಗಿ ಪ್ರಾರಂಭಿಸ ಬೇಕಾಗಿರುವ ಕೆಲಸದಲ್ಲಿ ನಿಮ್ಮ ಶ್ರಮ ಹೆಚ್ಚಿನ ಮಟ್ಟದಲ್ಲಿರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಆರ್ಥಿಕ ಚೈತನ್ಯದಿಂದ ಉತ್ತಮ ಸಾಧನೆ ನಿರೀಕ್ಷಿಸಬಹುದು. ಕಷ್ಟ ಹೇಳಿಕೊಂಡು ಬರುವ ಜನಗಳಿಗೆ ನಿಮ್ಮ ಸ್ಪಂದನೆ ಉತ್ತಮವಾಗಿರುತ್ತದೆ. ಜಂಟಿ ವ್ಯವಹಾರಗಳಲ್ಲಿ ಅಪನಂಬಿಕೆ ಮೂಡಬಹುದಾದ ಸಾಧ್ಯತೆಯಿದೆ. ಪ್ರತಿಯೊಂದು ಕಾರ್ಯಕ್ಷೇತ್ರದಲ್ಲಿ ಪತ್ನಿಯ ಹಿತ ಹಾಗೂ ಸಹಕಾರ ನಿರೀಕ್ಷಿಸಬಹುದು. ಅದೃಷ್ಟದ ಸ್ವರೂಪಗಳು ಈ ದಿನ ನೀವು ವೀಕ್ಷಿಸುತ್ತೀರಿ. ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಜನಬೆಂಬಲ ಪಡೆಯುವ ಸಾಧ್ಯತೆಯಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಮಾತು ಬಲ್ಲವನಿಗೆ ಜಗಳವಿಲ್ಲ ಅದರಂತೆ ನಿಮ್ಮ ಮಾತುಗಳು ನಿಮ್ಮ ಜೀವನ ಸುಧಾರಣೆಗೆ ತುಂಬಾ ಉಪಯುಕ್ತವಾಗಿದೆ. ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತಿರುವುದು ಒಳ್ಳೆಯದಲ್ಲ, ಯಾವುದಾದರೂ ಉದ್ಯೋಗದಲ್ಲಿ ಮುಂದುವರೆಯುವ ಪ್ರಯತ್ನ ಮಾಡುವುದು ಒಳ್ಳೆಯದು. ಮೋಜಿನ ಜೀವನಗಳು ಕ್ಷಣಿಕ ಸುಖ ತಂದುಕೊಡಬಹುದು ಆದರೆ ಅದು ನಿರಂತರವಲ್ಲ. ಆರ್ಥಿಕವಾಗಿ ಸಬಲರಾಗಲು ಪ್ರಯತ್ನ ಮಾಡಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿಮ್ಮ ಪ್ರಯತ್ನ ಮತ್ತು ಪ್ರೋತ್ಸಾಹ ಎರಡು ಅವಶ್ಯಕವಾಗಿದೆ. ವ್ಯವಹಾರವನ್ನು ಸೂಕ್ತ ದಾಖಲೆಗಳಿಂದ ಮಾಡುವುದು ಒಳ್ಳೆಯದು.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ತುಲಾ ರಾಶಿ
ವ್ಯವಹಾರದಲ್ಲಿನ ಗೆಲುವು ಹಾಗೂ ಲಾಭಂಶ ನಿಮಗೆ ಸಂತೋಷ ನೀಡುತ್ತದೆ. ಕುಟುಂಬದ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು, ಸ್ನೇಹಿತರು, ಸಂಬಂಧಿಗಳನ್ನು, ಆತ್ಮೀಯರನ್ನು, ಕಡೆಗಣಿಸಬೇಡಿ. ಕೆಲಸದ ಒತ್ತಡವು ನಿಮ್ಮ ಸ್ನೇಹ ಸಂಬಂಧವನ್ನು ಹಾಳುಗೆಡವಬಹುದು. ಸಾಲಕೊಡುವ ವಿಚಾರವನ್ನು ಇಂದು ನಿಮ್ಮ ಮನದಲ್ಲಿದ್ದರೆ ತೆಗೆದುಹಾಕಿ. ಪ್ರೇಮಿಗಳಿಗೆ ಒಳ್ಳೆಯ ದಿನವಿದು. ನಿಮ್ಮ ನಿರೀಕ್ಷಿತ ಯೋಜನೆಗಳಿಗಾಗಿ ಸ್ವಲ್ಪ ಕಾಯಬೇಕಾದ ಅನಿವಾರ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಬಹುದು ಎಚ್ಚರವಿರಲಿ. ಮಕ್ಕಳ ಸಾಧನೆಯು ತುಂಬಾ ಉತ್ತಮವಾಗಿರುತ್ತದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಕುಟುಂಬದ ಬೇಡಿಕೆಗಳನ್ನು ಪೂರೈಸುವ ಜವಾಬ್ದಾರಿ ನಿಮಗೆ ಬರಲಿದೆ. ಸಂಗಾತಿಯು ನಿಮಗಾಗಿ ಉತ್ತಮ ಉಡುಗೊರೆ ಹಾಗೂ ರುಚಿಯಾದ ಭೋಜನ ವ್ಯವಸ್ಥೆ ಮಾಡಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ತೊಂದರೆ ಬರಬಹುದು, ಉಳಿತಾಯಕ್ಕೆ ಆದ್ಯತೆ ನೀಡಿ. ವಿನಾಕಾರಣ ದುಂದುವೆಚ್ಚ ಮಾಡುವ ನಿಮ್ಮ ಮನಸ್ಥಿತಿಯನ್ನು ತೆಗೆದುಹಾಕಿ. ನಿಮ್ಮನ್ನು ತಮ್ಮ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುವ ಜನರಿದ್ದಾರೆ ಅದನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಿ. ಅನುಪಯುಕ್ತ ಕೆಲಸಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಕುಟುಂಬದ ಜೊತೆಗೆ ಕಾಲ ಕಳೆಯಿರಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಇಂದು ಕುತೂಹಲಕಾರಿ ಆದಂತಹ ನೆನಪಿನಲ್ಲಿಡುವ ಶುಭ ವಿಷಯಗಳು ಜರುಗುತ್ತದೆ. ನಿರೀಕ್ಷಿತ ಯೋಜನೆಗಳನ್ನು ಅತಿಬೇಗನೆ ಪೂರ್ಣ ಮಾಡುವಿರಿ. ಆರ್ಥಿಕವಾಗಿ ಉತ್ತಮ ವಹಿವಾಟು ನಡೆಯಲಿದೆ. ನಿಮ್ಮ ವ್ಯವಹಾರದಲ್ಲಿ ಮಧ್ಯವರ್ತಿಗಳನ್ನು ಸೇರಿಸಿಕೊಳ್ಳುವುದು ಬೇಡ. ಸಂಗಾತಿಯೊಡನೆ ಮನರಂಜನೆಗೆ ಹೊರಡುವ ತಯಾರಿ ಮಾಡುವಿರಿ. ಕಲಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ಕೆಲವು ವಿಷಯಗಳನ್ನು ದೊಡ್ಡದಾಗಿ ಬೆಳೆಸುವುದು ಬೇಡ, ಸಮಸ್ಯೆಯಿದ್ದರೂ ನಿಮ್ಮಲ್ಲಿ ಬಗೆಹರಿಸಿಕೊಳ್ಳಿ. ಕುಟುಂಬದಿಂದ ಶುಭವಾರ್ತೆ ಕೇಳುವ ಅವಕಾಶವಿದೆ. ಮಕ್ಕಳನ್ನು ಸರಿದಾರಿಗೆ ತರಲು ಪ್ರಯತ್ನಿಸಿ. ಮೋಸದ ವ್ಯವಹಾರ ಅಥವಾ ನಷ್ಟದ ಕೆಲಸವನ್ನು ಕೂಲಂಕುಶವಾಗಿ ತಿಳಿದುಕೊಂಡು ಪಾಲ್ಗೊಳ್ಳಿ. ಆತ್ಮೀಯರನ್ನು ಪ್ರೇಮದಿಂದ ಕಾಣಿರಿ ಇದರಿಂದ ನಿಮ್ಮ ಮೇಲೆ ಅವರಿಗೆ ಗೌರವ ಹೆಚ್ಚಾಗುತ್ತದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಕುಂಭ ರಾಶಿ
ಪರರ ಕೆಲಸಕ್ಕಾಗಿ ಈ ದಿನದ ಹೆಚ್ಚಿನ ಸಮಯ ಕಳೆಯುವಿರಿ. ಬಾಕಿ ಕೆಲಸಗಳನ್ನು ಪೂರ್ಣ ಮಾಡಲು ಹರಸಾಹಸ ಪಡುವ ಸಾಧ್ಯತೆ ಇದೆ. ವಸ್ತುಗಳನ್ನು ಎಲ್ಲೆಂದರಲ್ಲಿ ಇಡುವುದು ತಪ್ಪು, ಸಮಯಕ್ಕೆ ಸರಿಯಾಗಿ ಸಿಗದೆ ಮನೆಯಲ್ಲಿ ರಂಪಾರಾಮಾಯಣ ಆಗಬಹುದು ಎಚ್ಚರವಹಿಸಿ. ಸಂಬಂಧಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಂತಿರುವ ಕೆಲಸಗಳಿಗೆ ಇಂದು ಚಾಲನೆ ನೀಡುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ಕೆಲಸದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಅತ್ಯುತ್ತಮವಾಗಿದ್ದು ಈ ದಿನ ಲವಲವಿಕೆಯಿಂದ ಕೂಡಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ನೀವು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಭಗವಂತನ ನಾಮಸ್ಮರಣೆಯಿಂದ ಅತಿ ಕಷ್ಟದ ಕಾರ್ಯವನ್ನು ಸಹ ಅನಾಯಾಸವಾಗಿ ಮುಗಿಸುತ್ತೀರಿ. ಹಣಕಾಸಿನ ವ್ಯವಹಾರವು ನೀವು ಅಂದುಕೊಂಡಂತೆ ಯಶಸ್ವಿಯಾಗಿ ನಡೆಯಲಿದೆ. ಹೊಸದಾಗಿ ಪ್ರಾರಂಭ ಮಾಡಬೇಕಾಗಿರುವ ಕಾರ್ಯದ ಬಗ್ಗೆ ಕುಟುಂಬಸ್ಥರೊಡನೆ ಚರ್ಚಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉನ್ನತ ಸ್ಥಾನ ಅಲಂಕರಿಸುವಿರಿ. ಸಮಯಕ್ಕೆ ಸರಿಯಾಗಿ ಕೆಲಸದಲ್ಲಿ ಪಾಲ್ಗೊಳ್ಳುವುದು ನಿಮಗೆ ಒಳಿತು.
ಶುಭ ಸಂಖ್ಯೆ 4
ಗಿರಿದರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262