ಅಂಕಣಮಹಿಳಾ ವಾಣಿ

ಶಾಶ್ವತವಾಗಿರಲಿ ನಿನ್ನ ರಕ್ಷಣೆಯ ಕೋಟೆ…!! ರಕ್ಷಾ ಬಂಧನ ವಿಶೇಷ

ಶಾಶ್ವತವಾಗಿರಲಿ ನಿನ್ನ ರಕ್ಷಣೆಯ ಕೋಟೆ…!!

ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಲಿಲ್ಲ, ಒಡಹುಟ್ಟಲಿಲ್ಲ, ಕೂಡಿ ಆಡಲಿಲ್ಲ, ಆದರೂ ನಿನ್ನ ರಕ್ಷಣೆ‌ ನನಗೆ ಬೇಕು.

ಕಷ್ಟ ಬಂದಾಗ ಥಟ್ಟನೆ ನೆನಪಾಗುವುದೆ ಅಣ್ಣಾ ಎಂಬ ಎರಡಕ್ಷರ. ಪ್ರತಿ ಹುಡುಗಿಯರ ಮೊದಲ ಬಾಯ್ ಫ್ರೆಂಡ್, ಬೆಸ್ಟ್ ಫ್ರೆಂಡ್, ಗೈಡರ್, ಗಾರ್ಡಿಯನ್, ಜೀವನ ಗೆಳಯ ಎಲ್ಲವೂ ಅವಳ ಒಡಹುಟ್ಡಿದ ಸಹೋದರರು. ಈ ಹಬ್ಬಕ್ಕೆ ವಿಶೇಷವಾದ ಮಹತ್ವವಿದೆ.

ಭಾರತದಲ್ಲಿ ರಕ್ಷಾ ಬಂಧನ ಆಚರಣೆಗೆ ಇರುವ ಮಹತ್ವ:-
ಭಾರತದಲ್ಲಿ ರಕ್ಷಾ ಬಂಧನಕ್ಕೆ ಒಂದು ವಿಶೇಷವಾಗಿರುವ ಸ್ಥಾನವಿದೆ. ಇದು ಶ್ರಾವಣ ಮಾಸದಲ್ಲಿ ಬರುವ ನೂಲ ಹುಣ್ಣಿಮೆಯಂದು ಆಚರಿಸುವ ಒಂದು ಹಬ್ಬ. ಈ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ಗಟ್ಟಿ ಗೊಳಿಸುವ ಹಬ್ಬ ಇದಾಗಿದೆ.

ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಹೌದು, ಮೊದಲೆಲ್ಲಾ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ’ ಹಬ್ಬವಾಗಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಿದ್ದಾರೆ.

ಅಲ್ಲದೆ ಇದಕ್ಕೆ ಮಹಾಭಾರತದ ಕಾಲದಿಂದಲೂ ಇತಿಹಾಸ ಇದೆ ಎನ್ನುವ ಪ್ರತೀತಿ ಇದೆ. ಹೌದು ಯುದ್ದದ ಸಂದರ್ಭದಲ್ಲಿ ಸಾಮಾನ್ಯ ಜನರನ್ನು ರಕ್ಷಿಸುವ ಸಲುವಾಗಿ ಶ್ರೀಕೃಷ್ಣನು ದುಷ್ಟರಾಜ ಶಿಶುಪಾಲನನ್ನು ಕೊಲ್ಲುತ್ತಾನೆ. ಈ ವೇಳೆ ಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಬರಲು ಶುರುವಾದಾಗ ಕೃಷ್ಣ ಯುದ್ಧ ಭೂಮಿದಿಂದ ನಿರ್ಗಮಿಸುತ್ತಾನೆ. ಆಗ ಇದನ್ನು ನೋಡಿದ ದ್ರೌಪದಿ ತನ್ನ ಸೀರೆ ಹರಿದು ರಕ್ತಸ್ರಾವವನ್ನು ತಡೆಯಲು ಅವನ ಮಣಿಕಟ್ಟಿನ ಸುತ್ತಲೂ ಬಟ್ಟೆ ಕಟ್ಟುತ್ತಾಳೆ.

ತನ್ನ ಬಗ್ಗೆ ದ್ರೌಪದಿಯ ಕಾಳಜಿಯನ್ನು ಅರಿತುಕೊಂಡನು, ಆಕೆಗೆ ಭವಿಷ್ಯದಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾನೆ. ಇದಕ್ಕೆ ಪೂರಕವಾಗಿ ಕೆಲವೇ ವರ್ಷಗಳ ನಂತರ, ಪಾಂಡವರು ಪಗಡೆ ಆಟದಲ್ಲಿ ದ್ರೌಪದಿಯನ್ನು ಸೋಲುತ್ತಾರೆ ಆಗ ಕೌರವರು ಅವಳ ಸೀರೆಯನ್ನು ಎಳೆಯಲು ಪ್ರಾರಂಭಿಸುತ್ತಾರೆ.

ಆಗ ಕೃಷ್ಣನು ಆಕೆಯ ನೆರವಿಗೆ ಧಾವಿಸಿ ತನ್ನ ದೈವಿಕ ಶಕ್ತಿದಿಂದ ವಸ್ತ್ರ ಬಿಟ್ಟು ಮಾನ ರಕ್ಷಣೆ ಮಾಡುತ್ತಾನೆ. ಅಂದಿನಿಂದ ಭಾರತದಲ್ಲಿ ರಕ್ಷಾ ಬಂಧನವನ್ನು ಆಚರಿಸುವ ಪರಂಪರೆ ಬೆಳೆದು ಬಂದಿದೆ ಎಂದು ಪೂರ್ವಜರು ಹೇಳುತ್ತಾರೆ.

ರಕ್ಷಾ ಬಂಧನ ಹಬ್ಬವನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಹೆಸರಿನಿಂದ ಕರೆಯಲ್ಪಡುತ್ತದೆ, ಇದಕ್ಕೆ ಕೆಲವು ಕಡೆ ಸಲುನೋ, ಸಿಲೋನೋ, ರಾಕ್ರಿ ಎಂದು ಕರೆಯುತ್ತಾರೆ.

ಸಿಹಿ-ಕಹಿ ನೆನಪುಗಳ ಆಗರ:-
ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ-ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ. ಆದರೆ ನನಗೆ ಸ್ವಂತ ಅಣ್ಣ-ತಮ್ಮಂದಿರು ಇಲ್ಲಾ ಬುದ್ಧಿ ಬಂದಾಗಿನಿಂದಲು ಅಪ್ಪನ ಗೆಳೆಯರ ಮಕ್ಕಳು, ದೊಡ್ಡಪ್ಪ- ಚಿಕ್ಕಪ್ಪನ ಮಕ್ಕಳನ್ನು ಅಣ್ಣ ಎಂದು ಭಾವಿಸುದ್ದೇನೆ.

ರಾಖಿ ಕಟ್ಟಿದರೆ ಮಾತ್ರ ಅಣ್ಣ ತಂಗಿಯ ರಕ್ಷಣೆ, ತಂಗಿ ಅಣ್ಣನ ರಕ್ಣಣೆ ಮಾಡುತ್ತಾರೆ ಎನ್ನುವುದು ಸುಳ್ಳು. ಶುದ್ಧ ಮನಸ್ಸಿನಿಂದ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಸಾಕಾಗುತ್ತದೆ. ಎಲ್ಲೇ ಇರಲಿ ಹೇಗೆ ಇರಲಿ ನನ್ನ ಪ್ರೀತಿಯ ಅಣ್ಣಂದಿರ ರಕ್ಷಣೆ ಮಾಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಆಶೀರ್ವಾದದ ರಕ್ಷಣೆ ಇರಲಿ. ನನ್ನ ಎಲ್ಲಾ ಸಹೋದರರಿಗೆ ರಕ್ಷಾ ಬಂಧನದ ಶುಭಾಶಯಗಳು.

ಕಾಂಚನಾ. ಬಿ. ಪೂಜಾರಿ.

ಕ.ರಾ.ಅ.ಮ.ವಿವಿಯ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ
ದ್ವೀತಿಯ ವರ್ಷದ ವಿದ್ಯಾರ್ಥಿನಿ
ವಿಜಯಪುರ.

Related Articles

One Comment

Leave a Reply

Your email address will not be published. Required fields are marked *

Back to top button