ಹೆಸರಿಲ್ಲದ ಈ ಬಂಧನಕ್ಕೊಂದು ಹೆಸರಿಡಿ..! ಕಾಂಚನಾ ಪೂಜಾರಿ ಬರಹ
ಹೆಸರಿಲ್ಲದ ಬಂಧನ…!!
ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಮಾದ್ಯಮಗಳು ನಮ್ಮ ಯುವ ಜನಾಂಗದ ಮೇಲೆ ಸಕರಾತ್ಮಕವಾಗಿ ಅಥವಾ ನಕರಾತ್ಮಕವಾಗಿ ಪರಿಣಾಮಗಳನ್ನು ಬಿರುತ್ತಲಿವೆ. ಆದರೆ ಮಾಧ್ಯಮಗಳ ಪ್ರಯೋಜನ ಹೇಗೆ ಪಡೆಯುವುದು ಎನ್ನುವುದಕ್ಕಿಂತ ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿದೆ.
ಅರೆ..ಇದೇನು.? ಹೀಗೆ ಹೇಳ್ತಿದ್ದಾಳೆ ಅಂತ ಯೋಚಿಸುತ್ತಿದ್ದಿರಾ..? ಹಾಗಾದರೆ ಮುಂದೆ ಓದಿ…
ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುತ್ತಿದ್ದ ಒಬ್ಬ ಹುಡುಗನಿಗೆ ಅಲ್ಲೇ ಒಬ್ಬಳು ಹುಡುಗಿಯ ಪರಿಚಯ ಆಯಿತು.
ಇಬ್ಬರಲ್ಲೂ ಸ್ನೇಹ ಚಿಗುರಿತು. ಇಬ್ಬರ ಮಧ್ಯೆ ಆರಂಭದ ದಿನಗಳಲ್ಲಿ ಸಂಕೋಚದ ಸ್ವಭಾವವಿತ್ತು. ದಿನ ಕಳೆದಂತೆ ಬಾರೋ, ಹೋಗೊ ಎನ್ನುವ ಸಲಿಗೆ ಬೆಳೆಯಿತು.
ಈ ಮಧ್ಯದಲ್ಲಿ ತುಸು ಕೋಪ, ಹುಸಿ ಮುನಿಸು, ಪ್ರೀತಿ, ಅಕ್ಕರೆ, ತುಂಟಾಟ, ಮನರಂಜನೆ, ವಿಶ್ವಾಸ, ನಂಬಿಕೆ, ನಗು, ಅಳು ಎಲ್ಲವೂ ಇತ್ತು.
ಆದರೆ ಒಂದು ದಿನ ನಾವಿಬ್ಬರು ಸ್ನೇಹಿತರಂತೆ ಒಬ್ಬರಿಗೊಬ್ಬರು ಹೆಗಲು ನೀಡುತ್ತೇವೆ ಅದರೆ ಸ್ನೇಹಿತರು ಅಲ್ಲಾ…!
ನಾವಿಬ್ಬರು ಪ್ರೇಮಿಗಳಂತೆ ಮಾತಾಡಿ ಒಬ್ಬರಿಗೊಬ್ಬರು ಮುದ್ದು ಮಾಡುತ್ತೇವೆ ಆದರೆ ಪ್ರೇಮಿಗಳು ಅಲ್ಲಾ…!!
ನಾವಿಬ್ಬರು ಒಬ್ಬರಿಗೊಬ್ಬರು ರಕ್ಷಣೆ ಮಾಡ್ತಿವಿ ಅಂತ ಹೊಣೆ ಹೊತ್ತಿದ್ದೇವೆ ಆದರೆ ಒಡಹುಟ್ಟಿದವರು ಅಲ್ಲಾ…!!
ನಮ್ಮಿಬ್ಬರ ಸಂಬಂಧ ಸ್ನೇಹನಾ.? ಪ್ರೀತಿನಾ.? ಅಥವಾ ಕರುಳಬಳ್ಳಿ ಬೆಸೆದವರಾ.? ಒಡಹುಟ್ಟಿದವರಾ.? ಇವ್ಯಾವದು ಅಲ್ಲಾ..ಹಾಗಾದರೆ ಬೇರೆ ಏನು.? ಮತ್ಯಾವ ಕಾರಣಕ್ಕೆ ನಾವಿಷ್ಟೊಂದು ಕ್ಲೋಸ್ನೆಸ್ ಆಗಿರೋದು..ಇಂಥಹ ಸಂಬಂಧಕ್ಕೆ ಹೆಸರೇನು.? ಎಂದು ಇಬ್ಬರಲ್ಲಿ ಪ್ರಶ್ನೆ ಉದ್ಭವಿಸುತ್ತದೆ.
ಆಗ ಇಬ್ಬರು ಮೌನವಾಗಿ ಯೋಚನೆ ಮಾಡುತ್ತಾರೆ. ಇಬ್ಬರಲ್ಲೂ ಉತ್ತರವಿಲ್ಲ..
ಹಾಗಾದರೆ ಈ ಸಂಬಂಧಕ್ಕೆ ನೀವಿಡುವ ಹೆಸರೇನು.?
ಸ್ನೇಹ, ಪ್ರೀತಿ ವಿಶ್ವಾಸ, ನಂಬಿಕೆ ತುಂಬಿರುವ ಹೃದಯಗಳು ಸದಾ ಹೀಗೆ ತುಡಿಯುತ್ತವೆ… ಮಿಡಿಯುತ್ತವೆ..ಅಲ್ಲವೆ.? ಎಲ್ಲವೂ ಒಂದು ಸಂಬಂಧದ ಬಂಧನದಲ್ಲಿ ಬಂಧಿಸಲು ಸಾಧ್ಯವಿಲ್ಲ.
ಈ ಮುಗ್ಧ ಮನಸ್ಸುಗಳಿಗೆ ಸಂಬಂಧಗಳ ಸಂಕೋಲೆಗಳಿಲ್ಲದೆ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳಂತೆ ಹಾಂ..ಹಾಂ ನನ್ನಸಿಕೆ ಪ್ರಕಾರ ಈ ಸಂಬಂಧಕ್ಕೆ ಸ್ವಚ್ಛಂದ ಭಾವಗಳ ಒಡನಾಟ. ಬಾನಂಗಳದಿ ಯಾವುದೇ ತುಡಿತವಿಲ್ಲದೆ..ಯಾವ ರಾಜನ ಅಂಕುಶವಿಲ್ಲದೆ..ವಾಯು ವಿಹಾರ ನಡೆಸುವ ಸಮೂಹ ಪಕ್ಷಿಗಳಂತೆ ಸದಾಕಾಲವು ಹಾಯಾಗಿ ನಿಶ್ಚಿಂತೆಯ ಭಾವದಿ ನಿಸ್ವಾರ್ಥ ಮನೋಭಾವದಿ ನಿಸ್ಸಂಕೋಚವಾಗಿ ಸುಖಿ ವಿಹಾರ ನಡೆಸುವದು ಲೇಸಲ್ಲವೇ..? ನೇವೇನಂತಿರಿ…?
-ಕಾಂಚನಾ. ಬಿ. ಪೂಜಾರಿ
ಕ.ರಾ.ಅ.ಮ.ವಿವಿಯ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ
ದ್ವಿತೀಯ ವರ್ಷದ ವಿದ್ಯಾರ್ಥಿನಿ.
ವಿಜಯಪುರ.