ಪ್ರಮುಖ ಸುದ್ದಿಸಂಸ್ಕೃತಿ

ಕಾರಹುಣ್ಣಿಮೆ ಸಂಭ್ರಮಃ ಹಳಕಟ್ಟಿ ಪರಿವಾರದ ಎತ್ತುಗಳ ಮೆರವಣಿಗೆ

ಶಹಾಪುರಃ ಹಳಕಟ್ಟಿ ಪರಿವಾರದ ಎತ್ತುಗಳ ಸಾಂಪ್ರದಾಯಿಕ ಮೆರವಣಿಗೆ

ಒಂದುವರೆ ಲಕ್ಷದ ಜೋಡೆತ್ತುಗಳ ಮೆರವಣಿಗೆ

ಯಾದಗಿರಿ, ಶಹಾಪುರಃ ಕಾರಹುಣ್ಣಿಮೆ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ಎತ್ತುಗಳ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳ ಮೂಲಕ ಸಂಭ್ರಮದಿಂದ ನಡೆಸಲಾಯಿತು.

ನಗರದ ಕೋಲಿ ಸಮಾಜದ ಹಳ್ಳಕಟ್ಟಿ ಪರಿವಾರದವರ ಮನೆಯ ಅಂದಾಜು ಒಂದುವರೆ ಲಕ್ಷ ರೂ.ವೆಚ್ಚದ ಜೋಡೆತ್ತುಗಳನ್ನು ಸಿಂಗರಿಸಿ ದಿಗ್ಗಿಬೇಸ್ ಮೂಲಕದಿಂದ ಗಂಗಾ ನಗರದ ಸಜ್ಜನಶಟ್ಟಿ ಅವರ ಮನೆವರೆಗೂ ಮೆರವಣಿಗೆ ಜರುಗಿತು.

ಭೀಮರಾಯ ಹಳಕಟ್ಟಿ ಎಂಬುವರಿಗೆ ಸೇರಿದ್ದ ಜೋಡೆತ್ತುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಪ್ರತಿ ವರ್ಷ ಸಾಂಪ್ರದಾಯಿಕವಾಗಿ ಕರಿ ಹರಿಯುವ ಮೊದಲು ಜೋಡೆತ್ತುಗಳ ಮೆರವಣಿಗೆ ನಡೆಸಲಾಗುತ್ತದೆ.

ಇಲ್ಲಿ ಪ್ರತಿ ವರ್ಷ ಹಳಕಟ್ಟಿ ಕುಟುಂಬದವರ ಎತ್ತುಗಳನ್ನು ಮರೆಸಲಾಗುತ್ತಿದೆ. ಹಳಕಟ್ಟಿ ನಗರದ ಕೋಲಿ ಸಮಾಜದ ದೊಡ್ಡ ಕುಟುಂಬವಾಗಿದ್ದು, ಜೊತೆಗೆ ಸಜ್ಜನಶೆಟ್ಟಿ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನಡೆದು ಬಂದಿದೆ.

ಜಾಹಿರಾತು

 

ನಂತರ ದಿಗ್ಗಿ ಬೇಸ್ ನಲ್ಲಿ ಹಸಿರು ತೋರಣವನ್ನು ಅಗಸಿ ಬಾಗಿಲಿಗೆ ಕಟ್ಟಲಾಗುತ್ತದೆ. ಅದನ್ನು ಹರಿದು ಎತ್ತುಗಳು ಮುಂದೆ ಓಡಬೇಕು. ಯಾವ ಬಣ್ಣದ ಎತ್ತು ಕರಿ ಹರಿದಿದೆ ಎಂಬುದನ್ನು ಗುರುತಿಸಿ ಆ ಪ್ರಕಾರ ಈ ವರ್ಷ ಮಳೆ ಬೆಳೆ ಚನ್ನಾಗಿ ಆಗಲಿದೆಯೇ ಎಂಬ ಕುರಿತು ರೈತರು ಲೆಕ್ಕಚಾರ ಹಾಕಿಕೊಳ್ಳುತ್ತಾರೆ. ಈ ನಂಬಿಕೆ ಮೊದಲಿನಿಂದಲೂ ಬಂದಿದೆ.

ರೈತನ ಬೆನ್ನೆಲೆಬು ಎತ್ತುಗಳ ಮೂಲಕವೇ ಅವರು ಈ ವರ್ಷದ ಬಿತ್ತನೆ ಮಾಡುವ, ಬೆಳೆಯುವ ಬೆಳೆ ಮತ್ತು ಮಳೆ ಕುರಿತು ತಿಳಿದುಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ  ಸಮಾಜದ ಮುಖಂಡರಾದ ನಾಗಪ್ಪ ತಹಶೀಲ್ದಾರ, ಯಲ್ಲಪ್ಪ ಹಳಕಟ್ಟಿ, ಧರ್ಮಣ್ಣ ಸೇರಿದಂತೆ ಸಜ್ಜನಶೆಟ್ಟಿ ಕುಟುಂಬಸ್ಥರು ಹಾಗೂ ಯುವ ಮುಖಂಡರಾದ ರಾಮು ತಹಶೀಲ್, ಮಂಜುನಾಥ ಚಟ್ಟಿ, ಅಯ್ಯಪ್ಪ ಹಯ್ಯಾಳಕರ್ ಇತರರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button