ಯೋಧರಾಗ್ತೀವಿ ಎನ್ನಬೇಕು ಮಕ್ಕಳು-ನ್ಯಾ.ಪ್ರಭು ಬಡಿಗೇರ
ಕಾರ್ಗಿಲ್ ವಿಜಯೋತ್ಸವ ಆಚರಣೆ
ದೇಶ ರಕ್ಷಣೆಗೆ ವೀರ ಸೇನಾನಿಗಳಾಗಿ -ನ್ಯಾ.ಬಡಿಗೇರ
ಯಾದಗಿರಿ, ಶಹಾಪುರಃ ಬಾಲ್ಯದಿಂದಲೇ ಶಿಸ್ತು ಸಂಯಮ ಅಳವಡಿಸಿಕೊಂಡಲ್ಲಿ ಮುಂದೆ ದೇಶದ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯವಿದೆ. ಸಾಧಕನಿಗೆ ಮೊದಲು ಶಿಸ್ತು ಸಂಯಮ ಅಗತ್ಯ ಎಂದು ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್.ಬಡಿಗೇರ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ, ನಿಸರ್ಗ ವಿವಿದುದ್ದೇಶ ಸೇವಾ ಸಂಸ್ಥೆ ಹಾಗೂ ಹಳಿಸಗರದ ಪ್ರತಿಕ್ಷ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಮುಂದೆ ಏನಾಗಬಯಸುತ್ತೀಯಾ ಎಂದು ಪ್ರಶ್ನೆ ಹಾಕಿದರೆ ತಕ್ಷಣ ಬಾಯಿಯಿಂದ ಬರುವುದು, ಡಾಕ್ಟರ್, ಇಂಜಿನೀಯರ್ ಇತ್ತೀಚೆಗೆ ಡಿಸಿ ಎಸಿ ಸೇರಿದಮತೆ ಕ್ಲಾಸ್ ಒನ್ ಆಫೀಸರ್ ಹೆಸರೇ ಹೇಳುತ್ತಾರೆ. ಆದರೆ ಯಾರೊಬ್ಬರ ಬಾಯಿಯಲ್ಲೂ ದೇಶ ಕಾಯುವ ನಮ್ಮೆಲ್ಲರನ್ನು ರಕ್ಷಿಸುತ್ತಿರುವ ಯೋಧನಾಗುತ್ತೇನೆ ಎಂದು ಯಾರೊಬ್ಬರು ಹೇಳುವದಿಲ್ಲ ಇದು ವಿಪರ್ಯಾಸ.
ನಿಜಕ್ಕೂ ಯೋಧರು ಚಳಿ ಮಳೆ ಗಾಳಿಗೆ ಮೈವೊಡ್ಡಿ ತಮ್ಮ ಜೀವವೇ ಒತ್ತಿಟ್ಟು ನಮ್ಮೆಲ್ಲರನ್ನು ಕಾಯುತ್ತಿದ್ದಾರೆ ಅವರೂ ನಿಜಕ್ಕೂ ಹಿರೋಗಳು. ದೇವರ ನೆನಸಿಕೊಳ್ಳುವ ಮುನ್ನಾ ನಿತ್ಯ ಯೋಧರನ್ನು ನೆನಸಿಕೊಂಡು ಅವರಿಗೆ ಆಯುರಾರೋಗ್ಯ ವೈರಿಗಳನ್ನು ಎದುರಿಸುವ ಇನ್ನಷ್ಟು ಶಕ್ತಿ ಕೊಡಲಿ ಅಂತಹ ವೀರ ಯೋಧರನ್ನು ಹೆತ್ತವರಿಗೆ ದೇವರು ಸದಾ ಒಳಿತನ್ನೆ ಮಾಡಲಿ ಎಂದು ಪ್ರಾರ್ಥಿಸಬೇಕು ಇದು ನಮ್ಮೆಲ್ಲರ ಕರ್ತವ್ಯ ಎಂದರು.
ಮಕ್ಕಳಿ ಂಭಾರತೀಯ ಯೋಧರ ಜೀವನ ಗಾಥೆ, ಚರಿತ್ರೆ ಓದಿ ತಿಳಿದುಕೊಳ್ಳಬೇಕು. ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸುವ ಅವರ ಹೋರಾಟ ಸಿನಿಮಾದಲ್ಲಿಯೇ ನೋಡಿ ನಮಗೆಲ್ಲ ರೋಮಾಂಚನವೆನಿಸುತ್ತದೆ. ನಿಜಕ್ಕೂ ಅವರ ಭಾರತಾಂಬೆಯ ಮಕ್ಕಳು ಧೀರರು ಶೂರರು ತಾಯಿ ಭಾರತಾಂಬೆಯ ಸೇವೆ ಸಲ್ಲಿಸುವ ಭಾಗ್ಯ ಅವರಿಗೆ ದೊರೆತಿದೆ. ಮಕ್ಕಳು ಸಹ ಮುಂದೆ ವೀರ ಸೇನಾನಿಗಳಾಗಿ ರಾಷ್ಟ್ರ ರಕ್ಷಣೆಯಲ್ಲಿ, ಸುಭದ್ರ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಕೈಜೋಡಿಸಬೇಕು ವೀರ ಸೇನಾನಿಗಳಾಗಿ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಧೀಶ ಹಣಮಂತರಾವ್ ಕುಲಕರ್ಣಿ ಮಾತನಾಡಿ, ದೇಶಿ ಸಂಪನ್ಮೂಲ ಕಂಡ ಪರದೇಶಿಯರು ಅಕ್ರಮವಾಗಿ ಭಾರತಕ್ಕೆ ನುಸುಳಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ದೇಶದ ಸಂಪನ್ಮೂಲ ಲೂಟಿ ಮಾಡುತ್ತ ಕೆಲಸ ಮಾಡುತ್ತಿದೆ. ಇಂತಹದ್ದೆಲ್ಲವನ್ನು ತಡೆಯುವ ಕೆಲಸವನ್ನು ನಮ್ಮ ಭಾರತೀಯ ಸೈನ್ಯ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.
ಅಲ್ಲದೆ ಪಾಕಿಸ್ತಾನ ಮತ್ತು ಚೀನಾ ದೇಶ ಗಡಿ ಭಾಗದಲ್ಲಿ ಕ್ಯಾತೆ ತೆಗೆಯುತ್ತಿದ್ದು, ನಮ್ಮ ಸೈನಿಕರು ಅದಕ್ಕೆ ತಕ್ಕ ಉತ್ತರ ನೀಡುತ್ತಿದ್ದಾರೆ. ಸಿಯಾಚೀನ ನಂತಹ ಜೀರೋ ಡಿಗ್ರಿ ಸೆಲ್ಸಿಯಸ್ ಚಳಿಯಲ್ಲಿ ಯೋಧರು ಜೀವದ ಹಂಗು ತೊರೆದು ನಮ್ಮ ದೇಶ ಕಾಪಾಡುವಲ್ಲಿ ಶ್ರಮಿಸುತ್ತಿದ್ದಾರೆ. ನಿಜಕ್ಕೂ ಪ್ರಶಂಸನಾರ್ಹರು.
ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಪಡೆದ ನಗರದ ಹಳಿಸಗರ, ಗೋಗಿ ಭಾಗದ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸನೌಸಂಘ ಅಧ್ಯಕ್ಷ ಸುಧಾಕರ ಗುಡಿ, ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್ಫ್ರೆಡ್, ಕಾರ್ಯದರ್ಶಿ ಸಂತೋಷ ಸತ್ಯಂಪೇಟ ಉಪಸ್ಥಿತಿರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಡ ಶಾಲಾ ಮುಖ್ಯಗುರು ರವಿಂದ್ರ ದೇವರಗುಡಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹುತಾತ್ಮ ವೀರಯೋಧರಿಗಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಮುಖ್ಯ ಗುರು ರವೀಂದ್ರ ದೇವರಗುಡಿ ಅಧ್ಯಕ್ಷತೆವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್ಫ್ರೆಡ್, ಸಂತೋಷ ಸತ್ಯಂಪೇಟೆ, ಮಲ್ಲಯ್ಯ ಪೋಲಂಪಲ್ಲಿ, ಸುಧಾಕರ ಗುಡಿ ಇತರರಿದ್ದರು.