ಕಾಶ್ಮೀರದಲ್ಲಿ ಸಿಲುಕಿರುವ ಪ್ರಭಾಕರ ಜುಜಾರೆ ಕುಟುಂಬ – ಸಂಪರ್ಕಿಸಿದ ವಿನಯವಾಣಿ
ಪ್ರಭಾಕರ ಜುಜಾರೆ ಮೂಲತಃ ಸಗರನಾಡಿನವರು, ಪ್ರಸ್ತುತ

ಕಾಶ್ಮೀರದಲ್ಲಿ ಸಗರನಾಡಿನ ಮೂಲ ನಿವಾಸಿ ಪ್ರಭಾಕರ ಜುಜಾರೆ ಕುಟುಂಬಃ ಸೇಫ್
ಕಲ್ಬುರ್ಗಿ ಸಹಾಯವಾಣಿ ಸಿಬ್ಬಂದಿ ದುರ್ನಡತೆ ಃ ಬೆಂಗಳೂರಿನ ಸಹಾಯವಾಣಿ ಸಿಬ್ಬಂದಿ ಸ್ಪಂಧನೆ
ಸಹಾಯವಾಣಿ ಸಂಪರ್ಕಿಸಿ ಮಾಹಿತಿ ನೀಡಿದ ವಿನಯವಾಣಿ
ವಿನಯವಾಣಿ
ವಿವಿ ಡೆಸ್ಕ್ಃ ಸಗರನಾಡಿನ ಮೂಲ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದ ಪ್ರಭಾಕರ ಬಿ. ಜುಜಾರೆ ಮತ್ತು ಪತ್ನಿ ಹಾಗೂ ಇಬ್ಬರು ಮಕ್ಕಳು ಬೆಂಗಳೂರಿನಿಂದ ಬೇಸಿಗೆ ರಜೆ ಹಿನ್ನೆಲೆ ಪ್ರವಾಸಕ್ಕೆ ತೆರಳಿದ್ದು, ಸದ್ಯ ಅವರು ಸೇಫ್ ಆಗಿದ್ದಾರೆ.
ವಿನಯವಾಣಿಗೆ ಅವರ ಸಂಪರ್ಕ ಲಭಿಸಿದ್ದು, ಕಾಲ್ ಮಾಡಿ ಕ್ಷೇಮವಾಗಿರುವ ಕುರಿತು ಮಾಹಿತಿ ಪಡೆದುಕೊಂಡಿದ್ದು, ಪ್ರಭಾಕರ ಜುಜಾರೆ ಅವರು ಸದ್ಯ ಅವರ ಕುಟುಂಬ ಸಮೇತ ಶ್ರೀನಗರ ಕಡೆ ಪ್ರಯಾಣ ಬೆಳೆಸಿದ್ದು, ಇನ್ನೂ ಒಂದುವರೆ ತಾಸಿನಲ್ಲಿ ಶ್ರೀನಗರ ತಲುಪಲಿದ್ದೇವೆ. ಆದರೆ ಪತ್ನಿ, ಮಕ್ಕಳು ತುಂಬಾ ಭಯಭೀತರಾಗಿದ್ದು, ಕೂಡಲೆ ನಮ್ಮೂರು ಬೆಂಗಳೂರಿನ ಕಡೆ ವಾಪಸ್ ಹೋಗಬೇಕಿದೆ ಎಂಬ ಧಾವಂತವನ್ನು ಅವರು ವಿನಯವಾಣಿ ಮುಂದೆ ತೋಡಿಕೊಂಡಿದ್ದಾರೆ.
ಅವರ ಫ್ಲೈಟ್ ಇನ್ನೂ ಎರಡು ದಿವಸ ಆದ ನಂತರ ಬುಕ್ಕಿಂಗ್ ಇದ್ದು, ಈ ಘಟನೆಯಿಂದ ಆತಂಕದ ವಾತಾವರಣ ಇರುವ ಕಾರಣ ವಾಪಸ್ ಬೆಂಗಳೂರಿಗೆ ತಲುಪಲು ವ್ಯವಸ್ಥೆಗಾಗಿ ಪರದಾಡುತ್ತಿದ್ದೇವೆ ಎಂಬ ಅಭಿಪ್ರಾಯ ತೋಡಿಕೊಂಡರು. ರಾಜ್ಯ ಸರ್ಕಾರ ಒದಗಿಸಿರುವ ಸಹಾಯಕ್ಕಾಗಿ ಹಂಬಲಿಸುತ್ತಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲವೆಂಬ ಅಳಲು ವ್ಯಕ್ತಪಡಿಸಿದರು.
ವಿನಯವಾಣಿ ಅವರಿಗೆ ಧೈರ್ಯ ತುಂಬಿ, ಕೂಡಲೆ ಬೆಂಗಳೂರಿನ ಸಹಾಯವಾಣಿಗೆ ಕಾಲ್ ಮಾಡಿ ಸಮರ್ಪಕ ಮಾಹಿತಿ ಒದಗಿಸುವ ಮೂಲಕ ಸಹಕಾರ ನೀಡಿತು. ಬೆಂಗಳೂರಿನ ಸಹಾಯವಾಣಿ ರಿಸೀವರ್ ಸಹ ಉತ್ತಮ ಸ್ಪಂಧನೆ ನೀಡಿದರು.
ಆದರೆ..
ಕಲ್ಬುರ್ಗಿ ಸಹಾಯವಾಣಿ ಸಿಬ್ಬಂದಿಯ ದುರ್ನಡತೆ – ಈ ಬಗ್ಗೆ ಹೇಳಲೇಬೇಕು.
ಪ್ರಭಾಕರ ಜುಜಾರೆ ಅವರು ಮೂಲತಃ ಸಗರನಾಡಿನ ಸುರಪುರ ತಾಲೂಕಿನ ರಂಗಂಪೇಟೆ ಊರಿನವರು. ಆದರೆ ಅವರು ಈಚೆಗೆ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ.
ಪ್ರಸ್ತುತ ಸಂದಿಗ್ಧ ಸ್ಥಿತಿಯಲ್ಲಿ ಕಲ್ಬುರ್ಗಿ ಯ ಸಹಾಯವಾಣಿ ಸಿಬ್ಬಂದಿ ಸಂಪರ್ಕಿಸಿ ಮಾಹಿತಿ ನೀಡಿದರೆ, ಬೆಂಗಳೂರಿಗೆ ಕಾಲ್ ಮಾಡಿ ಎಂದು ಸಹ ಹೇಳದೆ ಥಟ್ ಅಂಥ ಕಟ್ ಮಾಡುವ ಮೂಲಕ ನೊಂದವರಿಗೆ ಮಾರ್ಗ ತೋರಿಸುವ ಬದಲು ಸಿಟ್ಟಿಲೆ ಕಟ್ ಮಾಡೋದು ಮಾನವೀಯತೆ ಅಲ್ಲ. ಬೆಂಗಳೂರಿನ ಸಹಾಯವಾಣಿ ನಂಬರ್ ಆದ್ರೂ ಕೊಡೊವಷ್ಟು ವ್ಯವಧಾನವಿಲ್ಲವೇ.?
ಬೆಂಗಳೂರಿನ ಸಹಾಯವಾಣಿ ನಂಬರ ಪಡೆಯಲು TV 9 ವರದಿಗಾರರೊಬ್ಬರನ್ನು ಸಂಪರ್ಕಿಸಿ ಪಡೆದು ಕಾಲ್ ಮಾಡಬೇಕಾಯಿತು. ಕಲ್ಬುರ್ಗಿ ಸಹಾಯವಾಣಿ ಸಿಬ್ಬಂದಿ ಯಾರೇ ಕಾಲ್ ಮಾಡಿದರೂ ಇಂಥ ಸಮಯದಲ್ಲಿ ಉತ್ತಮ ಸಂವಹನ, ಮಾನವೀತೆ ನಡೆ ಅಗತ್ಯವಿರುವ ಕುರಿತು ಸಂಬಂಧಿಸಿದ ಹಿರಿಯ ಅಧಿಕಾರಿಗಳು ಕಲಿಸಲಿ ಎಂಬುದೆ ವಿವಿ ಆಶಯ.
ಏನೇ ಆಗಲಿ ಕರ್ನಾಟಕದವರಾದ ಪ್ರಭಾಕರ ಜುಜಾರೆ ಅವರು ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದು, ಫುಲ್ಗಾಮದಲ್ಲಿದ್ದರು, ಅದೃಷ್ಟವಶಾತ್ ಪ್ರಭಾಕರ ಹಾಗೂ ಅವರ ಫ್ಯಾಮಿಲಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಘಟನೆ ಕುರಿತು ಭಯಭೀತರಾಗಿದ್ದು, ವಾಪಸ್ ಬೆಂಗಳೂರಿಗೆ ಬರಲು ಪರದಾಡುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಇವರನ್ನು ಸಂಪರ್ಕಿಸಿ ಕ್ಷೇಮವಾಗಿ ಬೆಂಗಳೂರು ತಲುಪಿಸುವ ವ್ಯವಸ್ಥೆ ಮಾಡಲಿ ಎಂಬುದೆ ನಮ್ಮ ಹಾರೈಕೆ.