ಕಾವೇರಿ ತೀರ್ಪು ಸಮಾಧಾನ ತಂದಿದೆಯಾ.?
ಕಾವೇರಿಃ ಸಮಾಧಾನ ತಂದ ತೀರ್ಪು
ದೆಹಲಿಃ ಕಾವೇರಿ ವಿವಾದ ನ್ಯಾಯಾಧಿಕರಣದ ಮೆಟ್ಟಿಲೇರಿದ ಮೇಲೆ ಇದೇ ಮೊದಲ ಬಾರಿಗೆ ಕರ್ನಾಟಕ ಪರ ಸಮಾಧಾನಕರ ತೀರ್ಪು ಬಂದಿದೆ ಎಂದು ಕರ್ನಾಟಕದ ಪರ ವಾದ ಮಂಡಿಸಿದ ವಕೀಲರು ತಿಳಿಸಿದ್ದಾರೆ.
ತಮಿಳುನಾಡಿಗೆ ಬಿಡಬೇಕಾದ ಒಟ್ಟು ಟಿಎಂಸಿ ನೀರಲ್ಲಿ 14.75 ಟಿಎಂಸಿ ನೀರು ಕಡಿತಗೊಳಿಸಿ ಆದೇಶ ಹೊರಡಿಸಿದ್ದು, ಕರ್ನಾಟಕದ ಪಾಲಿಗೆ ಸ್ವಲ್ಪ ಖುಷಿ ಕೊಟ್ಟಿದೆ. ತಮಿಳುನಾಡಿಗೆ ಈಗ 177 ಟಿಎಂಸಿ ನೀರು ಬಿಡಬೇಕು. ಹೆಚ್ಚುವರಿಯಾಗಿ ಬಿಡಬೇಕಿದ್ದ 14.75 ಟಿಎಂಸಿ ನೀರು ಮಾತ್ರ ಕಡಿತಗೊಳಿಸಿದೆ ಅಷ್ಟೆ.
ಇನ್ನೂ ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೆ 4.75 ಟಿಎಂಸಿ ನೀರು ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎನ್ನಲಾಗಿದೆ.
ಆದರೆ 192 ಟಿಎಂಸಿ ನೀರು ಬಿಡಬೇಕಿತ್ತು ಪ್ರಸ್ತುತ ನ್ಯಾಯಾಧಿಕರಣ ತಿಳಿಸಿದಂತೆ, 14.75 ಟಿಎಂಸಿ ನೀರು ಕಡಿತಗೊಳಿಸಿ 177ಟಿಎಂಸಿ ನೀರು ತಮಿಳುನಾಡಿಗೆ ಬಿಡಲು ತಿಳಿಸಿದೆ ಎಂಬುದು ಸದ್ಯದ ವಿಷಯವಾಗಿದೆ.
ಆದರೆ ಸಂಪೂರ್ಣ ಆದೇಶದ ಪ್ರತಿ ಓದುವವರೆಗೆ ಏನು ಹೇಳಲ್ಲಾಗಲ್ಲ ಎಂದು ವಕೀಲರು ಸ್ಪಷ್ಟ ಪಡಿಸಿದ್ದಾರೆ.
ಅಲ್ಲದೆ ಇನ್ನೂ 15 ವರ್ಷದವರೆಗೆ ಈ ಆದೇಶ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ.
ಕಾವೇರಿ ತೀರ್ಪು ಹಿನ್ನೆಲೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ತೀರ್ಪಿನ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.