RSS ಅಂದ್ರೆ ರಿಲಯನ್ಸ್ ಸೇವಾ ಸಂಸ್ಥೆ- ರಾಮಲಿಂಗಾರಡ್ಡಿ ವಾಗ್ದಾಳಿ
ಲೋಕಸಭೆಗೆ ಸ್ಪರ್ಧಿಸುವದಿಲ್ಲ ರಾಮಲಿಂಗಾರಡ್ಡಿ ಸ್ಪಷ್ಟನೆ
ಬೆಂಗಳೂರಃ ಆರ್ ಎಸ್ ಎಸ್ ಅಂದ್ರೆ ರಿಲಯನ್ಸ್ ಸೇವಾ ಸಂಸ್ಥೆಯಾಗಿದೆ. ಕೇವಲ ಚಡ್ಡಿ ಮಾತ್ರ ಬೆಳೆಸಿದೆ ಮತ್ತು ರಿಲಯನ್ಸ್ ಸಂಸ್ಥೆ ಬೆಳೆಯಲು ಸಹಕಾರಿಯಾಗಿ ನಿಲ್ಲುವುದೇ ಅದರ RSS ಸಂಸ್ತೆಯ ಸಾಧನೆಯಾಗಿದೆ ಎಂದು ಮಾಜಿ ಸಚಿವ ರಾಮಾಲಿಂಗಾರಡ್ಡಿ ವಾಗ್ದಾಳಿ ನಡೆಸಿದರು.
ಅಲ್ಲದೆ ಗೋವು ಪೂಜೆ ತಾವುಗಳಷ್ಟೆ ಮಾಡುತ್ತಾರೆಂಬಂತೆ ಬಿಂಬಿಸಿಕೊಳ್ಳುತಿದ್ದಾರೆ. ಗೋವು ಎಲ್ಲರಿಗೂ ಇಷ್ಡ ನಾವು ಗೋವು ಪೂಜೆ ಮಾಡುತ್ತೇವೆ ಹಾರಾಧಿಸುತ್ತೇವೆ ಆದರೆ ನಿಮ್ಮಂತೆ ರಾಜಕೀಯಕ್ಕೆ ಗೋವನ್ನು ಬಳಸಿಕೊಳ್ಳುವದಿಲ್ಲ ಎಂದು ಅವರು ಹರಿಹಾಯ್ದರು.
ಇದೇ ವೇಳೆ ಮಾಧ್ಯಮದವರು ಕೇಳಿದ ಲೋಕಸಭೆಗೆ ಏಕೆ ಸ್ಪರ್ಧೆಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,
ನಾನು ಲೋಕಸಭೆಗೆ ಸ್ಪರ್ಧಿಸುವದಿಲ್ಲ.
ಕಾಂಗ್ರೆಸ್ ಮುಖಂಡರು ನನಗೆ ಸ್ಪರ್ಧಿಸುವಂತೆ ಕೇಳಿದ್ದು ನಿಜ ಆದರೆ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಗಳಿದ್ದಾರೆ ಅವರು ಸ್ಪರ್ಧೆಗೆ ಸಿದ್ಧತೆಹಲ್ಲಿದ್ದಾರೆ ಹೀಗಾಗಿ ನಾನು ಸ್ಪರ್ಧಿಸಲ್ಲ ಎಂದು ನಮ್ಮ ಪಕ್ಷದ ನಾಯಕರಿಗೆ ಮನವರಿಕೆ ಮಾಡಿದ್ದೇನೆ ಎಂದು ಸ್ಪಷ್ಟ ಪಡಿಸಿದರು.