ಅಮೇರಿಕಾದಲ್ಲಿ ಇರ್ಮಾ ಚಂಡಮಾರುತ ನರ್ತನ
ಅಮೇರಿಕಾದಲ್ಲಿ ಇರ್ಮಾ ಚಂಡಮಾರುತ ನರ್ತನ
ಬಿರುಗಾಳಿ ಸಹಿತ ಭಾರಿ ಮಳೆಗೆ 25 ಜನರ ಸಾವು
ಅಮೇರಿಕಾಃ ಅಮೇರಿಕಾದ ಫ್ಲೊರಿಡಾ ನಗರಕ್ಕೆ “ಇರ್ಮಾ” ಚಂಡಮಾರುತ ಅಪ್ಪಳಿಸಿದ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ. 250 ಕೀ.ಮೀ.ವೇಗದಲ್ಲಿ ಈ ಇರ್ಮಾ ಚಂಡಮಾರುತ ಸಾಗುತ್ತಿದ್ದು, ಸಮುದ್ರ ತೀರದಲ್ಲಿ ಅಲೆಗಳು ಅಬ್ಬರ ಜಾಸ್ತಿಯಾಗಿದೆ. ಭಾರಿ ಬಿರುಗಾಳಿ ಮಳೆಗೆ 6 ಲಕ್ಷಕ್ಕೂ ಹೆಚ್ಚಿನ ಜನರನ್ನು ಈಗಾಗಲೇ ಸ್ಥಳಾಂತರಗೊಳಿಸಿದ್ದಾಗ್ಯು 25 ಜನ ಗಾಳಿಯ ತೀವ್ರತೆಗೆ ಬಲಿಯಾಗಿದ್ದಾರೆನ್ನಲಾಗಿದೆ.
ಇಡೀ ಪಟ್ಟಣದ ರಸ್ತೆಗಳು ಕೆರೆ ಹಕಳೆಯಂತಾಗಿವೆ. ಅಮೇರಿಕಾದ ಫ್ಲೊರಿಡಾದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕೆಲಸವು ನಡೆದಿದೆ. ಶನಿವಾರ ಚನ್ನಾಗಿಯೇ ಇದ್ದ ಪಟ್ಟಣ ರವಿವಾರ ರಾತ್ರಿವೇಳೆಗೆ ಚಂಡಮಾರುತ ಅಬ್ಬರ ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಬಿರುಗಾಳಿ ಗಂಟೆಗೆ 150-160ರಷ್ಟು ಸ್ಪೀಡ್ನಲ್ಲಿದ್ದು, ಭಾರಿ ಪ್ರಮಾಣದಲ್ಲಿ ಅನಾಹುತ ಸಂಭವಿಸುತ್ತಿವೆ.
ಗಿಡ ಮರಗಳು ವಿದ್ಯುತ್ ಕಂಬ ಮತ್ತು ಹಲವು ಮನೆಗಳು ಸಹ ಬಿರುಗಾಳಿಗೆ ನೆಲಕ್ಕೆ ಉರುಳಿವೆ. ಮನೆ ಮುಂದೆ ನಿಂತ ಕಾರು, ದೊಡ್ಡಗಾತ್ರದ ವಾಹನಗಳು ಬೀರುಗಾಳಿಗೆ ನಿಂತಲ್ಲೆ ಬುಡಮೇಲಾಗಿ ರಸ್ತೆ ಮೇಲೆ ಹರಿದುಹೋಗ್ತಿವೆ. ಈ ಅನಾಹುತಗಳನ್ನು ಅಲ್ಲಿನ ಕೆಲವರು ಮೊಬೈಲ್ ನಲ್ಲಿ ಚಿತ್ರಿಕರಿಸಿದರೆ, ಮಾಧ್ಯಮದವರು ಹರಸಾಹಸಪಟ್ಟು ಕ್ಯಾಮರಾದಲ್ಲಿ ಸೆರೆ ಹಿಡಿತುತ್ತಿದ್ದಾರೆ. ಒಟ್ಟಾರೆ ಚಂಡಮಾರುತಕ್ಕೆ ಅಲ್ಲಿನ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ಆಗಿದೆ.
ಅಂಟಿಗುವಾ : ಮೆಕ್ಸಿಕೋ ತೀರ ಹಾಗೂ ಉತ್ತರ ಅಮೆರಿಕದ ನಡುವೆ ನಿಂತಿರುವ ಕೆರಿಬಿಯನ್ ಗೆ ಅಪ್ಪಳಿಸಲಿರುವ ಇರ್ಮಾ ಚಂಡಮಾರುತ ಅಲ್ಲಿನ ಜನ ಹೇಗೆ ಸ್ವೀಕರಿಸ್ತಾರೋ ಏನು ಅಡಚಣೆ ಸಾವು ನೋವಿನ ಭಯವಂತು ಇದ್ದೇ ಇದು. ಮುನ್ನೆಚರಿಕೆ ಕ್ರಮವಹಿಸಿದ್ದರೂ ಸಹ ಸಾಕಷ್ಟು ಆಸ್ತಿಪಾಸ್ತಿ ನಷ್ಟವಂತು ಆಗಿದೆ.