ಪ್ರಮುಖ ಸುದ್ದಿ

ಡಿ.17 ರಂದು ಕಕ ಯುವ ಸೇನೆ ದಶಮಾನೋತ್ಸವ ಸಮಾರಂಭ

ಸಂಜೆ ಸಂಗೀತ ರಸಮಂಜರಿ, ಹಾಸ್ಯ ಕಾರ್ಯಕ್ರಮ

yadgiri, ಶಹಾಪುರಃ ನಗರದ ಸಿ.ಪಿ.ಎಸ್ ಶಾಲಾ ಮೈದಾನದಲ್ಲಿ ಡಿ. 17 ರಂದು ಶುಕ್ರವಾರ ಸಂಜೆ 6 ಗಂಟೆಗೆ , ಕಲ್ಯಾಣ ಕರ್ನಾಟಕ ಯುವ ಸೇನೆ ಯುವ ಶಕ್ತಿಗಳ ಒಕ್ಕೂಟ ರಚನೆಯಾಗಿ 2021 ಕ್ಕೆ 10 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ದಶಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೇನೆ ರಾಜ್ಯಾಧ್ಯಕ್ಷ ಅಂಬರೀಷ್ ಬಿಲ್ಲವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ 4 ಗಂಟೆಗೆ ಸಿ.ಬಿ. ಕಮಾನನಿಂದ ಸಿಪಿಎಸ್ ಶಾಲಾ ಮೈದಾನದ ವರೆಗೆ ಮೆರವಣಿಗೆ ನಡೆಯಲಿದೆ. ನಂತರ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸಲಿದ್ದು, ನಿವೃತ್ತ ಪೊಲೀಸ್ ಮಹಾ ನೀರ್ದೇಶಕ ಶಂಕರ ಬಿದರಿ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಸುರಪುರ ಶಾಸಕ ನರಸಿಂಹ ನಾಯಕ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಸೇರಿದಂತೆ ಸಿನಿಮಾ ನಟ ಪ್ರೇಮ್ ಮತ್ತು ಝೀ ಕನ್ನಡ ಸಂಗೀತ ಕಾರ್ಯಕ್ರಮದ ಹಾಡುಗಾರರು, ರಾಜಕೀಯ ಗಣ್ಯರು, ಮುಖಂಡರು ಭಾಗವಹಿಸಲಿದ್ದಾರೆ.

ದಶಮಾನೋತ್ಸವ ಅಂಗವಾಗಿ ಹಾಸ್ಯ, ಸಂಗೀತ ರಸಮಂಜರಿ, ನೃತ್ಯ ಗಳಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಸಾರ್ವಜನಿಕರು ಕನ್ನಡ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಅವರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button