ಪ್ರಮುಖ ಸುದ್ದಿ
ಕಲಬುರಗಿ: ವಾಕಿಂಗ್ ವೇಳೆ ಕಾರು ಡಿಕ್ಕಿ, ಪಟ್ಟಣ ಪಂಚಾಯ್ತಿ ಮಾಜಿ ಅದ್ಯಕ್ಷ ಸಾವು
ವಾಕಿಂಗ್ ತೆರಳುತ್ತಿದ್ದ ವ್ಯಕ್ತಿಯ ಜೀವ ಬಲಿ ಪಡೆದಿರುವ ಕಾರಿನಲ್ಲಿ ಕೆಲ ವಿದ್ಯಾರ್ಥಿಗಳು ಸೇರಿ ತೆಲಂಗಾಣದಿಂದ ಗೋವಾಕ್ಕೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಅಪಘಾತದ ಬಳಿಕ ಅಫಜಲಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂತೆಯೇ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.