ಪ್ರಮುಖ ಸುದ್ದಿ

ಕಲಬುರಗಿ: ಅತ್ಯಾಚಾರ, ನೊಂದ ಯುವತಿ ಆತ್ಮಹತ್ಯೆ ಕೇಸ್, ಆರೋಪಿ ಬಂಧನ

ಕಲಬುರಗಿ: ಚಿಂಚೋಳಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಬೆಂಗಳೂರು ಸೇರಿದ್ದ ಅತ್ಯಾಚಾರಿ ಆರೋಪಿ ಮಲ್ಲಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ತಿಂಗಳು 7 ರಂದು ಕುಡಿದ ಅಮಲಿನಲ್ಲಿ ಆರೋಪಿ ಮಲ್ಲಪ್ಪ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ. ತದನಂತರ ಹಣ, ಚಿನ್ನಾಭರಣ ಕದ್ದು ಪರಾರಿಯಾಗಿದ್ದನು.

ಮರುದಿನವೇ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಬಗ್ಗೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಮೂರೇ ದಿನಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button