ಕಲಾಲ್ ಕುಟುಂಬದ 22 ಜನರಿಗೆ ಕೊರೊನಾ
ಪಿಡಿಓ ಭೇಟಿ ಪರಿಶೀಲನೆ, ಆರೋಗ್ಯ ವಿಚಾರಣೆ
yadgiri, ಶಹಾಪುರಃ ತಾಲೂಕಿನ ವನದುರ್ಗ ಗ್ರಾಮ ಸಮೀಪದ ಕಲಾಲ್ ದೊಡಿಯಲ್ಲಿ ಒಂದೇ ಕುಟುಂಬದ 22 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲರೂ ಆರೋಗ್ಯವಾಗಿದ್ದು, ಹೋಂ ಕ್ವಾರಂಟೈನ ಇದ್ದಾರೆ. ಆರೋಗ್ಯದಲ್ಲಿ ಯಾರಿಗೂ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಜಗನ್ನಾಥರಡ್ಡಿ ತಿಳಿಸಿದರು.
ಶನಿವಾರ ಬೆಳಗ್ಗೆ ಆರೋಗ್ಯ ಇಲಾಖೆಯ ತಂಡ ಹಾಗೂ ವೈದ್ಯರು ಭೇಟಿ ನೀಡಿ ಅಗತ್ಯ ಔಷಧಿ ಹಾಗೂ ಇಂಜಕ್ಷನ್ ಕೊಟ್ಟಿದ್ದಾರೆ. ಅಲ್ಪ ಪ್ರಮಾಣದ ರೋಗ ಲಕ್ಷಣಗಳು ಕಂಡು ಬಂದಿದ್ದು, ಸದ್ಯಕ್ಕೆ ಎಲ್ಲರು ಆರೋಗ್ಯಯುತವಾಗಿದ್ದಾರೆ ಎಂದು ಹೇಳಿದರು.
ಕಲಾಲ್ ದೊಡ್ಡಿಯಲ್ಲಿ ಐದು ಕುಟುಂಬಗಳಿವೆ ಹಲವಾರು ವರ್ಷಗಳಿಂದ ತಮ್ಮ ಜಮೀನಿನಲ್ಲಿಯಯೇ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಕಲಾಲ್ ಕುಟುಂಬದ ಸದಸ್ಯರು ಹೊರತುಪಡಿಸಿ ಅಲ್ಲಿ ಯಾರೊಬ್ಬರು ವಾಸವಾಗಿರುವದಿಲ್ಲ. ಮೊದಲು ಕುಟುಂಬದ ಸದಸ್ಯರೊಬ್ಬರಲ್ಲಿ ಜ್ವರ ಬಂದ ಹಿನ್ನೆಲೆ ಪರೀಕ್ಷೆಗೆ ಒಳಪಡಿಸಲಾಗಿ ಕೊರೊನಾ ಪಾಸಿಟಿವ್ ವರದಿ ಬಂದಿತು.
ಆನಂತರ ವನದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಯೊಬ್ಬರು ಕಲಾಕ್ ದೊಡ್ಡಿಗೆ ತೆರಳಿ ಎಲ್ಲಾ ಸದಸ್ಯರ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ 18 ಜನರಿಗೆ ಪಾಸಿಟಿವ್ ಬಂದಿತು. ಇನ್ನೊಂದು ಕುಟುಂಬದ ನಾಲ್ವರಿಗೂ ಪಾಸಿಟಿವ್ ಬಂದಿತ್ತು. ಅಲ್ಲದೆ ಈಗಾಗಲೇ ಮತ್ತೊಂದು ಕುಟುಂಬದ ಮೂವರು ಈಗಾಗಲೇ ರಾಯಚೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ದೊಡ್ಡಿಯಲ್ಲಿರುವ ಐದು ಕುಟುಂಗಳಲ್ಲಿ ಮೂರು ಕುಟುಂಬದ ಸದಸ್ಯರಿಗೆ ಪಾಸಿಟಿವ್ ಬಂದಿದೆ. ಇನ್ನೆರಡು ಕುಟುಂಬದ ಸದಸ್ಯರು ಆರಾಮವಾಗಿದ್ದಾರೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮಣ್ಣಗೌಡ ಪಾಟೀಲ್ ಮಾಹಿತಿ ನೀಡಿದರು.