ಪ್ರಮುಖ ಸುದ್ದಿ
ಕಲಬುರ್ಗಿಃ ರಸ್ತೆ ಅಪಘಾತ ಮೂವರ ದುರ್ಮರಣ
ರಸ್ತೆ ಅಪಘಾತ ಮೂವರ ದುರ್ಮರಣ
ಕಲಬುರ್ಗಿಃ ಡಿಸೇಲ್ ಟ್ಯಾಂಕರ್ ಮತ್ತು ಕ್ಲೂಸರ್ ವಾಹನ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಕ್ಲೂಸರ್ ವಾಹನದಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ತಾಲೂಕಿನ ಅವರಾದ ಗ್ರಾಮದ ಬಳಿಯ ಬೀದರ-ಬೆಂಗಳೂರ ಹೆದ್ದಾರಿಯಲ್ಲಿ ನಡೆದಿದೆ.
ಕ್ಲೂಸರ್ ವಾಹನದಲ್ಲಿ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳುತಿದ್ದ ವೇಳೆ ಈ ದುರಂತ ಸಂಭವಿಸಿದೆ. ಉಜ್ವಲ್ (12), ಸೋಮನಾಥ (30) ವೀರಭದ್ರ(60) ಮೃತಪಟ್ಟ ದುರ್ದೈವಿಗಳು. ಗಾಯಗೊಂಡಿರುವ ಐದು ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಮಹಾರಾಷ್ಟ್ರ ಮೂಲದವರೆನ್ನಲಾಗಿದ್ದು, ಕಲಬುರ್ಗಿ ಮಾರ್ಗವಾಗಿ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕ್ಲೂಸರ್ ಮತ್ತು ಬೀದರ ಮಾರ್ಗವಾಗಿ ಬರುತ್ತಿದ್ದ ಡಿಸೇಲ್ ತುಂಬಿದ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೀಕರ ದುರಂತ ನಡೆದಿದೆ. ಸ್ಥಳಕ್ಕೆ ಕಲಬುರಗಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.