ಕಲ್ಬುರ್ಗಿಃ ಕೇಂದ್ರ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮಧ್ಯ ಗಲಾಟೆ ನಾಲ್ವರ ಮೇಲೆ ಪ್ರಕರಣ ದಾಖಲು
ಕಲ್ಬುರ್ಗಿ ಕೇಂದ್ರ ವಿದ್ಯಾಲಯದಲ್ಲಿ ರಾಮ ನವಮಿ ಆಚರಣೆಯೇ ಗಲಾಟೆಗೆ ಕಾರಣ
ಕಲ್ಬುರ್ಗಿಃ ಕೇಂದ್ರ ವಿದ್ಯಾಲಯದಲ್ಲಿ ರಾಮ ನವಮಿ ವಿದ್ಯಾರ್ಥಿಗಳ ಮಧ್ಯ ಗಲಾಟೆ ನಾಲ್ವರ ಮೇಲೆ ಪ್ರಕರಣ ದಾಖಲು
ರಾಮ ನವಮಿ ಆಚರಣೆಗೆ ವಿರೋಧ ಸಲ್ಲದು- ಆಂದೋಲಾ ಶ್ರೀ
ಕಲ್ಬುರ್ಗಿಃ ಜಿಲ್ಲೆಯ ಕಡಗಂಚಿ ಗ್ರಾಮ ವ್ಯಾಪ್ತಿ ಬರುವ ಕರ್ನಾಟಕ ಕೇಂದ್ರಿಯ ವಿಶ್ವ ವಿದ್ಯಾಲಯದಲ್ಲಿ ರವಿವಾರ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದ್ದು, ವಿಶ್ವನಾಥ ಮತ್ತು ನರೇಂದ್ರ ಎಂಬ ವಿದ್ಯಾರ್ಥಿಗಳಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಘಟನೆ ವಿವರಃ ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಲಕ್ಷ್ಮೀ ಮಂದಿರದಲ್ಲಿ ವಿದ್ಯಾರ್ಥಿಗಳಾದ ವಿಶ್ವನಾಥ ಮತ್ತು ನರೇಂದ್ರ ಸೇರಿದಂತೆ ಇತರರು ಸೇರಿ ರಾಮ ನವಮಿ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಕಾರಣಕ್ಕಾಗಿ ಎಡಪಂಥೀಯ ವಿಚಾರಧಾರೆ ಹೊಂದಿದ ನಾಲ್ವರು ವಿದ್ಯಾರ್ಥಿಗಳು ನಮ್ಮಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಶ್ವನಾಥ ಆರೋಪಿಸಿದ್ದಾರೆ.
ಅಲ್ಲದೆ ಎಬಿವಿಪಿ ಮತ್ತು ಆರ್ ಎಸ್ ಎಸ್ ಚಟುವಟಿಕೆಗಳನ್ನು ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಸಬಾರದು ಎಂದು ಈ ಮೊದಲಿಂದಲೂ ನಮಗೆ ಇವರು ಬೆದರಿಕೆ ಹಾಕುತ್ತಿದ್ದರು.
ಘಟನೆಗೆ ಆಂದ್ರ ಪ್ರದೇಶದಿಂದ ಎಂಬಿಎ ಮಾಡಲು ಬಂದ ಸಾದಿಕ್ ಮತ್ತು ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರಾಹುಲ್ ಎಂಬ ವಿದ್ಯಾರ್ಥಿಗಳೇ ಹಲ್ಲೆ ನಡೆಸಿದ್ದು, ಇವರನ್ನು ಕಾಲೇಜಿನಿಂದ ವಜಾಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ರಾಹುಲ್ ಮತ್ತು ಸಾದಿಕ್ ಸೇರಿದಂತೆ ನಾಲ್ವರ ವಿರುದ್ಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಸಮರ್ಪಕ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿ ಜೆಎನ್ ಯು ವಿದ್ಯಾಲಯದಲ್ಲಿ ಎಡಪಂಥೀಯ ಹೆಸರಲಿ ನಡೆಯುವ ಮತಾಂಧತೆ ಕಲ್ಬುರ್ಗಿಗೂ ಕಾಲಿಟ್ಟಿರುವದು ದುರಂತ. ಕೂಡಲೇ ಆ ಎಡಪಂಥಿಯ ಹೆಸರಲಿ ಮತ್ತೊಬ್ಬರ ಧರ್ಮ ಹಿಯಾಳಿಸುವ ಆಚರಣೆಗೆ ಅಡ್ಡಿಪಡಿಸುವ ಮತಾಂಧರನ್ನು ಕೂಡಲೆ ಬಂಧಿಸಿ ಕಾಲೇಜಿನಿಂದ ವಜಾಗೊಳಿಸಬೇಕು.
– ಸಿದ್ಧಲಿಂಗ ಸ್ವಾಮೀಜಿ. ಶ್ರೀರಾಮ ಸೇನೆಯ ರಾಜ್ಯಧ್ಯಕ್ಷರು.