ಕಲ್ಬುರ್ಗಿ ಬಸ್ಟ್ಯಾಂಡ್ ಕ್ಯಾಂಟೀನ್ ನಲ್ಲಿ ತಿಂಡಿ ತಿನ್ನಬೇಕೆ.? ಜೇಬಲ್ಲಿ ನಗದು ಹಣ ಇದ್ರೆ ಮಾತ್ರ ತಿನ್ನಿ
ಕಲ್ಬರ್ಗಿ ಕ್ಯಾಂಟೀನಲ್ಲಿ ತಿಂಡಿ ತಿಂತೀರಾ.? ಜೇಬಲ್ಲಿ ನಗದು ಇದ್ರೆ ಮಾತ್ರ ತಿನ್ನಿ
ಕಲ್ಬುರ್ಗಿಃ ಬಸ್ಟ್ಯಾಂಡ್ ಕ್ಯಾಂಟೀನ್ ನಲ್ಲಿ ಇಲ್ಲ ಡಿಜಿಟಲ್ ಹಣ ಪೇ – ಗ್ರಾಹಕರಿಗೆ ಸಮಸ್ಯೆ
ಕಲ್ಬುರ್ಗಿ KSRTC ಕ್ಯಾಂಟೀನ್ ನಲ್ಲಿ ನಗದು ವ್ಯವಹಾರ ಮಾತ್ರ ಗ್ರಾಹಕರಿಗೆ ತೀವ್ರ ತೊಂದರೆ
ಕಲ್ಬುರ್ಗಿಃ ಇಲ್ಲಿನ ಬಸ್ ಸ್ಟ್ಯಾಂಡ್ ಕ್ಯಾಂಟೀನ್ ನಲ್ಲಿ ಗ್ರಾಹಕರು ಏನೇ ಇಡ್ಲಿ, ವಡಾ ಇತರೆ ತಿಂಡಿ ತಿಂದರೂ ನಗದು ಹಣ ಪಾವತಿ ಮಾಡಬೇಕು.
ಈ ಕುರಿತು ಕ್ಯಾಂಟೀನ್ ಗೋಡೆ ಮೇಲೆ Phone pay, google pay ಮತ್ತು paytem ಯಾವುದೇ ಡಿಜಿಟಲ್ ಹಾಣ ಪಾವತಿ ಇರುವದಿಲ್ಲಿ ಓನ್ಲಿ ಕ್ಯಾಶ್ ಎಂದು ಬರೆದು ಹಚ್ಚಿದ್ದಾರೆ. ಹೀಗಾಗಿ ಗ್ರಾಹಕರು ಇದರಿಂದ ತೊಂದರೆ ಅನುಭವಿಸುವಂತಾಗಿದೆ.
ಕಾರಣ ಡಿಜಿಟಲೀಕರಣ ಹಣ ಪಾವತಿಗೆ ಜನ ಹೊಂದಿಕೊಂಡಿದ್ದು, ಸಣ್ಣಪುಟ್ಟ ವ್ಯಾಪಾರಸ್ಥರು ಸೇರಿದಂತೆ ತರಕಾರಿ ಮಾರುಕಟ್ಟೆ ಅಲ್ಲದೆ ಬಂಡಿಯಲ್ಲಿ ಮಾರುವ ತರಕಾರಿ ವ್ಯಾಪಾರಿಗಳು ಸಹ ಸ್ಕ್ಯಾನರ್ ಇಟ್ಡಿದ್ದಾರೆ. ಆದರೆ ಈ ಕಲ್ಬುರ್ಗಿ ಕ್ಯಾಂಟೀನದವರು ಇದುವರೆಗೂ ಡಿಜಿಟಲ್ ಹಣ ಪಾವತಿ ವ್ಯವಸ್ಥೆ ಮಾಡದೆ ಇರುವದು ದುರಂತ ಅಂದ್ರೆ ತಪ್ಪಿಲ್ಲ.
ಹೀಗಾಗಿ ಕಲ್ಬುರ್ಗಿಯ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಕ್ಯಾಂಟೀನ್ ಗೆ ಭೇಟಿ ನೀಡಿ ಕೂಡಲೇ ಡಿಜಿಟಲೀಕರಣದ ಮೂಲಕ ಹಣ ಪಾವತಿ ಸೌಲಭ್ಯ ಕಲ್ಪಿಸುವಂತೆ ಮಾಡಬೇಕಿದೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಹಾಗಂತ. ಸಂಪೂರ್ಣ ಸ್ಕ್ಯಾನರ್ , ಡಿಜಿಟಲಿಕರಣ ಮೂಲಕ ಹಣ ಮಾತ್ರ ಪಾವತಿಸುವಂತೆ ಜನರು ಕೇಳಿತ್ತಿಲ್ಲ. ಎರಡು ವ್ಯವಸ್ಥೆ ಇರಬೇಕಿದೆ.
ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಕ್ಯಾಂಟೀನ್ ನಲ್ಲಿ ಡಿಜಿಟಲ್ ಹಣ ಪಾವತಿ ಮಾಡುವ ಸೌಲಭ್ಯವಿಲ್ಲ ಎಂದರೆ ಹೇಗೆ. ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು.
ಮೊಬೈಲ್ ಮೂಲಕ್ ಬಿಲ್ ಪೇ ಮಾಡಬೇಕಂದ್ರೆ ಕ್ಯಾಂಟೀನ್ ನವರು ಆ ವ್ಯವಸ್ಥೆ ಕಲ್ಪಿಸಿಲ್ಲ ಏನಿದ್ರೂ ಓನ್ಲಿ ಹಣ ಅಂತಾರೆ. ನಮ್ಮಂಥ ಕಾಲೇಜು ಯುವಕರು, ಯುವತಿಯರು ಹಣ ತರಕಾಗಲ್ಲ. ಮೊಬೈಲ್ ಇದೆಯಲ್ಲ. ಅದರಲ್ಲಿ ಅಕೌಂಟ್ ನಲ್ಲಿ ಪಾಲಕರು ದುಡ್ಡು ಹಾಕಿರ್ತಾರೆ. ಎಮರ್ಜೆನ್ಸಿ ಬಳಸಿಕೊಳ್ಳಲು. ಆದರೆ ಇವರು ಡಿಜಿಟಲ್ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ನಮಗೆ ತೊಂದರೆಯಾಗ್ತಿದೆ. ಹಸಿವಾದ್ರೂ ಬಸ್ ಕಾದು ಅನಿವಾರ್ಯ ಮನೆಗೆ ಹೋಗುವಂತ ಸ್ಥಿತಿ. ಇಲ್ಲಂದ್ರ ಬಿಸಿಲಲಿ ಬೇರೆ ಕಡೆ ಹೋಗಬೇಕಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ವಿಚಾರಿಸಿ ಸೌಲಭ್ಯ ಕಲ್ಪಿಸಲಿ.
-ನೊಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಲ್ಬುರ್ಗಿ.