ಪ್ರಮುಖ ಸುದ್ದಿ

ಕಲಬುರ್ಗಿ: ಕೊಲೆ ಮಾಡಿ ಕಾರು ಕದ್ದೊಯ್ದ ದುಷ್ಕರ್ಮಿಗಳು!

 

ಅಪರಿಚಿತರನ್ನು ಕಾರು ಹತ್ತಿಸುವಾಗ ಹುಷಾರ್.!

ಕಲಬುರ್ಗಿಃ ಕಾರಿನ ಚಾಲಕನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಆತನ ಕಾರು ತೆಗೆದುಕೊಂಡು ಪರಾರಿಯಾದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಬಳಿ ನಡೆದಿದೆ.

ಕೊಲೆಯಾದ ಯುವಕ ಶರಣಬಸಪ್ಪ ಬಿರಾದಾರ (25) ಎಂದು ಗುರುತಿಸಲಾಗಿದೆ. ಈತ ಕಲಬುರ್ಗಿ ನಗರದ ದೇವಿ ನಗರದ ನಿವಾಸಿಯಾಗಿದ್ದು, ಇದೇ ನ.18 ರಂದು ಇಬ್ಬರು ಯುವಕರು ಈತನ ಕಾರು ಬಾಡಿಗೆ ಪಡೆದುಕೊಂಡು ಧಾರವಾಡಕ್ಕೆ ತೆರಳಿದ್ದರು.

ಆದರೆ ನಿನ್ನೆ ನೆಲೋಗಿ ಬಳಿ ಚಾಲಕ ಶರಣಬಸಪ್ಪನನ್ನು ದುಷ್ಕರ್ಮಿಗಳು ಕೊಲೆಗೈದು ಶವ ಬಿಸಾಕಿರುವುದಾಗಿ ತಿಳಿದು ಬಂದಿದೆ. ಆದರೆ ಇವರು ಧಾರವಾಡಕ್ಕೆಂದು ನೆಲೋಗಿ ಕಡೆ ಏಕೆ ಬಂದರೂ ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಕೊಲೆಯಾದ ಯುವಕ ಶ್ರೀರಾಮ ಸೇನೆಯ ಸಕ್ರಿಯ ಕಾರ್ಯಕರ್ತನಾಗಿದ್ದ ಎನ್ನಲಾಗಿದೆ.

ಈತನ ಕೊಲೆಗೆ ಸಮರ್ಪಕವಾದ  ಕಾರಣ ತಿಳಿದು ಬಂದಿಲ್ಲ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button