ಪ್ರಮುಖ ಸುದ್ದಿ
ಕಲಬುರ್ಗಿ ZP ಗೂ ಬಂತು ಕೊರೊನಾ.!
ಕಲಬುರ್ಗಿ ZP ಗೂ ಕೊರೊನಾ ಬಂತು.!
ಕಲಬುರ್ಗಿಃ ಇಲ್ಲಿನ ಜಿಲ್ಲಾ ಪಂಚಾಯತ್ ಗೂ ಕೊರೊನಾ ಮಹಾಮಾರಿ ಕಾಲಿಟ್ಟಿದ್ದು, ಜಿಪಂ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಡಿ ಗ್ರೂಪ್ ನೌಕರನೋರ್ವನಿಗೆ ಕೊರೊನಾ ಪಾಸಿಟಿವ್ ದೃಢವಾದ ಹಿನ್ನೆಲೆ ಜಿಪಂ ಕಚೇರಿ ಸೀಲ್ ಡೌನ್ ಮಾಡಲಾಗಿದೆ.
ಜಿಪಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರಿಗೆ ಕೊರೊನಾ ತಗುಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಚೇರಿ ಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ನಿನ್ನೆಯಿಂದ ಕಚೇರಿಗೆ ಬೀಗ ಜಡಿಯಲಾಗಿದ್ದು, ಕಾರ್ಯ ಚಟುವಟಿಕೆಗೆ ಬ್ರೇಕ್ ಬಿದ್ದಿದೆ ಎನ್ನಲಾಗಿದೆ.