ಶಹಾಪುರಃ ತ್ಯಾಗ ಬಲಿದಾನದಿಂದ ಹೈಕ ಭಾಗಕ್ಕೆ ಸ್ವಾತಂತ್ರ್ಯ
ತ್ಯಾಗ ಬಲಿದಾನದಿಂದ ಹೈಕ ಭಾಗಕ್ಕೆ ಸ್ವಾತಂತ್ರ್ಯ
yadgiri, ಶಹಾಪುರಃ ಹೈದ್ರಾಬಾದ್ ವಿಮೋಚನೆಗಾಗಿ ಈ ಭಾಗದ ಅನೇಕರು ಹೋರಾಟ ನಡೆಸಿದ್ದಾರೆ. ಅವರ ತ್ಯಾಗ, ಬಲಿದಾನವನ್ನು ಇಂದು ನಾವೆಲ್ಲ ಸ್ಮರಿಸಬೇಕಿದೆ. ಅಂದು ಹೈಕ ವಿಮೋಚನೆ ಹೊಂದಿ ಇಂದು ಕಲ್ಯಾಣ ಕರ್ನಾಟಕವಾಗಿ ಹೆಸರಾಗಿದೆ ಎಂದು ತಾಲೂಕು ದಂಡಾಧಿಕಾರಿ ಜಗನ್ನಾಥರಡ್ಡಿ ತಿಳಿಸಿದರು.
ನಗರದ ಸಿಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
1947 ಆಗಸ್ಟ್ 15 ರಂದು ಇಡಿ ದೇಶ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದರೆ, ಹೈದ್ರಾಬಾದ್ ಕರ್ನಾಟಕ ಮಾತ್ರ ನಿಜಾಮನೆಂಬ ರಾಜನ ಕಪಿಮುಷ್ಠಿಯಲ್ಲಿತ್ತು. ಭಾರತದ ಒಕ್ಕೂಟದಲ್ಲಿ ವಿಲೀನಕ್ಕೊಪ್ಪದ ನಿಜಾಮನನ್ನು ಮಣಿಸಲು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‍ರ ದಿಟ್ಟಿ ನಿರ್ಧಾರದಿಂದ ಹೈಕ ಭಾಘ ವಿಮೋಚನೆಯಾಯಿತು. ಆಗ ಕೇಂದ್ರದ ಗೃಹಮಂತ್ರಿಯಾಗಿದ್ದ ಪಟೇಲರು, 1948 ಸೆಪ್ಟೆಂಬರ್ 17 ರಂದು ದಿಟ್ಟ ಹೆಜ್ಜೆ ಮೂಲಕ ನಿಜಾಮನನ್ನು ಸದೆ ಬಡೆದು ಸಂಸ್ಥಾನವನ್ನು ಭಾರತದ ಒಕ್ಕೂಟದೊಳಗೆ ವಿಲೀನಗೊಳಿಸಲಾಯಿತು.
ಹೀಗಾಗಿ ಹೈಕ ಭಾಗಕ್ಕೆ ಒಂದು ವರ್ಷ 17 ದಿನ ತಡವಾಗಿ ಸ್ವಾತಂತ್ರ್ಯ ದೊರಕಿದೆ. ಹೈಕ ಭಾಗ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಜೊತೆಗೆ ಉಕ್ಕಿನ ಮನುಷ್ಯ ಎಂದು ಖ್ಯಾತಿ ಪಡೆದಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲರನ್ನು ಈ ಭಾಗದ ಜನರು ಎಂದಿಗೂ ಮರೆಯುವದಿಲ್ಲ. ಇಂದು ಹೈಕ ಭಾಗವನ್ನು ಕಲ್ಯಾನ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿದೆ. ಹೀಗಾಗಿ ಕಕ ಉತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಹನುಮಂತ್ರಾಯ ದೊರೆ, ತಾಪಂ ಅಧಿಕಾರಿ ಜಗನ್ನಾಥ್ ಮೂರ್ತಿ, ಪೌರಾಯುಕ್ತ ರಮೇಶ ಪಟ್ಟೇದಾರ, ಪಿಐ ಚನ್ನಯ್ಯ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ್, ಜೀವವೈವಿದ್ಯ ಕಮಿಟಿ ಅಧ್ಯಕ್ಷ ಪರಶುರಾಮ ಕುರಕುಂದಿ, ದೈಹಿಕ ಶಿಕ್ಷಕರಾದ ಲಕ್ಷ್ಮಣ ಲಾಳಸಂಗಿ, ಚಂದ್ರಶೇಖರ ವೈದ್ಯ, ತಾಪಂ ಜಯಪ್ರಕಾಶ, ಹಣಮಂತ ದೋರನಹಳ್ಳಿ ಸೇರಿದಂತೆ ಇತರರು ಇದ್ದರು.