ಇತಿಹಾಸ ಯುವ ಪೀಳಿಗೆ ಅರಿಯಬೇಕು: ತಹಶೀಲ್ದಾರ ಜಿಡಗೆ
ಹೈ.ಕ.ಪ್ರದೇಶ ಅರಸೊತ್ತಿಗೆಯಿಂದ ಮುಕ್ತ-ಜಿಡಗೆ
ಸ್ವತಂತ್ರ ಭಾರತದಲ್ಲಿ ಒಕ್ಕೂಟವಾದ ದಿನ
ಯಾದಗಿರಿ, ಶಹಾಪುರ: ಹೈದ್ರಾಬಾದ ಕರ್ನಾಟಕ ಪ್ರದೇಶದ ಜಿಲ್ಲೆಗಳು ಸ್ವತಂತ್ರ ಭಾರತದ ಒಕ್ಕೂಟವಾಗಿ ಅರಸೊತ್ತಿಗೆಯಿಂದ ಮುಕ್ತಿ ಹೊಂದಿದ ದಿನ. ಇತಿಹಾಸವನ್ನು ಯುವ ಪೀಳಿಗೆಯವರು ಅರಿಯಬೇಕು. ನಮ್ಮೆಲ್ಲರಿಗೂ ಅತ್ಯಂತ ಗೌರವ ತರುವಂತದ್ದಾಗಿದ್ದು ಪ್ರಸ್ತುತ ದಿನವನ್ನು ಸರ್ಕಾರದ ಆದೇಶದಂತೆ ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸುತ್ತಿರುವುದು ಎಂದು ತಹಶೀಲ್ದಾರ ಸಂಗಮೇಶ ಜಿಡಗೆ ತಿಳಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ತಾಲೂಕಾ ಆಡಳಿತದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಜನತೆಯ ಭಾವನೆಗೆ ಸಿಕ್ಕಿರುವ ಸ್ಪಂಧನೆ ಮೇಲ್ಪಂಕ್ತಿಯಾಗಿದ್ದು, ಕಲ್ಯಾಣ ಕರ್ನಾಟಕದ ಜನತೆ ಸರ್ಕಾರದ ಯೋಜನೆಗಳು ಸಾರ್ಥಕ ಪ್ರಯೋಜನ ಪಡೆದು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು.
ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಲಕ್ಷ್ಮಣ ಲಾಳಸೇರಿ, ಹೈ.ಕ. ಪ್ರದೇಶದ ವಿಮೋಚನೆ ಇದು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಂತೆ ನಡೆದಿದ್ದು, ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ನಡೆಸಿದ್ದರ ಪರಿಣಾಮ ನಮಗೆ ಸ್ವಾತಂತ್ರ್ಯ ದೊರಕಿದೆ.
ಇಂದು ನಾವು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸುತ್ತಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ನಮ್ಮ ನಾಡಿನ ಸಂಸ್ಕøತಿ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ಈ ಭಾಗದ ಮುಕ್ತಿಗಾಗಿ ಹೋರಾಟ ನಡೆಸಿದ ಅಸಂಖ್ಯ ದೇಶಭಕ್ತರಿಗೆ ಗೌರವಿಸಬೇಕು. ಬರುವ ದಿನಗಳಲ್ಲಿ ಈ ಭಾಗ ಶೈಕ್ಷಣಿಕವಾಗಿ ಆರ್ಥಿಕವಾಗಿ ಹೆಚ್ಚು ಸಶಕ್ತವಾಗಿ ನಾಡು ಸಮೃದ್ಧಿಯಾಗಲು ಕಲ್ಯಾಣ ಕರ್ನಾಟಕ ಘೋಷಣೆ ಹೊಸ ಪ್ರೇರಣೆ ನೀಡಿದೆ ಎಂದರು.
ವೇದಿಕೆ ಮೇಲೆ ಹಂಗಾಮಿ ತಾಲೂಕಾ ಪಂಚಾಯತ ಅಧ್ಯಕ್ಷೆ ಲಕ್ಷ್ಮೀದೇವಿ.ಎನ್.ಮಡ್ಡಿ, ಪಂಪಾಪತಿ ಹಿರೇಮಠ್, ಸಿಡಿಪಿಓ ಟಿ.ಪಿ.ದೊಡ್ಮನಿ, ಪೌರಾಯುಕ್ತ ಬಸವರಾಜ್ ಶಿವಪೂಜೆ, ಬಿಇಓ ಹೆಚ್.ಎಸ್.ನಾಟೇಕಾರ, ಟಿ.ಹೆಚ್.ಓ ರಮೇಶ್ ಸೇರಿದಂತೆ ನಗರಸಭಾ ಸದಸ್ಯ ಸಿದ್ದು ಆರಬೋಳ, ಶಿವಕುಮಾರ ತಳವಾರ, ಪ್ರಮುಖರಾದ ಗುರುಬಸಯ್ಯ ಗದ್ದುಗೆ, ಸೋಮಶೇಖರಯ್ಯ ಹಿರೇಮಠ್, ಮುಸ್ತಫಾ ದರ್ಬಾನ, ಅಯ್ಯಪ್ಪ ವಠಾರ, ನೌಕರರ ಸಂಘದ ಅಧ್ಯಕ್ಷ ರಾಯಪ್ಪ ಹುಡೇದ, ವಕೀಲರಾದ ಚಂದ್ರಶೇಖರ ಲಿಂಗದಳ್ಳಿ, ಅಯ್ಯಪ್ಪ ವಠಾರ, ಇದ್ದರು.
ದೈಹಿಕ ಶಿಕ್ಷಕ ಸುಧಾಕರ ಗುಡಿ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸ್ಥಳೀಯ ಜ್ಞಾನ ಗಂಗೋತ್ರಿ ಶಾಲೆಯ ವಿದ್ಯಾರ್ಥಿನಿಯರ ಸುಗ್ಗಿ ಹಾಡು ಜಾನಪದ ನೃತ್ಯ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.