ಪ್ರಮುಖ ಸುದ್ದಿ
ಭಾಗವತ್ ಮತ್ತು ಮೋದಿ ವಿರುದ್ಧ ಕನ್ಹಯ್ಯ ವಾಗ್ದಾಳಿ
ಕಲಬುರ್ಗಿಃ ಇಲ್ಲಿನ ಕಲಬುರ್ಗಿ ವಿಶ್ವ ವಿದ್ಯಾಲಯದಲ್ಲಿ ಕನ್ಹಯ್ಯ ಅವರ ಉಪನ್ಯಾಸ ಕಾರ್ಯಕ್ರಮಕ್ಕೆ ನೀಡಿದ್ದ ಪರವಾನಿಗೆ ರದ್ದುಗೊಳಿಸಿ ಇಲ್ಲಿನ ಸರ್ಕಾರ ನಿನ್ನೆ ರಾತ್ರಿ ಆದೇಶಿಸಿತ್ತು.
ಕಾರ್ಯಕ್ರಮದ ಪರವಾನಿಗೆ ರದ್ದಾದರೂ ನಗರಕ್ಕೆ ಆಗಮಿಸಿದ್ದ ಕನ್ಹಯ್ಯ, ಮಾಧ್ಯಮದ ಮುಂದೆ ಹೇಳಿಕೆ ನೀಡಿದ ಅವರು, ನೇರವಾಗಿ ಪ್ರಧಾನಿ ಮೋದಿಯವರ ವಿರುದ್ಧ ಹರಿಹಾಯ್ದರು. ಪ್ರಧಾನಿ ಮೋದಿ ಬಡವಾರಾಗಿದ್ದರೆ, ಬಡವರ ಸಂಕಷ್ಟ ಏಕೆ ಅರ್ಥೈಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಅಲ್ಲದೆ ಆರ್ ಎಸ್ಎಸ್ ನ ಮೋಹನ್ ಭಾಗವತ್ ಹೇಳೋದು ಒಂದು ಮಾಡೋದು ಇನ್ನೊಂದು. ತಮ್ಮ ಸಂಘದ ಶಾಖೆಯಲ್ಲಿ ಗಾಂಧೀಜಿಯವರನ್ನು ಬೈಯ್ಯುತ್ತಾರೆ. ನಾಥೂರಾಮ ಗೋಡ್ಸೆ ಅವರುನ್ನು ಪೂಜಿಸುತ್ತಾರೆ. ಆದರೆ ಹೊರಗಡೆ ಗಾಂಧೀಜಿಯವರನ್ನು ಮಹಾತ್ಮರೆಂದು ಹೇಳಿಕೆ ನೀಡುತ್ತಾರೆ ಎಂದು ಆರೋಪಿಸಿದರು.