ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಶಿವಸೇನೆ ಗುಂಡಾಗಿರಿ ಕನ್ನಡಿಗರ ಆಕ್ರೋಶ

ಶಿವಸೇನೆ, ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಮನವಿ

yadgiri, ಶಹಾಪುರಃ ರಾಷ್ಟ್ರಭಕ್ತ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕನ್ನಡಪರ ಸಂಘಟನೆಯವರು ಮಾಲಾರ್ಪಣೆ ಮಾಡಿ ಮರಳಿ ಹೊರಟಿರುವಾಗ ಶಿವಸೇನೆ ಮತ್ತು ಎಂಇಎಸ್ ಸಂಘಟನೆ ಕಾರ್ಯಕರ್ತರು ಗುಂಡಾಗಿರಿ ನಡೆಸಿದ್ದು, ಕನ್ನಡಗಿರ ಮೇಲೆ ಚಪ್ಪಲಿ ಎಸೆದು, ಹಲ್ಲೆ ನಡೆಸಿದ್ದು ಅಮಾನವೀಯ ಕೃತ್ಯವಾಗಿದೆ. ಕೂಡಲೇ ಸರ್ಕಾರ ಪುಂಡರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಕನ್ನಡ ಸೇನೆ ಕರ್ನಾಟಕ ಈಶಾನ್ಯ ವಲಯ ಸಂಘಟನಾ ಕಾರ್ಯದರ್ಶಿ ದೇವು ಬೀ.ಗುಡಿ ಆಗ್ರಹಿಸಿದರು.

ಬೆಳಗಾವಿಯಲ್ಲಿ ಶಿವಸೇನೆ ಮತ್ತು ಎಂಇಎಸ್ ಸಂಘಟನೆ ನಡೆಸಿದ ಕೃತ್ಯವನ್ನು ಖಂಡಿಸಿ ನಗರದ ತಹಶೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ರಾಷ್ಟ್ರವಾದಿ ಎಂದು ಜಂಬಕೊಚ್ಚಿಕೊಳ್ಳುವ ಶಿವಸೇನೆ ಓರ್ವ ರಾಷ್ಟ್ರಭಕ್ತ ಹೆಮ್ಮೆಯ ಕುಡಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿರುವದು ಸರಿಯಲ್ಲ. ಶಿವಸೇನೆ ರಾಷ್ಟ್ರೀಯವಾದಿ ಪಕ್ಷವಲ್ಲ ಅದೇನಿದ್ದರೂ ಮರಾಠಿಗರ ಪರ ಪಕ್ಷವಾಗಿದೆ. ಎಂಇಎಸ್ ಜೊತೆ ಬೆರೆತು ಕನ್ನಡಿಗರನ್ನು ಅವಮಾನಿಸುತ್ತಿದೆ. ಕೂಡಲೇ ಇಂತಹ ಸಂಘಟನೆಗಳ ಮೇಲೆ ರಾಷ್ಟ್ರೋದ್ರೋಹಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಅಲ್ಲದೆ ಬೆಳಗಾವಿ ಭಾಗದ ಜನಪ್ರತಿನಿಧಿಗಳು ಕನ್ನಡಿಗರಾ ಅಥವಾ ಮರಾಠಿಗರಾ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿ. ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ತುಪಿ ಪಿಟಿಕ್ ಅನ್ನದ ಜನಪ್ರತಿನಿಧಿಗಳು ಕನ್ನಡನಾಡಿಗೆ ಬೇಕಾಗಿಲ್ಲ. ಇಂತವರಿಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು. ಕೂಡಲೇ ಶೀವಸೇನಾ ಮತ್ತು ಎಂಇಎಸ್ ಗುಂಡಾಗಿರಿ ನಿಲ್ಲಿಸದಿದ್ದರೆ, ಖುದ್ದಾಗಿ ಕನ್ನಡಿಗರೇ ಬೆಳಗಾವಿಗೆ ತೆರಳಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸೇನೆ ಮುಖಂಡರಾದ ಮಲ್ಲಿಕಾರ್ಜುನ ನಗನೂರ, ತಾಲೂಕು ಅಧ್ಯಕ್ಷ ಅಂಬರೀಶಗೌಡ ಸಗರ, ಲಿಂಗಣ್ಣ ಟಣಕೆದಾರ, ಮಲ್ಲು ದೊರಿ, ಮಹಾದೇವ ಮದ್ರಿಕಿ, ಬಸ್ಸುಗೌಡ ಭೀ.ಗುಡಿ, ಸಿದ್ದು ಭೀ.ಗುಡಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button