ಕಪಾಲಿಬೆಟ್ಟ-ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ
ಕಪಾಲಿಬೆಟ್ಟ-ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ
ಕನಕಪುರಃ ಹಾರೋಬೆಲೆಯ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.
ವರದಿ ಬರುವ ಮುನ್ನವೇ ಸರ್ಕಾರ ಕಾಮಗಾರಿ ಸ್ಥಗಿತಗೊಳಿಸಿದ್ದು, ಅಲ್ಲಿನ ತಹಶೀಲ್ದಾರ ಆನಂದಯ್ಯ ಅವರನ್ನು ಇದೇ ವಿಷಯದ ಹಿನ್ನೆಲೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ ಅವರು ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ವಿಶ್ವದ ಅತಿ ಎತ್ತರದ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಕ್ಕೆ ಈಚೆಗೆ ಚಾಲನೆ ನೀಡಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಗರು ಮತ್ತು ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಕಂದಾಯ ಸಚಿವ ಆರ್ ಅಶೋಕ ಅವರು ಒಂದು ಹೆಜ್ಜೆ ಮುಂದೆ ಹೋಗಿ ಏಸು ಪ್ರತಿಮೆ ನಿರ್ಮಿಸಲು ಬಿಡುವದಿಲ್ಲ ಬೇಕಿದ್ದರೆ ಮನೆ ಕಂಪೌಂಡನಲ್ಲಿ ನಿರ್ಮಿಸಿಕೊಳ್ಳಲಿ ಅದು ಕಾಳಭೈರವನ ಬೆಟ್ಟ ಅಂದ್ರೆ ಶಿವನಬೆಟ್ಟ ಅಲ್ಲಿ ಏಸು ಪ್ರತಿಮೆ ನಿರ್ಮಿಸಲು ಬಿಡುವದಿಲ್ಲ ಅದ್ಹೇಗೆ ನಿರ್ಮಾಣ ಮಾಡ್ತೋರು ನಾನು ನೋಡುವೆ ಎಂದು ಸವಾಲೆಸೆದಿದ್ದರು.