ಪ್ರಮುಖ ಸುದ್ದಿ
ಕಪ್ಪತಗುಡ್ಡಕ್ಕೆ ಬೆಂಕಿ : ಅಪಾರ ಪ್ರಮಾಣದ ಔಷದೀಯ ಸಸ್ಯಗಳು ಬೆಂಕಿಗಾಹುತಿ!
ಗದಗ : ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಸಮೀಪದ ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದಿದೆ. ಸುಮಾರು ಗಂಟೆಗಳಿಂದ ಬೆಂಕಿ ಹೊತ್ತಿ ಹುರಿಯುತ್ತಿದ್ದು ಅಪಾರ ಪ್ರಮಾಣದ ಔಷದೀಯ ಸಸ್ಯಗಳು ಬೆಂಕಿಗಾಹುತಿ ಆಗಿವೆ. ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಔಷದೀಯ ಸಸ್ಯಗಳಿರುವ ಅರಣ್ಯ ಪ್ರದೇಶದಲ್ಲಿ ಏಕಾಏಕಿ ಬೆಂಕಿ ಹೊತ್ತಿ ಉರಿಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸಸ್ಯಕಾಶಿ ಎಂದೇ ಕರೆಯುವ ಉತ್ತಮ ಪರಿಸರ ಬೆಂಕಿಗಾಹುತಿ ಆಗುತ್ತಿರುವುದು ಪರಿಸರ ಪ್ರೇಮಿಗಳನ್ನು ಕೆರಳಿಸಿದೆ. ಹೀಗಾಗಿ, ಸಂಭಂಧಿತ ಅಧಿಕಾರಿಗಳು ಬೆಂಕಿ ಬೀಳಲು ಕಾರಣವೇನೆಂಬುದರ ಕುರಿತು ತನಿಖೆ ನಡೆಸಿ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.