ಪ್ರಮುಖ ಸುದ್ದಿ
ಗ್ರೇಟ್ ಸೆಲ್ಯೂಟ್ : ಕಾರ್ಗಿಲ್ ಕಲಿಗಳಿಗೆ ಗೌರವ ಸಮರ್ಪಣೆ
ಕೋಲಾರ : ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 20ನೇ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಕ್ರೀಡಾಪಟುಗಳು ತ್ರಿವರ್ಣ ಧ್ವಜ ಹಿಡಿದು ಓಟದ ಮೂಲಕ ಮೆರವಣಿಗೆ ಮಾಡಲಾಯಿತು. ದೇಶ ಮತ್ತು ವೀರ ಯೋಧರ ಪರ ಜಯಘೋಷ ಮೊಳಗಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ವಾಕರ್ಸ್, ಸಾರ್ವಜನಿಕರು ಹಾಗೂ ಮಾಜಿ ಯೋಧರು ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಯೋಧರಿಗೆ ಸನ್ಮಾನ, ಗೌರವ ಸಮರ್ಪಿಸುವ ಮೂಲಕ ಸಾರ್ಥಕ ವಿಜಯೋತ್ಸವ ಆಚರಿಸಲಾಯಿತು.