ಪ್ರಮುಖ ಸುದ್ದಿ

ಸಿಎಂ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ – ಬಿಜೆಪಿ ಸಂಸದ ಪ್ರತಾಪ್ ಸಿಂಹ

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸಿದ್ಧರಾಮಯ್ಯ ಅವರು ಕರ್ನಾಟಕದ ಆರು ಕೋಟಿ ಕನ್ನಡಿಗರ ಮುಖ್ಯಮಂತ್ರಿಗಳು. ನನ್ನೊಂದಿಗೆ ತುಂಬು ಪ್ರೀತಿಯಿಂದ ಮಾತನಾಡಿಸಿದ್ದಾರೆ. ನೀನು ಪತ್ರಕರ್ತನಾಗಿ ರಾಜಕಾರಣಕ್ಕೆ ಬಂದವನು, ನೀನು  ಬುದ್ಧಿವಂತ, ಒಳ್ಳೇ ಸಂಸದನೂ ಹೌದು. ನೀನಿನ್ನೂ ಬೆಳೆಯಬೇಕು. ಸ್ವಲ್ಪ ಸಹನೆಯಿಂದ ಮುಂದುವರೆಯುವುದು ಒಳಿತು ಎಂದು ಸಲಹೆ ನೀಡಿದ್ದಾರೆ. ಹಿರಿಯರ ಮಾತನ್ನು ಗೌರವದಿಂದ ಕೇಳುವುದು ಸಹಜ ಸೌಜನ್ಯತೆ.  ಸಿಎಂ ಸಿದ್ಧರಾಮಯ್ಯ ಅವರು ಸಹ ಯುವಕರಾಗಿದ್ದಾಗಲೇ ರಾಜಕೀಯ ಪ್ರವೇಶಿಸಿದ್ದು ಇವತ್ತು ಮಖ್ಯಮಂತ್ರಿಗಳಾಗಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

ಇನ್ನು ಇದೇ ವಿಚಾರದಲ್ಲಿ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ಧರಾಮಯ್ಯ ಹೌದು ನಿನ್ನೆ ನಡೆದ ಕಾರ್ಯಕ್ರಮದ ವೇಳೆ ನೀನು ಲೇಖಕ ಮತ್ತು ಸಂಸದ ಇನ್ನೂ ಚಿಕ್ಕವಯಸ್ಸಿದೆ. ಇನ್ನೂ ಬೆಳೆಯಬೇಕಿದೆ ವರ್ತನೆ , ಭಾಷೆ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ ಅಂದಿದ್ದಾರೆ.

ಹಿನ್ನೆಲೆ : ನಿನ್ನೆ ವಿಜಯ ನಗರದ ವಿದ್ಯಾವರ್ಧಕ ಕಾಲೇಜು ಆವರಣದಲ್ಲಿ ನಡೆದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಕೆ.ಪುಟ್ಟಸ್ವಾಮಿ ಅವರ ಪುಥ್ಥಳಿ ಅನಾವರಣದ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಸಂಸದ ಪ್ರತಾಪ ಸಿಂಹ ಎದುರಾದರು. ತಕ್ಷಣಕ್ಕೆ ಸಂಸದ ಪ್ರತಾಪ ಸಿಂಹರತ್ತ ನೋಡುತ್ತ ಏನಪ್ಪ, ವಿರಾಟ್ ಕೊಹ್ಲಿ ಥರಾ ಕಾಣಸ್ತಿದೀಯಾ? ಎಂದು ಸಿಎಂ ಸಿದ್ಧರಾಮಯ್ಯ ಪ್ರತಾಪ ಸಿಂಹರನ್ನು ಮಾತನಾಡಿಸಿದರು. ನಗುತ್ತಲೇ ನಮಸ್ಕರಿಸಿದ ಸಂಸದ ಪ್ರತಾಪ ಸಿಂಹ ಸಿಎಂಗೆ ಗೌರವ ಸೂಚಿಸಿದ್ದಾರೆ. ಬೆಳೆಯುವ ಹುಡುಗ ನೀನು, ನಿನಗೆ ಉತ್ತಮ ಭವಿಷ್ಯವಿದೆ. ಆದರೆ, ಸ್ವಲ್ಪ ಯೋಚಿಸಿ ಮಾತನಾಡು ಎಂದು ಸಿಎಂ ಸಲಹೆ ನೀಡಿದ್ದರು.

Related Articles

Leave a Reply

Your email address will not be published. Required fields are marked *

Back to top button