ರಾಜ್ಯದ ಎಲ್ಲಾ ಪೌರಕಾರ್ಮಿಕರಿಗೆ ಖಾಯಂ ನೌಕರಿಗೆ ಅಧಿಸೂಚನೆ – ಬೊಮ್ಮಾಯಿ ಭರವಸೆ
ಪೌರ ಕಾರ್ಮಿಕರ ಆಪತ್ತು ನಿಧಿ ಹೆಚ್ಚಳ
ಬೆಂಗಳೂರಃ ರಾಜ್ಯದಲ್ಲಿ ಈಗಾಗಲೇ 11,136 ಪೌರ ಕಾರ್ಮಿಕರಿಗೆ ಖಾಯಂ ನೌಕರಿ ನೀಡಲು ಅಧಿಸೂಚನೆ ಹೊರಡಿಸಿದ್ದೇನೆ. ಉಳಿದವರಿಗೆ ಎರಡು ಮತ್ತು ಮೂರನೇಯ ಹಂತದಲ್ಲಿ ಕ್ರಮಕೈಗೊಳ್ಳಲಿದ್ದೇನೆ ಎಂದು ಸಿಎಂ ಬಸವರಾಜ
ಬೊಮ್ಮಾಯಿ ಅಭಯ ನೀಡಿದ್ದಾರೆ.
ಇಲ್ಲಿನ ಉತ್ತರ ಕಾನ್ಸಿರಾಂ ನಗರದಲ್ಲಿ ನೂತನವಾಗಿ ನಿರ್ಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದರು.
ಅಲ್ಲದೆ ಪೌರಕಾರ್ಮಿಕರ ಆಪತ್ತು ನಿಧಿಯನ್ನು 2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪೌರ ಕಾರ್ಮಿಕರ ನೌಕರಿ ಖಾಯಂಗೊಳಿಸಲು ಸಮಿತಿ ರಚನೆ ಮಾಡಿ ಅವರ ಶಿಫಾರಸ್ಸಿನ ಮೇರೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.